
ನಾಪೋಕ್ಲು ಆ.2 NEWS DESK : ಕೊಳಕೇರಿ ಗ್ರಾಮದ ಕಾಫಿ ತೋಟದಲ್ಲಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪ್ರಜ್ವಲ್ ಕುಮಾರ್ ರಕ್ಷಿಸಿದ್ದಾರೆ. ನಾಪೋಕ್ಲು ಗ್ರಾಮ ಪಂಚಾಯಿತಿಯ ಕೊಳಕೇರಿ ಗ್ರಾಮದ ಕನ್ನಂಬೀರ ಪವನ್ ಪೂವಯ್ಯ ಎಂಬವರ ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವ ಸಂದರ್ಭ ಸುಮಾರು 14 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿದೆ. ಬಳಿಕ ಮೂರ್ನಾಡು ಕೋಡಂಬೂರು ವಿನ ಉರಗ ತಜ್ಞ ಪ್ರಜ್ವಲ್ ಕುಮಾರ್ ಅವರನ್ನು ಸಂಪರ್ಕಿಸಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪ್ರಜ್ವಲ್ ಕುಮಾರ್ ಹಾವನ್ನು ಹಿಡಿದು ಮಾಕುಟ ರಕ್ಷಿತಾ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಸಂದರ್ಭ ಕೊಳಕೇರಿ ಗ್ರಾಮ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಕುಂಡಿಯೋಳಂಡ ವಿಶು ಪೂವಯ್ಯ, ಕೇಟೋಳಿರ ಶಮ್ಮಿ ಸುಬ್ಬಯ್ಯ ಗ್ರಾಮದ ಹಿರಿಯರಾದ ಕನ್ನಂಬೀರ ಎನ್.ಚಂಗಪ್ಪ, ಕಾಂಡಂಡ ಚೋಂದವ್ವ, ಕುಂಡಿಯೋಳಂಡ ಜತ್ತಿ ಸುಬ್ಬಯ್ಯ ಸೇರಿದಂತೆ ಗ್ರಾಮಸ್ಥರು ಇದ್ದರು. ಹಾವುಗಳು ಕಂಡಬಂದಲ್ಲಿ ಅದನ್ನು ಕೊಲ್ಲದೆ ಮಾಹಿತಿ ನೀಡಿದರೆ ಅವುಗಳನ್ನು ರಕ್ಷಿಸಲಾಗುವುದು ಎಂದು ಉರಗ ತಜ್ಞ ಪ್ರಜ್ವಲ್ ಕುಮಾರ್ ತಿಳಿಸಿದರು. ಸಂಪರ್ಕಿಸಬೇಕಾದ ಸಂಖ್ಯೆ – 97403 04338
ವರದಿ : ದುಗ್ಗಳ ಸದಾನಂದ.








