
ಮಡಿಕೇರಿ ಆ.13 NEWS DESK : ಕಾಸರಗೋಡು ಕನ್ನಡ ಭವನದ ಕೊಡಗು ಜಿಲ್ಲಾ ಸಮಿತಿಯ, ತಾಲ್ಲೂಕು ಘಟಕವಾದ ಕುಶಾಲನಗರ ಚುಟುಕು ಸಾಹಿತ್ಯ ಪರಿಷತ್ತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೊಡಗು ಕನ್ನಡ ಭವನ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ತಿಳಿಸಿದ್ದಾರೆ. ಗೌರವ ಅಧ್ಯಕ್ಷರಾಗಿ ಬೊಳ್ಳಜಿರ ಬಿ.ಅಯ್ಯಪ್ಪ, ಅಧ್ಯಕ್ಷರಾಗಿ ಹೆಚ್.ಬಿ.ದಿನೇಶ್ ಚಾರಿ, ಉಪಾಧ್ಯಕ್ಷರಾಗಿ ಕೆ.ಶಾಂತಕುಮಾರ್, ಎನ್.ಕೆ.ಮಾಲಾದೇವಿ , ಪ್ರಧಾನ ಕಾರ್ಯದರ್ಶಿಯಾಗಿ ಕೆ.ವಿ.ಅಮೃತ, ಸಹಕಾರ್ಯದರ್ಶಿಯಾಗಿ ಕೆ.ಆರ್.ರಮೇಶ್, ಕೋಶಾಧಿಕಾರಿಯಾಗಿ ಬರಮಣ್ಣ ಟಿ ಬೆಟ್ಟಗೇರಿ ಹಾಗೂ ನಿರ್ದೇಶಕರಾಗಿ ಕೆ.ಎಸ್.ಚಂದ್ರಶೇಖರ್, ಎಸ್.ಎಸ್.ಅಂಕಿತಾ, ಮಂಜುನಾಥ್, ಪ್ರಕಾಶ್, ಎಸ್.ಹೆಚ್.ಶಿಲ್ಪ, ಎಮ್.ಎಸ್.ದೀಪಿಕಾ , ಬಸವರಾಜ್ ಹಾಗೂ ಮನು ಅವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಕಾರ್ಯಕ್ರಮದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಚಂದನ್ ನಂದರಬೆಟ್ಟು ತಿಳಿಸಿದ್ದಾರೆ.








