
ಮಡಿಕೇರಿ ಆ.4 NEWS DESK : ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಒಕ್ಕೂಟ, ಮಡಿಕೇರಿ ಕೊಡವ ಕೇರಿಗಳ ಸಹಯೋಗದಲ್ಲಿ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ನಮ್ಮೆಯ ಒತ್ತೋರ್ಮೆ ಕೂಟ ನಡೆಯಿತು. ಕೊಡಗಿನ ಎಲ್ಲೆಡೆ ಆ.3ರಂದು ಸಾಂಪ್ರದಾಯಿಕವಾಗಿ ಆಚರಿಸಲಾಗುವ ಕಕ್ಕಡ ಸಂಪ್ರದಾಯವನ್ನು ಪುರುಷರು, ಮಹಿಳೆಯರು ಮಕ್ಕಳು ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಅತಿಥಿಗಳಿಂದ ಪೊಮ್ಮಡ ಕೂಟದ ಬ್ಯಾಡ್ಜ್ ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಕಕ್ಕಡ ನಮ್ಮೆ ಒಂದು ಸಂಭ್ರಮಾಚರಣೆಯಾಗಿದೆ. ಮಡಿಕೇರಿ ಪೊಮ್ಮಕ್ಕಡ ಕೂಟದ ಕಟ್ಟಡ ನಿರ್ಮಾಣಕ್ಕೆ 20 ಲಕ್ಕ ಅನುದಾನ ಹಾಗೂ ತಡೆಗೋಡೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಹಿಂದೆ ಪ್ರಾಯೋಗಿಕ ಆರೋಗ್ಯಕರ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯಯುತರಾಗಿದ್ದರು. ಈಗಿನ ಆಹಾರ ಪದ್ದತಿ ಬದಲಾವಣೆಗೊಂಡಿದೆ ಆದ್ದರಿಂದ ಎಲ್ಲರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಮಾತನಾಡಿ, ಕೊಡಗಿನ ಮೂಲ ಸಂಸ್ಕೃತಿಯಂತೆ ಮಳೆಗಾಲಪ್ರಾರಂಭವಾದೊಡನೆ ಗದ್ದೆಯಲ್ಲಿ ಉಳುಮೆ ಮಾಡಿ ಭತ್ತ ಬೆಳೆದು ಸೇವಿಸುತ್ತಿದ್ದರು. ಆ ಸಮಯದಲ್ಲಿ ಕಕ್ಕಡ ತಿಂಗಳಲ್ಲಿ ಮಳೆಯ ಚಳಿಗಾಳಿಗೆ ಮೈಯನ್ನು ಬೆಚ್ಚಗಿಸಿಕೊಳ್ಳಲು ಕಕ್ಕಡ 18 ರಂದು ವಿಶೇಷ ಖಾದ್ಯವನ್ನು ಸೇವಿಸುವುದೇ ಈ ಆಚರಣೆಯ ವಿಶೇಷ ಎಂದರು. ಕಾರ್ಯ ಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ವಂದಿಸಿದರು.
ಕಕ್ಕಡ ವಿಶೇಷ ಖಾಧ್ಯಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ ಸಮಾಜ ಸೇವಕಿ ಅಜ್ಜಿಕುಟ್ಟೀರ ಕಾಂಚನ್ ಪೊನ್ನಣ್ಣ ಮಾತನಾಡಿ, ಕಕ್ಕಡ ಆಚರಣೆ ಕೊಡಗಿನ ಸಂಪ್ರದಾಯಕ್ಕೆ ದ್ಯೋತಕ ವಾಗಿದೆಂದರು. ಮಡಿಕೇರಿ ಪೊಮ್ಮಕ್ಕ ಕೂಟದ ಕಾರ್ಯಕ್ಕೆ ಶ್ಲಾಘಿಸಿದರು. ನಮ್ಮ ಪೂರ್ವಿಕರು ನಮಗೆ ಬದುಕಿನ ಶಿಸ್ತಿನ ಜೊತೆಗೆ ಆಹಾರ ಪದ್ದತಿಯಲ್ಲಿಯೂ ಕೂಡ ಶಿಸ್ತನ್ನು ಬಳುವಳಿಯಾಗಿ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿನ ಪರಿಸರ ಹಾಗೂ ಹವಾಗುಣಕ್ಕನ್ನುಸಾರವಾಗಿ, ಕಾಲಕಾಲಕ್ಕೆ ವಿವಿಧ ಬಗೆಯ ಆಹಾರ ಬಳಕೆ ಮಾಡುವ ವಿಶಿಷ್ಟ ಸಂಪ್ರದಾಯವನ್ನು ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ತಿಳಿದುಕೊಂಡಿದ್ದರು ಎಂದರೆ, ಅವರ ಜಾಣ್ಮೆ ಹಾಗೂ ವೈಜ್ಞಾನಿಕ ಚಿಂತನೆಯನ್ನು ನಾವು ಮೆಚ್ಚಲೇ ಬೇಕು. ಮಳೆಗಾಲದಲ್ಲಿ ಆರೋಗ್ಯ ಕಾಪಾಡಲು ವೈವಿಧ್ಯಮಯ ಆಹಾರ ಬಳಕೆ ಮಾಡುತ್ತಿದ್ದು, ಇವುಗಳನ್ನು ಕಕ್ಕಡ ನಮ್ಮೆಯಲ್ಲಿ ಪ್ರದರ್ಶನಮಾಡಿ ನಮ್ಮ ಪರಂಪರೆಯನ್ನು ಮುಂದಿನ ಪೀಳಗೆಗೆ ಶಾಶ್ವತವಾಗಿ ಉಳಿಸಲು ಪೊಮ್ಮಕ್ಕಡ ಕೂಟದ ಪ್ರಯತ್ನ ಶ್ಲಾಘನೀಯ ಹಾಗೂ ಅತ್ಯಂತ ಸಮಯೋಚಿತ ಎಂದು ಕಾಂಚನ್ ಪೊನ್ನಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾಪರಿತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಮಾತನಾಡಿ, ಕೊಡವ ಸಮಾಜದ ಅಭಿವೃದ್ಧಿಗೆ ಕೊಡಗಿನ ಎರಡು ಶಾಸಕರು ಸಹಕಾರ ನೀಡುತ್ತಿದ್ದು ಎಲ್ಲರು ಕೈಜೋಡಿಸ ಬೇಕೆಂದರು. ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಪ್ಪ ಮಾತನಾಡಿ, ಊರು ನಾಡು ಕೇರಿ ಮಂದ್ ಮಾನಿಯಲ್ಲಿ ಕಲಿತ ಸಂಸ್ಕೃತಿ,ಆಚಾರ, ವಿಚಾರಗಳು ಇಂದು ಸಂಪ್ರದಾಯವಾಗಿ ನಡೆದು ಬಂದದ್ದು ವಿಶೇಷವಾಗಿದೆ. ಮಡಿಕೇರಿ ಕೊಡವ ಸಮಾಜದ ಪೊಮ್ಮಕಡ ಕೂಟದಲ್ಲಿ ಸ್ಥಳೀಯ ಮಹಿಳೆಯರು ಸದಸ್ಯರಾಗಿದ್ದು, ವಿವಿಧ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
ಪೊಮ್ಮಕ್ಕಡ ಕೂಟದ ಸದಸ್ಯರು ಹಾಗು ಮಕ್ಕಳಿಂದ ವಿವಿಧ ನೃತ್ಯ ಪ್ರದರ್ಶನ ಗೊಂಡಿತ್ತು. ಕಕ್ಕಡ ತಿಂಗಳ ವಿಶೇಷದ ಬಗ್ಗೆ ಅಜ್ಜಿಕುಟ್ಟೀರ ಸುನಿತಾ ಗಿರೀಶ್ ವಿಚಾರ ಮಂಡನೆ ಮಾಡಿದರು. ಸ್ಪರ್ಧಾ ತೀರ್ಪುಗಾರರಾಗಿ ಹಂಚೆಟ್ಟಿರ ಮನುಮುದ್ದಪ್ಪ, ನೆರವಂಡ ಡ್ಯೂಕ್, ಮೂವೇರ ಅನು ಸುರೇಶ್, ಚೌರಿರ ಹ್ರಶಿಕ ಶ್ಯಾಂ ನೆರವೆರಿಸಿದರು. ಪಾಲೆಯಂಡ ಕಾವ್ಯ ಪ್ರಾರ್ಥಿಸಿ ಕೊಡವ ಸಮಾಜ ಉಪಾಧ್ಯಕ್ಷ ರಾದ ಕೇಕಡ ವಿಜುದೇವಯ್ಯಸ್ವಾಗತಿಸಿ ಉಳ್ಳಿಯಂಡ ಸಚಿತ ಗಂಗಮ್ಮ ವಂದಿಸಿ ಚೋಕಿರ ಅನಿತಾ ನಿರೂಪಿಸಿದರು. ಅಂಜಪರವಂಡ ಉಷಾ ಅತಿಥಿಗಳ ಪರಿಚಯಿಸಿದರು.
ವೇದಿಯಲ್ಲಿ ಪದ್ಮಶ್ರೀ ವಿಜೇತೆ ಡಾ.ಐಮುಡಿಯಂಡ ರಾಣಿ ಮಾಚಯ್ಯ, ಅಜ್ಜಿಕುಟ್ಟೀರ ಸುನಿತಾಗಿರೀಶ್, ಮಂಡುವಂಡ ಮುತ್ತಪ್ಪ, ಶಾಂತೆಯಂಡ ವೀಣಾ ಅಚ್ಚಯ್ಯ,ಪೊಮ್ಮಕ್ಕಡ ಕೂಟದ ಅಧ್ಯಕ್ಷ ಕನ್ನಂಡ ಕವಿತ ಬೊಳ್ಳಪ್ಪ, ಕಾಂಚನ್ ಪೊನ್ನಣ್ಣ,ಡಾ.ಮಂತರ್ ಗೌಡ, ಕೇಕಡ ವಿಜುದೇವಯ್ಯ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು, ಮಡಿಕೇರಿ ಕೊಡವ ಕೇರಿಯ ಪದಾಧಿಕಾರಿಗಳು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರು, ವಿವಿಧ ಸಂಘ ಸಂಸ್ಥೆಯ ಸದಸ್ಯರು ಹಾಜರಿದ್ದರು. ವಿವಿಧ ಕ್ರೀಡೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಕ್ಕಡ ಮದ್ದ್ ಪಾಯಸ, ಮದ್ದ್ ಪುಟ್ಟ್,ಞಂಡ್ಕರಿ, ಪಂದಿಕರಿ, ಕೋಳಿಕರಿ
ವರದಿ: ಪುತ್ತರಿರ ಕರುಣ್ ಕಾಳಯ್ಯ










