
ಸುಂಟಿಕೊಪ್ಪ ಆ.8 NEWS DESK : ಸಂತ ಮೇರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘ ಉದ್ಘಾಟನೆಗೊಂಡಿತು.
ಸಂತ ಮೇರಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಟ್ಟಗೇರಿ ಸಮೂಹ ಕಾಫಿ ತೋಟಗಳ ಮಾಲೀಕರು ಮತ್ತು ಉದ್ಯಮಿಗಳಾದ ದೊಡ್ಡಮನೆ ವಿಶಾಲ್ ಶಿವಪ್ಪ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ಮತ್ತು ಬದುಕಿಗೆ ವಿದ್ಯಾಭ್ಯಾಸ ಮೂಲ ಆಧಾರ. ವಿದ್ಯಾಭ್ಯಾಸವು ಪಠ್ಯವನ್ನು ಮಾತ್ರವಲ್ಲದೆ ಕ್ರೀಡೆಯನ್ನು ಒಳಗೊಂಡಿದೆ. ಸಾಧನೆ ಮತ್ತು ಒಳ್ಳೆಯ ಬದುಕಿಗೆ ಏಕಾಗ್ರತೆ, ಕಠಿಣ ಪರಿಶ್ರಮ ಅಗತ್ಯ ಎಂದರು. ಯಾವುದೇ ಸಂದರ್ಭದಲ್ಲೂ ಆಸೆ ಆಮೀಷಗಳಿಗೆ ಬಲಿಯಾಗದಂತೆ ಸಲಹೆ ನೀಡಿದರು. ಜೊತೆಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ ಸುಪುಷ್ಠದೇಹದಲ್ಲಿ ಸುಪುಷ್ಠ ಮನಸ್ಸು ಎಂಬ ಗ್ರೀಕ್ ನಾಣ್ಣುಡಿಯಂತೆ ಸದಾ ಎಚ್ಚರವಹಿಸಲು ಅವರು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಮೇರಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕರಾದ ರೇ.ಪಾ.ವಿಜಯಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಸಿಸ್ಟರ್ ಜೋವಿಟಾವಾಸ್ ಮತ್ತು ಸಂತ ಮೇರಿ ಶಿಕ್ಷಣ ಸಂಸ್ಥೆಯ ಮುಖ್ಯೋಪಾದ್ಯಾಯರಾದ ಸೆಲ್ವರಾಜ್ ಪಾಲ್ಗೊಂಡಿದ್ದರು. ಶಿಕ್ಷಣ ಸಂಸ್ಥೆಗಳ ವತಿಯಿಂದ ಶಿಸ್ತುಬದ್ಧ ಪಥಸಂಚಲನ ಮತ್ತು ಅತಿಥಿಗಳಿಗೆ ಗೌರವ ವಂದನೆಯನ್ನು ಸಲ್ಲಿಸಲಾಯಿತು.








