
ಮಡಿಕೇರಿ ಆ.25 NEWS DESK : ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ನ ಕೊಡಗು ಶಾಖೆ ವತಿಯಿಂದ ರಾಜ್ಯಮಟ್ಟದ ಕ್ರೀಡೋತ್ಸವ ನಡೆಯಿತು. ನಗರದ ಜಿಲ್ಲಾ ಒಳಂಗಾಣ ಕ್ರೀಡಾಂಗಣದಲ್ಲಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧಡೆಯಿಂದ ಆಗಮಿಸಿದ 50ಕ್ಕೂ ಹೆಚ್ಚಿನ ವೈದ್ಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ವೈದ್ಯರಿಗಾಗಿ ಶಟಲ್ ನಲ್ಲಿ ಪುರುಷರು, ಮಹಿಳೆಯರು, ವಿದ್ಯಾರ್ಥಿಗಳ ವಿಭಾಗ ಹಾಗೂ ಸಂಘಟಿತ ವಿಭಾಗದಲ್ಲಿ ಕ್ರೀಡಾಸ್ಪಧೆ೯ಗಳು ಜರುಗಿದವು. ಇದರೊಂದಿಗೆ ಚೆಸ್ ಹಾಗೂ ಕೇರಂ ಸ್ಪರ್ಧೆಗಳು ಕೂಡ ಆಯೋಜಿಸಲ್ಪಟ್ಟಿದ್ದವು. ಅ.18 ನಡೆಯಲಿರುವ ಬೆಳ್ಳಿ ಹಬ್ಬದ ಆಚರಣೆಯಂದು ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ.








