Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಓದುವ ಹವ್ಯಾಸದೊಂದಿಗೆ ಜ್ಞಾನ ವೃದ್ಧಿಸುವಲ್ಲಿ ಗ್ರಂಥಾಲಯದ ಪಾತ್ರ ಅಪಾರ : ಡಾ. ಕೆ.ಜಿ.ವೀಣಾ*
  • *ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಗೆ ಸದಸ್ಯರ ನೇಮಕ*
  • *ಮಾದರಿ ಅಂಗನವಾಡಿ ರೂಪಿಸುವಲ್ಲಿ ಬಾಲ ವಿಕಾಸ ಸಮಿತಿ ಹೊಣೆಗಾರಿಕೆ: ಸವಿತಾ ಕೀರ್ತನ್*
  • *ಮಡಿಕೇರಿ : ಅಂಗನವಾಡಿಯಲ್ಲಿ ಆರೋಗ್ಯ ತಪಾಸಣೆ*
  • *ಮಡಿಕೇರಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ*
  • *ತಲಕಾವೇರಿಗೆ ಮಾಜಿ ಸಚಿವ ಎಸ್.ಸುರೇಶ್‌ ಕುಮಾರ್‌ ಭೇಟಿ : ವಿಶೇಷ ಪೂಜೆ ಸಲ್ಲಿಕೆ*
  • *ಆನೆ-ಮಾನವ ಸಂಘರ್ಷಕ್ಕೆ ಅರಿವೇ ಶಾಶ್ವತ ಪರಿಹಾರ: ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*
  • *ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ “ಪೊಲಿಂಕಾನ ಉತ್ಸವ”*
  • *ಆ.16 ರಂದು ಕೊಡವ ಮಕ್ಕಡ ಕೂಟದ 126 ನೇ ಪುಸ್ತಕ ಶ್ರೀಧರ್ ಹೂವಲ್ಲಿ ರಚಿತ “ಕಥಾಂಜಲಿ” ಬಿಡುಗಡೆ*
  • *ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಶಾಸಕ ಎ.ಎಸ್.ಪೊನ್ನಣ್ಣ ನೇಮಕ : ಸಂಪುಟ ದರ್ಜೆಯ ಸಚಿವರ ಸ್ಥಾನಮಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ತಲಕಾವೇರಿಗೆ ಮಾಜಿ ಸಚಿವ ಎಸ್.ಸುರೇಶ್‌ ಕುಮಾರ್‌ ಭೇಟಿ : ವಿಶೇಷ ಪೂಜೆ ಸಲ್ಲಿಕೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ತಲಕಾವೇರಿಗೆ ಮಾಜಿ ಸಚಿವ ಎಸ್.ಸುರೇಶ್‌ ಕುಮಾರ್‌ ಭೇಟಿ : ವಿಶೇಷ ಪೂಜೆ ಸಲ್ಲಿಕೆ*

ಆಗಷ್ಟ್ 12, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.12 NEWS DESK : ಕಾವೇರಿ ನೀರು ಹಂಚಿಕೆ ವಿವಾದದ ನಡುವೆ ರಾಜಾಜಿನಗರ ಶಾಸಕ, ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಜಾಜಿನಗರ ಕ್ಷೇತ್ರದ ಕಾರ್ಯಕರ್ತರೊಂದಿಗೆ ಜೀವನದಿ ಉಗಮ ಸ್ಥಾನ ತಲಕಾವೇರಿಗೆ ಆಗಮಿಸಿದ ಸುರೇಶ್ ಕುಮಾರ್, ಕಾವೇರಿಗೆ ನಮಿಸಿ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸಿದರು. ಈ ವೇಳೆ ಮಾತನಾಡಿದ ಅವರು, ಕೆಆರ್‌ಎಸ್‌ನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ ಮೂರು ಬಾರಿ 100 ಅಡಿಗೂ ಹೆಚ್ಚು ನೀರು ತುಂಬಿತ್ತು. ಆದರೆ ಈ ಬಾರಿ ಸಕಾಲಕ್ಕೆ ಮಳೆಯಾದಗದೆ ಆತಂಕದ ವಾತಾವರಣವಿತ್ತು. ಹಾಗಾಗಿ ಡ್ಯಾಂ ಭರ್ತಿಯಾದರೆ ಬೆಂಗಳೂರಿಗರ ಪರವಾಗಿ ಜೀವನದಿ ಕಾವೇರಿಗೆ ಧನ್ಯವಾದ ಅರ್ಪಿಸಬೇಕೆಂದು ಅಂದುಕೊಂಡಿದ್ದೆ. ಕೆಲವು ದಿನಗಳಿಂದ ಕಾವೇರಿ ಪಾತ್ರದಲ್ಲಿ ಉತ್ತಮ ಮಳೆಯಾಗಿ ಆತಂಕ ದೂರವಾಗಿದೆ. ಹೀಗಾಗಿ ಇಂದು ಕ್ಷೇತ್ರಕ್ಕೆ ಬಂದು ಆ ಹರಕೆಯನ್ನು ನಾನು ತೀರಿಸಿದ್ದೇನೆ ಎಂದರು.
ಕೊಡಗಿನಲ್ಲಿ ಮಳೆಯಾದರೆ, ಇಲ್ಲಿ ಕಾವೇರಿ ಉಕ್ಕಿ ಹರಿದರೆ ಮೈಸೂರು, ಮಂಡ್ಯ, ಬೆಂಗಳೂರಿನ ಮಂದಿ ನೆಮ್ಮದಿಯಿಂದ ಇರೋದಕ್ಕೆ ಸಾಧ್ಯ. ಆದರೆ ಮಳೆಯಾದ ಸಂದರ್ಭ ಕೊಡಗಿನವರು ವಿವಿಧ ರೀತಿಯ ಸಮಸ್ಯೆಯನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ. ಮಂಡ್ಯ, ಮೈಸೂರು, ಬೆಂಗಳೂರಿನ ಜನ ಕೊಡಗು ಹಾಗೂ ಕಾವೇರಿಗೆ ಕೃತಜ್ಞರಾಗಿರಬೇಕು. ಹಾಗಾಗಿ ಸಾಮಾನ್ಯ ಪ್ರಜೆಯಾಗಿ ನನ್ನ ಕರ್ತವ್ಯ ನಿಭಾಗಿಸಿದ್ದೇನೆ ಎಂದರು. :: ಕೊಡಗು ಅಭಿವೃದ್ಧಿ ಪ್ರಾಧಿಕಾರ ಬೇಕು : : 2018ರಲ್ಲಿ ಕೊಡಗಿನಲ್ಲಾದ ಪ್ರಾಕೃತಿಕ ವಿಪತ್ತನ್ನು ಕಣ್ಣಾರೆ ಕಂಡಿದ್ದೇನೆ. ಆ ಸಂದರ್ಭದ ಸಾವು ನೋವುಗಳು ಇಂದಿಗೂ ಕಣ್ಣೆದುರು ಬರುತ್ತದೆ. ಕೊಡಗು ಯಾವುದೇ ಕಾರಣಕ್ಕೂ ಭೂದಾಹಕ್ಕೆ ಬಲಿಯಾಗಬಾರದು. ಇಲ್ಲಿನ ಪ್ರಾಕೃತಿಕ ಸೌಂದರ್ಯ ಕೊಡಗಿಗೆ ಮಾರಕವಾಗಬಾರದು. ಹಣವಂತರು ಬಂದು ಪ್ರಕೃತಿ ನಾಶ ಮಾಡಿ ಇಲ್ಲಿ ರೆಸಾರ್ಟ್‌ನಂತ ಉದ್ಯಮವನ್ನು ನಡೆಸುವಂತೆ ಆಗಬಾರದು. ಆ ನಿಟ್ಟಿನಲ್ಲಿ ಎಚ್ಚರಿಕೆಯ ಕ್ರಮವನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು. ಪ್ರಕೃತಿಗೆ ಪೂರಕವಾದ ಚಟುವಟಿಕೆಗಳ ಜೊತೆಗೆ ಅಭಿವೃದ್ಧಿ ಆಗುವಂತ ನಿಟ್ಟಿನಲ್ಲಿ ಕ್ರಮಗಳು ಆಗಬೇಕು. ಹೀಗಾಗಿ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಣೆಯಾಗಬೇಕು. ಜೊತೆಗೆ ಕೊಡಗು ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕೆಂಬುದು ಅನೇಕರ ಬೇಡಿಕೆಯಿದೆ. ನಾನು ಕೂಡಾ ಈ ವಿಚಾರವಾಗಿ ಸಂಬಂಧಪಟ್ಟ ವ್ಯಕ್ತಿಗಳ ಜೊತೆಗೆ ಚರ್ಚಿಸುವುದರ ಜೊತೆಗೆ ಸದನದಲ್ಲೂ ಪ್ರಸ್ತಾಪ ಮಾಡುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಭಾಗಮಂಡಲ ಭಗಂಡೇಶ್ವರ ದೇವಾಲದಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದಲ್ಲಿ ಜರುಗಿದ ಪೊಲಿಂಕಾನ ಉತ್ಸವದಲ್ಲೂ ಅವರು ಭಾಗಿಯಾದರು. ಗ್ರೀನ್‌ ಸಿಟಿ ಫೋರಂ ಸಂಸ್ಥಾಪಕ ಚೈಯ್ಯಂಡ ಸತ್ಯ ಗಣಪತಿ, ಸದಸ್ಯ ಕಿಶೋರ್‌ ರೈ ಕತ್ತಲೆಕಾಡು, ರಾಜಾಜಿನಗರ ಕ್ಷೇತ್ರದ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಓದುವ ಹವ್ಯಾಸದೊಂದಿಗೆ ಜ್ಞಾನ ವೃದ್ಧಿಸುವಲ್ಲಿ ಗ್ರಂಥಾಲಯದ ಪಾತ್ರ ಅಪಾರ : ಡಾ. ಕೆ.ಜಿ.ವೀಣಾ*

ಆಗಷ್ಟ್ 12, 2026

*ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಗೆ ಸದಸ್ಯರ ನೇಮಕ*

ಆಗಷ್ಟ್ 12, 2026

*ಮಾದರಿ ಅಂಗನವಾಡಿ ರೂಪಿಸುವಲ್ಲಿ ಬಾಲ ವಿಕಾಸ ಸಮಿತಿ ಹೊಣೆಗಾರಿಕೆ: ಸವಿತಾ ಕೀರ್ತನ್*

ಆಗಷ್ಟ್ 12, 2026

*ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಗೆ ಸದಸ್ಯರ ನೇಮಕ*

ಆಗಷ್ಟ್ 12, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.12 NEWS DESK : ಕೊಡಗು ಜಿಲ್ಲಾ ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳಲು…

*ಮಾದರಿ ಅಂಗನವಾಡಿ ರೂಪಿಸುವಲ್ಲಿ ಬಾಲ ವಿಕಾಸ ಸಮಿತಿ ಹೊಣೆಗಾರಿಕೆ: ಸವಿತಾ ಕೀರ್ತನ್*

ಆಗಷ್ಟ್ 12, 2026

*ಮಡಿಕೇರಿ : ಅಂಗನವಾಡಿಯಲ್ಲಿ ಆರೋಗ್ಯ ತಪಾಸಣೆ*

ಆಗಷ್ಟ್ 12, 2026

*ಮಡಿಕೇರಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ*

ಆಗಷ್ಟ್ 12, 2026

*ತಲಕಾವೇರಿಗೆ ಮಾಜಿ ಸಚಿವ ಎಸ್.ಸುರೇಶ್‌ ಕುಮಾರ್‌ ಭೇಟಿ : ವಿಶೇಷ ಪೂಜೆ ಸಲ್ಲಿಕೆ*

ಆಗಷ್ಟ್ 12, 2026

*ಆನೆ-ಮಾನವ ಸಂಘರ್ಷಕ್ಕೆ ಅರಿವೇ ಶಾಶ್ವತ ಪರಿಹಾರ: ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*

ಆಗಷ್ಟ್ 12, 2026

*ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ “ಪೊಲಿಂಕಾನ ಉತ್ಸವ”*

ಆಗಷ್ಟ್ 12, 2026

*ಆ.16 ರಂದು ಕೊಡವ ಮಕ್ಕಡ ಕೂಟದ 126 ನೇ ಪುಸ್ತಕ ಶ್ರೀಧರ್ ಹೂವಲ್ಲಿ ರಚಿತ “ಕಥಾಂಜಲಿ” ಬಿಡುಗಡೆ*

ಆಗಷ್ಟ್ 12, 2026

*ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಶಾಸಕ ಎ.ಎಸ್.ಪೊನ್ನಣ್ಣ ನೇಮಕ : ಸಂಪುಟ ದರ್ಜೆಯ ಸಚಿವರ ಸ್ಥಾನಮಾನ*

ಆಗಷ್ಟ್ 12, 2026

*ಡಿ.ಚೆನ್ನಮ್ಮ ಪ.ಪೂ. ಕಾಲೇಜಿನ ವಿದ್ಯಾಥಿ೯ಗಳೊಂದಿಗೆ ರೋಹನ್ ಬೋಪಣ್ಣ ಸಂವಾದ*

ಆಗಷ್ಟ್ 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.