
ಮಡಿಕೇರಿ ಸೆ.23 NEWS DESK : ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಭೇಟಿ ನೀಡಿದರು. ಕಳೆದ ಅಧಿವೇಶನದಲ್ಲಿ ವಿರಾಜಪೇಟೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರಕಾರ ಅನುದಾನವನ್ನು ಒದಗಿಸಿತ್ತು. ಆ ನಿಟ್ಟಿನಲ್ಲಿ ಈಗಾಗಲೇ ಮೇಲು ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಶಾಸಕರು ಹಾಗೂ ಸಚಿವರು ಭೇಟಿ ಸಂದರ್ಭದಲ್ಲಿ ಪರಿಶೀಲಿಸಿದರು. ಆಸ್ಪತ್ರೆ ಬಗೆಗಿನ ಎಲ್ಲಾ ಮಾಹಿತಿಯನ್ನು ಶಾಸಕರು, ಸಚಿವರಿಗೆ ಒದಗಿಸಿದರು. ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಸತೀಶ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಯತೀರಾಜ್, ಬಗರ್ ಹುಕುಂ ತಾಲೂಕು ಅಧ್ಯಕ್ಷರು ಸಲಾಂ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಸದಸ್ಯರು ಮತೀನ್, ಪೃಥ್ವಿನಾಥ್, ರಜಿನಿಕಾಂತ್, ಹಮೀದ್, ಸಾಯಿ ಸಮಿತಿ ಅಧ್ಯಕ್ಷರು ಜಲೀಲ್, ಅರೋಗ್ಯ ರಕ್ಷಾ ಸಮಿತಿ ಸದಸ್ಯರು ಕುಂಡಚೀರ ಮಂಜು ದೇವಯ್ಯ,ಕಿಶೋರ್,ಸಿಬಾ ಪೃಥ್ವಿನಾಥ್, ಅನಿತಾ, ಮಂಡೆಟೀರ ಅನಿಲ್, ಶಬೀರ್, ವಿರಾಜಪೇಟೆ ವಿಧಾನ ಸಭಾ ಕ್ಷೆತ್ರದ ಅಧ್ಯಕ್ಷರು ಪಟ್ಟಡ ರಕ್ಷಿತ್ ಚಂಗಪ್ಪ, ಪಕ್ಷದ ಪ್ರಮುಖರು ಜೋಕಿಮ್, ಭವಿನ್, ಮಂಜುನಾಥ್,ಬಟ್ಟಕಳಂಡ ರಾಜ, ವ್ಯದ್ಯರು, ಸಿಬ್ಬಂದಿಗಳು ಹಾಗೂ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.








