
ಮಡಿಕೇರಿ ಜು.15 NEWS DESK : ಭಾಗಮಂಡಲದಲ್ಲಿ ನೂತನ ಸಮುದಾಯ ಭನವ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಭಾಗಮಂಡಲ ನಾಡಗೌಡ ಸಮಾಜದ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಸಮಾಜದ ಪ್ರಮುಖರು, ಭಾಗಮಂಡಲ ಗ್ರಾಮದಲ್ಲಿ 1983 ರಲ್ಲಿ ನಿರ್ಮಿಸಿರುವ ಗೌಡ ಸಮುದಾಯ ಭವನದಲ್ಲಿ ಮೂಲ ಸೌಲಭ್ಯಗಳ ಕೊರತೆ ಇದ್ದು, ಭಾಗಮಂಡಲ ಭಾಗದಲ್ಲಿ ಏಕೈಕ ಸಮುದಾಯ ಭವನ ಇದಾಗಿದೆ. ಗೌಡ ಸಮಾಜ ಮತ್ತು ಎಲ್ಲಾ ಜಾತಿ-ಧರ್ಮದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನವಾಗಿ ಸಮುದಾಯ ಭವನ ನಿರ್ಮಿಸಲು ಅನುದಾನ ಮಂಜೂರು ಮಾಡಲು ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಅನುದಾನ ಮಂಜೂರು ಮಾಡುವ ಬಗ್ಗೆ ಭರವಸೆ ನೀಡಿದರು. ನಿಯೋಗದಲ್ಲಿ ಭಾಗಮಂಡಲ ನಾಡಗೌಡ ಸಮಾಜದ ಅಧ್ಯಕ್ಷ ಕುದ್ಪಾಜೆ ಪಿ.ಪಳಂಗಪ್ಪ, ಗೌಡ ಸಮಾಜದ ಪ್ರಮುಖರಾದ ಹೊಸೂರು ಸತೀಶ್ ಜೋಯಪ್ಪ, ಪ್ರಕಾಶ್ ಕುದ್ಪಾಜೆ, ದೇವಂಗೋಡಿ ಹರ್ಷ, ಕುಯ್ಯಮುಡಿ ರಂಜು ನಿಡ್ಯಮಲೆ ರವಿ, ಕುದ್ಪಾಜೆ ಗಗನ್, ನಿಡ್ಯಮಲೆ ದಾಮೋದರ, ಅಮೆ ಹರೀಶ್ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.








