


ಮಡಿಕೇರಿ ಆ.15 NEWS DESK : ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ವಿಶ್ವಮಾನವ ಉದ್ಯಾನವನದಲ್ಲಿ ಅಹಿಂದ ಮಾಜಿ ಅಧ್ಯಕ್ಷರಾದ ಮುದ್ದಯ್ಯ ಧ್ವಜಾರೋಹಣ ನೆರವೇರಿಸಿದರು. ಸಮಾಜ ಸೇವಕರಾದ ಪ್ರಭು ರೈ ಅವರು ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಪುರಸಭೆ ಮಾಜಿ ಉಪಾಧ್ಯಕ್ಷರಾದ ಟಿ.ಎಂ.ಅಯ್ಯಪ್ಪ ಮಾತನಾಡಿ, ಸ್ವಾತಂತ್ರ ದಿನದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ರವಿಗೌಡ, ಮಹಿಳಾ ಅಧ್ಯಕ್ಷರಾದ ಕವಿತಾ ಪ್ರಸಾದ್, ಕಾರ್ಮಿಕ ಘಟಕದ ಅಧ್ಯಕ್ಷರಾದ ದಿವ್ಯ, ರೂಪ, ಮಡಿಕೇರಿ ನಗರ ಅಧ್ಯಕ್ಷರಾದ ಭರತ್, ಸಮಾಜ ಸೇವಕರಾದ ಕಲೀಲ್ ಭಾಷಾ, ರಾಷ್ಟ್ರೀಯ ಅಪರಾಧ ಮಾಹಿತಿ ವಿಭಾಗದ ಕರ್ನಾಟಕ ಡೆಪ್ಯೂಟಿ ಡೈರೆಕ್ಟರ್ ರಾಧಾ ಡಾ.ಜಾನ್ಸನ್, ಫೀಲ್ ಮಾರ್ಷಲ್ ಕಾರ್ಯಪ್ಪ ಅಭಿಮಾನಿ ಸಂಘದ ಅಧ್ಯಕ್ಷ ಮುನೀರ್ ಮಾಚರ್, ವೇದಿಕೆ ಸದಸ್ಯರುಗಳಾದ ಪುನೀತ್ ಜಿ.ಎನ್., ಹರ್ಷಿತ್ ಕುಮಾರ್, ಸೈಮನ್, ಎಂ.ಹೆಚ್.ಹಫೀಜ್ ಹಾಗೂ ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು. ವೇದಿಕೆ ಮಡಿಕೇರಿ ತಾಲ್ಲೂಕು ಕಾರ್ಯದರ್ಶಿ ಅಕ್ಷಿತ್ ಸ್ವಾಗತಿಸಿದರು. ತಾಲ್ಲೂಕು ಉಪಾಧ್ಯಕ್ಷ ನಾಗೇಶ್ ವಂದಿಸಿದರು.








