
ವಿರಾಜಪೇಟೆ ಆ.12 NEWS DESK : ತಾಲೂಕಿನ ಮಗ್ಗುಲ ಗ್ರಾಮದಲ್ಲಿರುವ ಶ್ರೀ ಶನೇಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ವರ್ಷಂಪ್ರತಿ ನಡೆಯುವಂತೆ ಈ ಬಾರಿಯೂ ಶ್ರಾವಣ ಮಾಸದ ಅಂಗವಾಗಿ ಶ್ರಾವಣ ಶನಿವಾರದ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರಾದ ಚೋಕಂಡ ರಮೇಶ್ ಅವರು ತಿಳಿಸಿದ್ದಾರೆ. ಶ್ರಾವಣ ಮಾಸದ ಒಟ್ಟು 4 ಶನಿವಾರಗಳಂದು ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹಾಗೂ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನೆರವೇರಲಿವೆ. ಆಗಸ್ಟ್ 15ರ 1ನೇ ಶನಿವಾರ ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮದೊಂದಿಗೆ ಶ್ರಾವಣ ಮಾಸದ ಪೂಜಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಆಗಸ್ಟ್ 22, ಎರಡನೇ ಶನಿವಾರ, ಆಗಸ್ಟ್ 29 3ನೇ ಶನಿವಾರ, ಸೆಪ್ಟೆಂಬರ್ 5 ರಂದು 4ನೇ ಶನಿವಾರ, ಶ್ರಾವಣ ಮಾಸದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಶ್ರಾವಣ ಶನಿವಾರಗಳಂದು ದೇವಾಲಯದಲ್ಲಿ ನವಗ್ರಹ ಪೂಜೆ, ಶನಿ ಶಾಂತಿ ಪೂಜೆ, ಶನಿ ಜಪ ಹಾಗೂ ವಿವಿಧ ವಿಶೇಷ ಪೂಜೆಗಳು ಜರುಗಲಿವೆ. ಪ್ರತಿಯೊಂದು ಶನಿವಾರದಂದು ಮಧ್ಯಾಹ್ನ 1 ಗಂಟೆಗೆ ನಾಡಿನ ಕ್ಷೇಮಕ್ಕಾಗಿ ಮಹಾಪೂಜೆ ನಡೆಯಲಿದ್ದು, ತದನಂತರ ಮಧ್ಯಾಹ್ನ 1:30ಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಮಹಾ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಶ್ರೀ ಶನೀಶ್ವರ ದೇವರ ಕೃಪೆಗೆ ಪಾತ್ರರಾಗಲು ಹಾಗೂ ಮನಃಶಾಂತಿ ಪಡೆಯಲು ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿ ದೇವಾಲಯದ ಆಡಳಿತ ಮಂಡಳಿ ಹಾಗೂ ಅರ್ಚಕರು ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಆಡಳಿತ ಮಂಡಳಿಯ ಮೊ. 94495 04902, ಅರ್ಚಕರ ಮೊ. 99012 47888ಸಂಪರ್ಕಿಸುವಂತೆ ಕೋರಲಾಗಿದೆ.










