
ಮಡಿಕೇರಿ ಆ.16 NEWS DESK : ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಕಾರ್ಯಾರಂಭಿಸಲಿರುವ ಸಂಚಾರಿ ಮಲತ್ಯಾಜ್ಯ ಸಂಸ್ಕರಣಾ ಘಟಕ (ಮೊಬೈಲ್ ಸೆಪ್ಟೇಜ್ ಟ್ರೀಟ್ ಮೆಂಟ್ ಯುನಿಟ್) (ಎಂ.ಟಿ.ಯು) ವಾಹನಗಳನ್ನು ಕೊಡಗು ಜಿಲ್ಲಾ ಉಸ್ತವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಉದ್ಘಾಟಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ, ಸ್ವಚ್ಛ ಭಾರತ್ ಕೋμï ಟ್ರಸ್ಟ್, ಸ್ವಚ್ಛ ಭಾರತ್ ಮಿಷನ್ (ಗ್ರಾ.) ಮತ್ತು ಕೊಡಗು ಜಿಲ್ಲಾಪಂಚಾಯತ್ ಸಹಯೋಗದೊಂದಿಗೆ ಕಾರ್ಯಾರಂಭಿಸಲಿರುವ 3 ಮೊಬೈಲ್ ಸೆಪ್ಟೇಜ್ ಟ್ರೀಟ್ ಮೆಂಟ್ ಯುನಿಟ್ (ಎಂ.ಟಿ.ಯು) ವಾಹನಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಸಿರು ನಿಶಾನೆ ತೋರಿದರು. :: ಏನಿದು ಮೊಬೈಲ್ ಸೆಪ್ಟೇಜ್ ಟ್ರೀಟ್ ಮೆಂಟ್ ಯುನಿಟ್ :: ಕೊಡಗು ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಸಂಚಾರಿ ಮಲತ್ಯಾಜ್ಯ ಸಂಸ್ಕರಣಾ ವಾಹನಗಳನ್ನು ಪರಿಚಯಿಸಿದೆ. ಜಿಲ್ಲೆಯಲ್ಲಿ ಈಗಾಗಲೇ ಮಡಿಕೇರಿ ತಾಲೂಕಿನ ಭಾಗಮಂಡಲ ಮತ್ತು ಕುಶಾಲನಗರ ತಾಲೂಕಿನ ಸುಂಟಿಕೊಪ್ಪದಲ್ಲಿ ಮಲತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಾಣಮಾಡಿ ಕಾರ್ಯಾರಂಭಿಸಲಾಗಿದೆ. ಮಲತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಒಂದು ಬಾರಿ ಮಲತ್ಯಾಜ್ಯ ಸಂಸ್ಕರಣೆಕೊಂಡು ಘನ ಮತ್ತು ದ್ರವ ತ್ಯಾಜ್ಯಗಳು ಸಂಪೂರ್ಣವಾಗಿ ಪ್ರತ್ಯೇಕಗೊಂಡು ಸಂಸ್ಕರಣೆಯಾಗಲು ಕನಿಷ್ಟ 3 ತಿಂಗಳ ಸಮಯಾವಕಾಶ ಬೇಕಾಗುತ್ತದೆ. ಆದರೆ ಸಂಚಾರಿ ಮಲತ್ಯಾಜ್ಯ ಸಂಸ್ಕರಣಾ ವಾಹನ ಈ ಕಾರ್ಯವನ್ನು ಕೆಲವೇ ಗಂಟೆಗಳಲ್ಲಿ ಮಾಡುತ್ತದೆ. ಇದು ಪ್ರತ್ಯೇಕಿಸುವ ಮಲತ್ಯಾಜ್ಯದಲ್ಲಿನ ನೀರನ್ನು ಶೇ.60-70 ರಷ್ಟು ಶುದ್ಧೀಕರಿಸುತ್ತದೆ. ಈ ನೀರು ಕುಡಿಯಲು ಯೋಗ್ಯವಲ್ಲ, ಆದರೆ ತೋಟಗಳಿಗೆ ಮತ್ತು ಗಿಡಗಳಿಗೆ ಬಳಸಬಹುದಾಗಿದೆ. ಇಲ್ಲವಾದರೆ ನೇರವಾಗಿ ಚರಂಡಿಗೆ ಹರಿಯ ಬಿಡಬಹುದಾಗಿದೆ. ಸಂಸ್ಕರಣೆಯ ನಂತರ ಉಳಿಯುವ ಮಲಹೂಳು(ಮಲತ್ಯಾಜ್ಯ) ಶೇ.80ರಷ್ಟು ಸಂಸ್ಕರಣೆಗೊಂಡಿರುತ್ತದೆ. (ಡಿಕಂಪೆÇೀಸ್) ಇದನ್ನು ಮಲತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ರವಾನಿಸಿಗೊಬ್ಬರ ತಯಾರಿಕೆಯಲ್ಲಿ ಬಳಸಬಹುದಾಗಿರುತ್ತದೆ. :: ಅನುದಾನ ವೆಚ್ಚ :: ಜಿಲ್ಲೆಯಲ್ಲಿ ಈಗಾಗಲೇ ಮೂರು ವಾಹನಗಳು ಕಾರ್ಯಾರಂಭಿಸಲಿದ್ದು, ಪ್ರತಿ ವಾಹನಕ್ಕೆ ರೂ 30 ಲಕ್ಷ ವೆಚ್ಚ ಮಾಡಲಾಗಿದ್ದು, ಒಟ್ಟು ರೂ.90 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ. ಈ ಅನುದಾನವನ್ನು ಸಂಪೂರ್ಣವಾಗಿ ಸ್ವಚ್ಛ ಭಾರತ್ ಕೋಶ್ ಟ್ರಸ್ಟ್ ನಿಂದ ಭರಿಸಲಾಗಿದೆ. :: ಎಲ್ಲೆಲ್ಲಿ ಕಾರ್ಯಾಚರಣೆ :: ಜಿಲ್ಲೆಯ ಕುಟ್ಟ, ನಾಪೆÇೀಕ್ಲು ಮತ್ತು ಶನಿವಾರ ಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಈ ಸಂಚಾರಿ ಮಲ ತ್ಯಾಜ್ಯ ಸಂಸ್ಕರಣಾ ವಾಹನ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಲ್ಲಿ ಗ್ರಾ.ಪಂ.ಮಾತ್ರವಲ್ಲದೆ ತಾಲೂಕು ವ್ಯಾಪ್ತಿಯಲ್ಲಿಯೂ ಇದು ಸೇವೆಗೆ ಲಭ್ಯವಾಗಲಿದೆ. :: ಇತರೆ ಜಿಲ್ಲೆಗಳಿಗೆ ಮಾದರಿ :: ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಈ ಸಂಚಾರಿ ಮಲತ್ಯಾಜ್ಯ ಸಂಸ್ಕರಣಾ ವಾಹನಗಳು ಕಾರ್ಯನಿರ್ವಹಿಸಲಿದ್ದು, ರಾಜ್ಯದ ಇತರ ಜಿಲ್ಲೆಗಳೂ ಸಹ ಇದರಿಂದ ಸ್ಫೂರ್ತಿ ಪಡೆದು ಮುಂದಿನ ದಿನಗಳಲ್ಲಿ ಮತ್ತಷ್ಟು ಕಡೆ ಈ ವಾಹನದ ಸೌಲಭ್ಯ ದೊರೆಯಲಿದೆ. :: ವಿಶೇಷತೆ :: ಈ ವಾಹನದ ಸಾಮಥ್ರ್ಯ 6 ಕಿಲೋ ಲೀಟರ್ ಪರ್ ಡೇ ಆಗಿದ್ದು, ಮಲತ್ಯಾಜ್ಯ ಸಂಸ್ಕರಣೆ, ನಿರ್ವಹಣೆ ಮತ್ತು ವಿಲೇವಾರಿ ಮಾಡಲು ಎಫ್‍ಎಸ್‍ಟಿ.ಪಿಗೆ ತರುವ ಅವಶ್ಯಕತೆ ಇಲ್ಲ. ಸಂಚಾರಿ ಮಲತ್ಯಾಜ್ಯ ಸಂಸ್ಕರಣಾ ವಾಹನದಲ್ಲಿಯೇ ಈ ಪ್ರಕ್ರಿಯೆ ನಡೆಯುತ್ತದೆ. ಇದಕ್ಕೆ ಬೇಕಾದ ಸಂಪೂರ್ಣ ಪರಿಕರಗಳ ವ್ಯವಸ್ಥೆಯು ವಾಹನದಲ್ಲಿಯೇ ಇರಲಿದ್ದು, ಯಾವುದೇ ಸ್ಥಳಕ್ಕೆ ತೆರಳಿ ಸಂಸ್ಕರಣಾ ಕಾರ್ಯ ನಿರ್ವಹಿಸಲು ಪೂರಕವಾಗಿರುತ್ತದೆ.









