Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ : ಉದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸ್ಪಷ್ಟನೆ*
  • *ಮುಂದಿನ ಒಂದು ವಾರ ರಾಜ್ಯಾದ್ಯಂತ ಮಳೆ ಅಬ್ಬರ ಸಾಧ್ಯತೆ: ಯಾವೆಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ? ಹವಾಮಾನ ಇಲಾಖೆ ರಿಪೋರ್ಟ್*
  • *ಗೋದಾವರಿ ನದಿಯಲ್ಲಿ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ದಾರುಣ ಅಂತ್ಯ*
  • *ಸುಂಟಿಕೊಪ್ಪ : ಶ್ರೀ ಕುರಂಭ (ಭಗವತಿ) ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*
  • *ಗೌಡಳ್ಳಿಯಲ್ಲಿ ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆ*
  • *ಕೊಡಗರಹಳ್ಳಿ : ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಯುಗಾದಿ*
  • *ಬಾಳುಗೋಡಿನಲ್ಲಿ ಲೇಔಟ್ ಕಾನೂನುಬದ್ಧವಾಗಿದೆ*
  • *ಒತ್ತುವರಿಯಾಗಿರುವ ದೇವಾಲಯದ ಜಾಗವನ್ನು ಒತ್ತುವರಿದಾರರು ಸ್ವಯಂ ಇಚ್ಛೆಯಿಂದ ತೆರವುಗೊಳಿಸಬೇಕು*
  • *ನಿಧನ ಸುದ್ದಿ*
  • *ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದರೆ ಧರಣಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಡಿಕೇರಿ : ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ, ಉಪಶಮನ ಆರೈಕೆ ಕೇಂದ್ರದ ಬಗ್ಗೆ ಅರಿವು ಕಾರ್ಯಕ್ರಮ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಡಿಕೇರಿ : ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ, ಉಪಶಮನ ಆರೈಕೆ ಕೇಂದ್ರದ ಬಗ್ಗೆ ಅರಿವು ಕಾರ್ಯಕ್ರಮ*

ಆಗಷ್ಟ್ 6, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.6 NEWS DESK : ಬಾಣೆಮೊಟ್ಟೆ ಮತ್ತು ರಾಘವೇಂದ್ರ ದೇವಸ್ಥಾನ ಅಂಗನವಾಡಿ ಕೇಂದ್ರಗಳಲ್ಲಿ ಸ್ತನ್ಯಪಾನ ಮತ್ತು ಉಪಶಮನ ಆರೈಕೆ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು. ನಗರಸಭೆ ಸದಸ್ಯ  ಎಸ್.ಸಿ.ಸತೀಶ್ ಮಾತನಾಡಿ, ಎರಡು ಕಾರ್ಯಕ್ರಮವು ಉತ್ತಮವಾದ ಸಂದೇಶವನ್ನು ಒಳಗೊಂಡಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.  ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ,  ಸ್ತನ್ಯಪಾನ ಸಪ್ತಾಹದ ಮಹತ್ವದ ಬಗ್ಗೆ, ಗರ್ಭಿಣಿ ಬಾಣಂತಿ ಮಗುವಿನ ಆರೈಕೆ ಪೌಷ್ಟಿಕ ಆಹಾರದ ಬಗ್ಗೆ ಹಾಗೂ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ವಿವರವಾಗಿ ತಿಳಿಸಿದರು.  ‘ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್’ ನ ಶೋಭಾ ಮಾತನಾಡಿ, ಈ ಸಂಸ್ಥೆ ಸ್ವಯಂ ಸೇವಾ ಸಂಸ್ಥೆಯಾಗಿದ್ದು, 1984 ರಿಂದ ಸರ್ಕಾರ, ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ರಾಜ್ಯಾದ್ಯಾಂತ ಆರೋಗ್ಯ, ಶಿಕ್ಷಣ, ಸಾಮಾಜಿಕ ಆರ್ಥಿಕ ಸಬಲೀಕರಣ ಕಾರ್ಯಕ್ರಮ ಮತ್ತು ತರಬೇತಿ ಹಾಗೂ ಸಂಶೋಧನೆ ಎಂಬ ನಾಲ್ಕು ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತಾ ಬರುತ್ತಿದೆ. 2018 ರಿಂದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯು ಕೊಡಗು ಜಿಲ್ಲೆಯಾದ್ಯಂತ ಆರೋಗ್ಯ, ಶಿಕ್ಷಣ, ತರಬೇತಿ ಮತ್ತು ಸಾಮಾಜಿಕ ಆರ್ಥಿಕ ಸಬಲೀಕರಣ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ಸರಿಯಷ್ಟೆ. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯು ಸರ್ಕಾರ ಮತ್ತು ಸಮುದಾಯದ ಸಹಕಾರದಿಂದ, ‘ಉಪಶಮನ ಆರೈಕೆ’ (Palliative Care) ಕಾರ್ಯಕ್ರಮವನ್ನು ಈಗಾಗಲೇ ಮೈಸೂರು, ಸರಗೂರು, ಹಾಸನ, ಬೆಂಗಳೂರು ಮತ್ತು ಧಾರವಾಡದಲ್ಲಿ ಅನುಷ್ಠಾನಗೊಳಿಸಿದ್ದು, ಈ ಕಾರ್ಯಕ್ರಮದ ವತಿಯಿಂದ ಕ್ಯಾನ್ಸರ್ ಮತ್ತು ಇನ್ನಿತರೇ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಮನೆಗೆ ಪ್ರತಿ ದಿನ ವೈದ್ಯರು, ನರ್ಸ್ಸ್, ಆಪ್ತಸಮಾಲೋಚಕರು, ಸಾಮಾಜಿಕ ಕಾರ್ಯಕರ್ತರ ತಂಡ ಭೇಟಿ ನೀಡಿ ರೋಗಿಗಳಿಗೆ ವೈದ್ಯಕೀಯ ಸೇವೆ, ಆಪ್ತಸಮಾಲೋಚನೆ, ಭಾವನಾತ್ಮಕ ಬೆಂಬಲ ಸೇವೆ, ಸಾಮಾಜಿಕ ಸವಲತ್ತು ಸೇವೆಗಳು, ಸಾಧನ ಸಲಕರಣೆ ವಿತರಣೆ ಮತ್ತು ಶಿಫಾರಸ್ಸು ಹಾಗೂ ಸಂಪರ್ಕ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು. ‘ಉಪಶಮನ ಆರೈಕೆ’ (Palliative Care) ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯು ಸರ್ಕಾರ ಮತ್ತು ಸಮುದಾಯದ ಸಹಕಾರದಿಂದ ಮಡಿಕೇರಿ ನಗರದಲ್ಲಿ ಮೇ 2024 ಮಾಹೆಯಿಂದ ಪ್ರಾರಂಭಿಸಲಾಗಿದ್ದು, ಇದುವರೆವಿಗೂ 106 ಫಲಾನುಭವಿಗಳು ನೋಂದಣಿಯಾಗಿರುತ್ತಾರೆ. ಇದು ಗೃಹ ಆಧಾರಿತ ಕಾರ್ಯಕ್ರಮವಾಗಿದ್ದು; ವೈದ್ಯರು, ನರ್ಸ್ ಮತ್ತು ಆರೋಗ್ಯ ಕಾರ್ಯಕರ್ತರವರುಗಳು ಪ್ರತೀ ದಿವಸ ಮನೆ ಭೇಟಿ ಮಾಡುವುದರ ಮೂಲಕ ಸೇವೆಯನ್ನು ನೀಡುತ್ತಿದೆ ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾದ ಅಮುದ, ಗೀತಾ ಸಹಾಯಕಿಯರಾದ ರೋಹಿಣಿ, ಅನಿತಾ,  ಆಶಾ ಕಾರ್ಯಕರ್ತೆಯಾದ ಸಾಯಿದಾಬಾನು, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಪಲ್ಲವಿ ಹಾಜರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ : ಉದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸ್ಪಷ್ಟನೆ*

ಮಾರ್ಚ್ 21, 2026

*ಮುಂದಿನ ಒಂದು ವಾರ ರಾಜ್ಯಾದ್ಯಂತ ಮಳೆ ಅಬ್ಬರ ಸಾಧ್ಯತೆ: ಯಾವೆಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ? ಹವಾಮಾನ ಇಲಾಖೆ ರಿಪೋರ್ಟ್*

ಮಾರ್ಚ್ 20, 2026

*ಗೋದಾವರಿ ನದಿಯಲ್ಲಿ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ದಾರುಣ ಅಂತ್ಯ*

ಮಾರ್ಚ್ 20, 2026

*ಮುಂದಿನ ಒಂದು ವಾರ ರಾಜ್ಯಾದ್ಯಂತ ಮಳೆ ಅಬ್ಬರ ಸಾಧ್ಯತೆ: ಯಾವೆಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ? ಹವಾಮಾನ ಇಲಾಖೆ ರಿಪೋರ್ಟ್*

ಮಾರ್ಚ್ 20, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ

ಬೆಂಗಳೂರು, ಮಾರ್ಚ್ 20, 2026: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಧಗಧಗಿಸುತ್ತಿದ್ದ ಬಿಸಿಲಿನ ಬೇಗೆಯ ನಡುವೆ ಈಗ…

*ಗೋದಾವರಿ ನದಿಯಲ್ಲಿ ಐವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ದಾರುಣ ಅಂತ್ಯ*

ಮಾರ್ಚ್ 20, 2026

*ಸುಂಟಿಕೊಪ್ಪ : ಶ್ರೀ ಕುರಂಭ (ಭಗವತಿ) ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*

ಮಾರ್ಚ್ 20, 2026

*ಗೌಡಳ್ಳಿಯಲ್ಲಿ ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆ*

ಮಾರ್ಚ್ 20, 2026

*ಕೊಡಗರಹಳ್ಳಿ : ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಯುಗಾದಿ*

ಮಾರ್ಚ್ 20, 2026

*ಬಾಳುಗೋಡಿನಲ್ಲಿ ಲೇಔಟ್ ಕಾನೂನುಬದ್ಧವಾಗಿದೆ*

ಮಾರ್ಚ್ 20, 2026

*ಒತ್ತುವರಿಯಾಗಿರುವ ದೇವಾಲಯದ ಜಾಗವನ್ನು ಒತ್ತುವರಿದಾರರು ಸ್ವಯಂ ಇಚ್ಛೆಯಿಂದ ತೆರವುಗೊಳಿಸಬೇಕು*

ಮಾರ್ಚ್ 20, 2026

*ನಿಧನ ಸುದ್ದಿ*

ಮಾರ್ಚ್ 20, 2026

*ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದರೆ ಧರಣಿ*

ಮಾರ್ಚ್ 20, 2026

*ತೊರೆನೂರು ಗ್ರಾಮದಲ್ಲಿ ಸಂಭ್ರಮದ ಹೊನ್ನಾರು ಉತ್ಸವ*

ಮಾರ್ಚ್ 20, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.