
ಗೋಣಿಕೊಪ್ಪ NEWS DESK ಸೆ.4 : ಕೊಡಗು ಜಿಲ್ಲಾ ಶಾಲಾ ಶಿಕ್ಷಣ, ಸಾಕ್ಷರತಾ ಇಲಾಖೆ ನೀಡುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ವಿರಾಜಪೇಟೆ ತಾಲೂಕು ದೇವಣಗೇರಿ ಬಿಸಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ್ ಹೆಚ್ .ಡಿ ಭಾಜನರಾಗಿದ್ದಾರೆ. ಲೋಕೇಶ್ ಅವರು ಬಿಸಿ ಪ್ರೌಢಶಾಲೆ ದೇವಣಗೇರಿಯಲ್ಲಿ ಕಳೆದ 18 ವರ್ಷಗಳಿಂದ ಆಂಗ್ಲಭಾಷೆ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ 13 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಉನ್ನತೀಕರಣಕ್ಕೆ ಶ್ರಮಿಸುತ್ತಿರುವ ಇವರು 10ನೇ ತರಗತಿ ಪರೀಕ್ಷೆ ಪಲಿತಾಶವನ್ನು ಸುತತ ಎಂಟು ವರ್ಷಗಳ ಕಾಲ ನಿರಂತರವಾಗಿ ಶೇಕಡಾ ನೂರರಷ್ಟು ನೀಡಿದ ಹೆಗ್ಗಳಿಕೆ ಇದೆ. ಇವರೊಂದಿಗೆ, ವಿರಾಜಪೇಟೆ ತಾಲ್ಲೂಕಿನ ಎಮ್ಮೆಗುಂಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎ.ಕೆ. ಮಾಚಮ್ಮ, ಚೆನ್ನಂಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಷಾ ಕೆ.ಕೆ.ಮತ್ತು ಮಡಿಕೇರಿ ತಾಲೂಕಿನ ಮೊಣಕಾಲ್ಮುರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಾಲಿನಿ, ಅರೆಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮೀನಾಕ್ಷಿ ಎ.ಡಿ, ಹಾಕತ್ತೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ವನಜ ಎಂ, ಸೋಮವಾರಪೇಟೆ ತಾಲೂಕಿನ ಬಡುಬನಹಳ್ಳಿಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಜಾನ್ಸಿ ಕೆ.ವಿ, ಕೂಡಿಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಯೋಗೇಶ್ ಎಸ್.ಎ, ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ರಬ್ ಎಂ.ಎಸ್. ಪಡೆದುಕೊಂಡಿದ್ದಾರೆ. ಸೆಪ್ಟಂಬರ್ 5ರಂದು ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಇವರಿಗೆ ಪ್ರಶಸ್ತಿ ಪ್ರಧಾನ ಜಿಲ್ಲ ಆಡಳಿತದಿಂದ ನಡೆಯಲಿದೆ.









