
ನಾಪೋಕ್ಲು ಆ.2 NEWS DESK : ರಾಷ್ಟ್ರೀಯ ಮಹಿಳಾ ಜೂನಿಯರ್ ಹಾಕಿ ಕರ್ನಾಟಕ ತಂಡದ ಗೋಲ್ ಕೀಪರ್ ಆಗಿ ಕೊಡಗಿನ ಕುಂಜಿಲ ಗ್ರಾಮದ ಶ್ರಾವ್ಯ ದೇವಯ್ಯ ಆಯ್ಕೆಯಾಗಿದ್ದಾಳೆ. ಆಂಧ್ರ ಪ್ರದೇಶದ ಕಾಕಿನಾಡಲ್ಲಿ ಆ.12ರವರೆಗೆ ನಡೆಯಲಿರುವ ಪಂದ್ಯಾವಳಿಗೆ ಶ್ರಾವ್ಯ ದೇವಯ್ಯ ಆಯ್ಕೆ ಆಗಿರುವುದು ಕೊಡಗಿಗೆ ಹೆಮ್ಮೆಯ ವಿಷಯವಾಗಿದೆ. ತಮಿಳುನಾಡಿನ ತಿರುಪೂರ್ ಜಿ.ವಿ.ಜಿ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರಾವ್ಯ ಮುಂಬೈಯ ಎನ್.ಸಿ.ಓ.ಇ ತಂಡದಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಇವಳು ಕುಂಜಿಲ ಗ್ರಾಮದ ವಾಟೆಕಾಡು ನಿವಾಸಿ ದೇವಯ್ಯ ಹಾಗೂ ಚಿತ್ರ ದಂಪತಿಗಳ ಪುತ್ರಿ.
ವರದಿ : ದುಗ್ಗಳ ಸದಾನಂದ.









