
ಮಡಿಕೇರಿ ಆ.7 NEWS DESK : ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 166ನೇ ರಾಜ್ಯ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-2025 ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ 67 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶೇ.100ರಷ್ಟು ಫಲಿತಾಂಶದೊಂದಿಗೆ 36 ಚಾಂಪಿಯನ್ ಟ್ರೋಫಿ, 22 ಚಿನ್ನದ ಪದಕ ಮತ್ತು 9 ಬೆಳ್ಳಿಯ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ಕರ್ನಾಟಕದ ಒಟ್ಟು 80 ಬ್ರೈನೋಬ್ರೈನ್ ಕೇಂದ್ರಗಳಿಂದ ಸುಮಾರು 2100 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದ 67 ವಿದ್ಯಾರ್ಥಿಗಳು ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದರು. ಕೇವಲ 3 ನಿಮಿಷಗಳಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಮಡಿಕೇರಿ ‘ಬ್ರೈನೋಬ್ರೈನ್’ ಕೇಂದ್ರಕ್ಕೆ “ಬೆಸ್ಟ್ ಪ್ರಾಂಚೈಸಿ” ಮತ್ತು “ಬೆಸ್ಟ್ ಫ್ಯಾಕಲ್ಟಿ” ಪ್ರಶಸ್ತಿ ಲಭಿಸಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಸಾಧನೆಯ ಹೆಗ್ಗಳಿಕೆಯು ತಮ್ಮ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಲ್ಲಬೇಕು, ಈ ಅದ್ಭುತ ಯಶಸ್ಸಿಗೆ ಕಾರಣಕರ್ತರಾದ ಮಕ್ಕಳಿಗೆ ಹಾಗೂ ಮುತುವರ್ಜಿ ವಹಿಸಿ ಬೆಂಗಳೂರಿಗೆ ಕರೆತಂದ ಪೋಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ತಿಳಿಸಿದ್ದಾರೆ.
166ನೇ ರಾಜ್ಯ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-2025 ರಲ್ಲಿ ‘ಬ್ರೈನೋಬ್ರೈನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಹಾಗೂ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕ ನೀಲ್ ಕಮಲ್ ಸ್ವರ್ಣಾಕರ್ ಉಪಸ್ಥಿತರಿದ್ದು, ಮಡಿಕೇರಿ ಬ್ರೈನೋಬ್ರೈನ್ ಕೇಂದ್ರದ ಮಕ್ಕಳ ಅತ್ಯುತ್ತಮ ಸಾಧನೆಯನ್ನು ಶ್ಲಾಘೀಸಿದರು. *ಚಾಂಪಿಯನ್ ಟ್ರೋಫಿ ವಿಜೇತರು* ಪಿ.ಎಸ್.ಅದಿತಿ, ಹೆಚ್.ಆರ್.ಭುವನ್, ಕನಿಷ ಸುನಿತ್ ಕುಮಾರ್, ನಿಲ್ಹಾ ಜೆ.ತಾರಕನ್, ಎ.ಎಲ್.ಪರೀಕ್ಷ, ಪಾವನಿ ಕೆ ಕುಂದರ್, ಬಿ.ಡಿ.ರಿಯಾನ್ ಪೊನ್ನಪ್ಪ, ಎಂ.ರಿಯಾಂಕ, ಹೆಚ್.ಹೆಚ್.ವಿಕಾಸ್, ಅಭಿನವ್ ಕೃಷ್.ಜಿ., ಕೆ.ಸಿ.ಆರಾಧ್ಯ, ಏಡನ್ ಜೆ.ತಾರಕನ್, ಚಾರ್ವಿ ಎಸ್.ಎ.ದೇಚಮ್ಮ, ದೃಪದ್ ಪಿ ಮಣಿಕೋಥ್, ಎಂ.ಕೆ.ಹರ್ಷಿಣಿ, ಲಿವ್ಯ ಸುನಿತ್ ಕುಮಾರ್, ಎಂ.ಮಯಾಂಕ್, ಶೌರ್ಯ ಎಸ್.ವಿ ಕುಡ್ತೇಕರ್, ಎಂ.ಪಿ.ಯಾನ್ವಿ ಬೋಜಮ್ಮ, ಕೆ.ಎ.ತನಿಷ್ಕ, ಎಂ.ಭುವನ್ ತಿಮ್ಮಯ್ಯ, ಜಾರ್ಜ್ ಮ್ಯಾಥ್ಯು, ಕೋಸಗಿ ಸಮರ್ಥ್ ಸಾಮ್ರಾಟ್, ಮಿಯಾ ಅರುಣ್, ನಮನ್ ಎಂ.ಗೌಡ, ಸಮರ್ಥ್ ಆರ್, ವೈ.ಬಿ.ದಿವ್ಯ, ಎ.ಪಿ.ಜೆಶ್ವಿತ ತಂಗಮ್ಮ, ಬಿ.ಎಲ್.ಪ್ರಥಮ್ ಚಿಣ್ಣಪ್ಪ, ಎಸ್.ಕೆ.ಸಮರ್ಥ್ ಗಣಪತಿ, ಪಿ.ಧೃವತೇಜ್, ಪಿ.ಸಿ.ಕನಿಷ್ಕ, ಬಿ.ಆರ್.ಲಕ್ಷಿತ, ಪಿ.ಜೆ.ರುಶಾಲಿ, ಎಸ್.ಕೆ.ಪರಾಗ್ ದೇವಯ್ಯ, ಟಿ.ಬಿ.ಅಫನ್ ಅಹಮದ್. *ಚಿನ್ನದ ಪದಕ ವಿಜೇತರು* ವೈ.ಡಿ.ಕುಶನ್ ದೇವಪ್ಪ, ಜೊಹನ್ನಾ ಮಡ್ತಾ, ನಿಧಿ ಆರ್ ಅಣ್ವೇಕರ್, ಬಿ.ಎಂ.ಧನ್ವಿ ಪೂವಮ್ಮ, ಬಿ.ಎಂ.ಧನ್ವಿನ್ ಪೂವಣ್ಣ, ಪೂಜನ್ ಗೌಡ ಎಂ.ಎ, ಕೆ.ಎಸ್.ಯಶ್ವಿನ್, ಯಶ್‍ರಾಜ್ ಅಣ್ವೇಕರ್, ಕೋಸಗಿ ಸಾತ್ವಿಕ್ ಸಮರ್ಥ್, ಕೆ.ಎಲ್.ಲಿಖಿತ್ ಸೋಮಣ್ಣ, ಬಿ.ಎಲ್.ಲಿನಿತ್, ಪ್ರಧಾನ್ ಶತಾಯುಷ್, ಯು.ಆರ್.ಶಿವಕುಮಾರ್, ಎಂ.ಆರ್.ಸೃಷ್ಟಿ, ಎಸ್.ಯಶಿಕ, ಬಿ.ವೈ.ಸಂಹಿತ ಶೆಟ್ಟಿ, ಪಿ.ಸಿ.ಸೋನ್ ಸೋಮಣ್ಣ, ಎಸ್.ಅನ್ವಿತ್, ಕೆ.ಸಿ.ಆರುಷಿ, ಪಿ.ಎಸ್.ಮೌರ್ಯ ನಂಜಪ್ಪ, ಕೆ.ಎಂ.ವಂಶಿ, ಟಿ.ಎಂ.ಪ್ರೀತಂ. *ಬೆಳ್ಳಿ ಪದಕ ವಿಜೇತರು* ಸಿ.ವಿ.ಗಾನವಿ ಗಂಗಮ್ಮ, ಎಸ್.ಮನ್ವಿತ, ಟಿ.ಎಂ.ಪ್ರೇಕ್ಷ, ಕೆ.ಎಂ.ನಿಂಶಿ, ಬಿ.ಆರ್.ಚಾರ್ವಿ, ಎನ್.ದೀಕ್ಷ ಭರತ್, ಬಿ.ವೈ.ಹಿತ ಶೆಟ್ಟಿ, ಬಿ.ಎಸ್.ಮೋನಿಷ್, ಬಿ.ಆರ್.ಶಾನ್ ಪ್ರಥಮ್.













