ಮಡಿಕೇರಿ, ಆ.15 NEWS DESK : ಕೊಡಗು ಪತ್ರಿಕಾ ಭವನ ಟ್ರಸ್ಟ್‌ನಿಂದ 79ನೇ ಸ್ವಾತಂತ್ರ್ಯೋತ್ಸವವನ್ನು ಪತ್ರಿಕಾ ಭವನದಲ್ಲಿ ತ್ರ್ರಿವರ್ಣ ಧ್ವಜಾರೋಹಣ ನಡೆಸುವ ಮೂಲಕ ಆಚರಿಸಲಾಯಿತು. ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿಗಳಾದ ಟಿ.ಪಿ.ರಮೇಶ್ ಅವರು ಧ್ವಜಾ ರೋಹಣವನ್ನು ನೆರವೇರಿಸಿ, ಶುಭ ಹಾರೈಸಿದರು. ಈ ಸಂದರ್ಭ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಹಿರಿಯ ಟ್ರಸ್ಟಿಗಳಾದ ವಿ.ಪಿ.ಸುರೇಶ್, ಕೊಡಗು ಪತ್ರಕರ್ತರ ಸಂಘದ ಸದಸ್ಯರಾದ ಶಿವಪ್ಪ, ಪತ್ರಿಕಾ ಭವನದ ಸಿಬ್ಬಂದಿಗಳಾದ ರಾಜೇಶ್, ಶೈನಿ ಮೊದಲಾದವರು ಪಾಲ್ಗೊಂಡಿದ್ದರು.











