
ವಿರಾಜಪೇಟೆ ಆ.6 NEWS DESK : ವಿರಾಜಪೇಟೆ ತಾಲ್ಲೂಕಿನ ಕದನೂರಿನ ಸುಬೇದಾರ್ ಮೇಜರ್ ಕೈಬುಲಿರ ಡಾಲಿ ಅವರ ಅತ್ಯುತ್ತಮ ಸೇವೆಗಾಗಿ ಭಾರತೀಯ ಸೇನೆ ಜಿಒಸಿ-ಇನ್-ವೆಸ್ಟ್ರನ್ ಕಮಾಂಡ್ ಪುರಸ್ಕಾರ ನೀಡಿ ಗೌರವಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಕದನೂರು ಗ್ರಾಮದ ಮಾಜಿ ಸೈನಿಕ, ಹವಲ್ದಾರ್ ಎಂ.ಕೆ.ಸಲಾಂ, ಕೈಬುಲಿರ ಡಾಲಿ ಅವರು ದೇಶದ ವಿವಿಧ ಭಾಗದಲ್ಲಿ ಕರ್ತವ್ಯ ನಿರ್ವಹಿಸಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಅಮೂಲ್ಯ ಸೇವೆಯನ್ನು ತಾಯಿನಾಡಿಗಾಗಿ ನೀಡಿದ್ದರು. ಈ ಪುರಸ್ಕಾರದಿಂದ ಪ್ರಸಕ್ತ ಸುಬೆದಾರ್ ರ‍್ಯಾಂಕ್ ನಿಂದ ಸುಬೇದಾರ್ ಮೇಜರ್ ರ‍್ಯಾಂಕ್ ಗೆ ಬಡ್ತಿ ಹೊಂದಿದ್ದಾರೆ ಎಂದರು. ಪ್ರಸ್ತುತ ಜಮ್ಮು ಕಾಶ್ಮೀರದ ಉದಂಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಬೇದಾರ್ ಮೇಜರ್ ಡಾಲಿ ಅವರು 10.3.1996 ರಲ್ಲಿ ಭಾರತಿಯ ಸೇನೆಗೆ ಪಾದಾರ್ಪಣೆ ಮಾಡಿ ಎರಡು ವರ್ಷಗಳ ಬಳಿಕ ಮದ್ರಾಸ್ ಎಂಜಿನಿಯರ್ ರೆಜಿಮೆಂಟ್‍ನಲ್ಲಿ ಪೊಸ್ಟಿಂಗ್ ಪಡೆದುಕೊಂಡರು. ಇವರು ಕೈಬುಲಿರ ವಿಠಲ ಹಾಗೂ ನಿಲಮ್ಮ ಅವರ ಪುತ್ರ. ಮುಂದೆ ಇವರ ಅತ್ಯುತ್ತಮ ಸೇವೆ ಭಾರತಾಂಭೆಯ ರಕ್ಷಣೆಗೆ ಒದಗಿ ರಾಷ್ಟ್ರ, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸುವಂತಾಗಬೇಕು ಎಂದು ಮಾಜಿ ಸೈನಿಕ ಸಲಾಂ ಹಾರೈಸಿದರು.









