Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ದಸರಾ ಶೋಭಾಯಾತ್ರೆಗೆ ದಿನಾಂಕ ನಿಗದಿ : ಅ.20ರಂದು ದಶಮಂಟಪಗಳ ಮೆರವಣಿಗೆ*
  • *ಗೌರಿ–ಗಣೇಶ ಹಬ್ಬ: 2,400 ವಿಶೇಷ ಬಸ್‌ಗಳ ವ್ಯವಸ್ಥೆ*
  • *ಗೌರಿ ಗಣೇಶೋತ್ಸವ : ಕಾನೂನು ಪಾಲನೆಗೆ ಆದ್ಯತೆ ನೀಡಿ : ಎಸ್‌ಪಿ ಬಿಂದುಮಣಿ ಮನವಿ*
  • *ಇಂಡಿಯಾ ಸ್ಕಿಲ್ : ಹೆಸರು ನೋಂದಣಿಗೆ ಅವಕಾಶ*
  • *ಬೆಳ್ಳುಮಾಡು ಶ್ರೀ ಮಾದೇರಪ್ಪ ದೇವಾಲಯದ ಜೀರ್ಣೋದ್ಧಾರಕ್ಕೆ ರೂ.3 ಲಕ್ಷ ಅನುದಾನ*
  • *ಸೆ.14 ರಂದು ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆ*
  • *ಸೆ.15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಅಗತ್ಯ ಸಿದ್ಧತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ ಸೂಚನೆ*
  • *ಸೆ.19 ರಂದು ಕೊಡಗು ಮಹಿಳಾ ಸಹಕಾರ ಸಂಘದ 86ನೇ ವಾರ್ಷಿಕ ಮಹಾಸಭೆ*
  • *ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ತಪಾಸಣೆ : ಕಾನೂನು ಅರಿವು*
  • *ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಿ ವರದಿ ಜಾರಿಗೆ ಪ್ರಸ್ತಾವನೆ ಸಲ್ಲಿಸಲಿ : ಸೇವ್ ಕೊಡಗು ಸಂಘಟನೆ ಒತ್ತಾಯ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕೊಡ್ಲಿಪೇಟೆಯಲ್ಲಿ ಶರಣ ಸಾಹಿತ್ಯ ಕಾರ್ಯಕ್ರಮಕ್ಕೆ ಚಾಲನೆ : ಮಕ್ಕಳ ಸಾತ್ವಿಕ ಬದುಕಿಗೆ ವಚನಗಳು ದಾರಿದೀಪ : ಅಭಿನವಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಮತ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕೊಡ್ಲಿಪೇಟೆಯಲ್ಲಿ ಶರಣ ಸಾಹಿತ್ಯ ಕಾರ್ಯಕ್ರಮಕ್ಕೆ ಚಾಲನೆ : ಮಕ್ಕಳ ಸಾತ್ವಿಕ ಬದುಕಿಗೆ ವಚನಗಳು ದಾರಿದೀಪ : ಅಭಿನವಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಮತ*

ಆಗಷ್ಟ್ 12, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕೊಡ್ಲಿಪೇಟೆ ಆ.12 NEWS DESK : ಇಂದಿನ ವಿದ್ಯಾರ್ಥಿಗಳನ್ನು ಸಾತ್ವಿಕರಾಗಿ ಹಾಗೂ ಸಂಸ್ಕಾರವಂತರಾಗಿ ಬೆಳೆಸಬೇಕಾದ ತುರ್ತು ಅಗತ್ಯ ಇದೆ. ಸಾತ್ವಿಕ ಬದುಕಿಗೆ ಶರಣರ ವಚನಗಳು ದಾರಿ ದೀಪ. ತಾಯಂದಿರು ಎಳೆಯ ಹಂತದಲ್ಲಿಯೇ ವಚನಗಳ ಸಾರವನ್ನು ಹೇಳಿಕೊಡುವ ಮೂಲಕ ಬೆಳೆಸಿದರೆ ಮುಂದೆ ಆ ಮಗು ಹೆತ್ತವರು ಹಾಗೂ ಹಿರಿಯರ ಬಗ್ಗೆ ಎಂದೂ ತಿರಸ್ಕಾರ ಮನೋಭಾವ ಹೊಂದುವುದಿಲ್ಲ ಎಂದು ಕೊಡ್ಲಿಪೇಟೆ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆಕೊಟ್ಟರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕೊಡ್ಲಿಪೇಟೆಯ ಗಂಗಾ ವೀರಶೈವ ಮಹಿಳಾ ಸಮಾಜದ ವತಿಯಿಂದ ಕೊಡ್ಲಿಪೇಟೆಯ ಸಮಾಜ ಸೇವಕರಾದ ಮಂಜುಳಾ ಸುರೇಶ್ ಅವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ” ಮನೆಯಂಗಳದತ್ತ ಶರಣ ಸಾಹಿತ್ಯ ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವುಗಳು ಮಣ್ಣು ಹಾಗೂ ಜಲಮೂಲಗಳನ್ನು ಮನಬಂದಂತೆ ದುರ್ಬಳಕೆ ಮಾಡಿಕೊಂಡ ಪರಿಣಾಮ ಗಾಳಿಯೊಂದಿಗೆ ಎಲ್ಲವೂ ವಿಷಮಯವಾಗುತ್ತಿವೆ. ಹಿಂದಿನ ನಮ್ಮ ಪೂರ್ವಜರು ಮನೆತುಂಬಾ ಮಕ್ಕಳು ಹಡೆದಿದ್ದರು. ರಸಾಯನಿಕ ಮುಕ್ತ ದವಸಗಳನ್ನು ಬೆಳೆದು ತಿನ್ನುತ್ತಾ ಆರೋಗ್ಯವಾಗಿ ನೂರು ಕಾಲ ಬಾಳಿದರು. ಆದರೆ ಇಂದು ಇಡೀ ಪರಿಸರ ವಿಷಮಯ ವಾಗಿದ್ದು ಇಂದಿನ ಯುವ ಜನಾಂಗ ಪುರುಷತ್ವ ಕಳೆದುಕೊಳ್ಳುತ್ತಿದ್ದು ಮಕ್ಕಳನ್ನು ಹಡೆಯದಂತಹ ಅನಾರೋಗ್ಯ ಪರಿಸ್ಥಿತಿಯಲ್ಲಿ ಪೋಷಕರಿದ್ದಾರೆ.
ಮುಂದಿನ 50 ವರ್ಷಗಳಲ್ಲಿ ಮಕ್ಕಳೇ ಜನಿಸದಂತಹ ಅಪಾಯಕಾರಿ ವರ್ತುಲ ನಿರ್ಮಾಣವಾಗಲಿದ್ದು ಇಡೀ ಭೂಮಿ ಜನರಿಲ್ಲದೇ ಬಿಕೋ ಎನ್ನಲಿದೆ ಎಂಬುದು ಸಂಶೋಧನೆ ಹೇಳುತ್ತಿದೆ ಎಂದು ಅಭಿನವ ಶ್ರೀಗಳು ವಿಷಾದಿಸಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಭಕ್ತಿ ಹಾಗೂ ಶ್ರದ್ದೆಯ ಲಿಂಗಾಯಿತ ಸಮಾಜ ಇಷ್ಟಲಿಂಗವನ್ನು ಪೂಜಿಸುವ ಮೂಲಕ ಸಮಾಜ ಹಿತ ಬಯಸುವ ಸಮಾಜವಾಗಿದೆ. ಅಧುನಿಕ ಕಾಲಘಟ್ಟದ ವಿಜ್ಞಾನದ ಬೆಳವಣಿಗೆ ಮನುಷ್ಯನ ಜೀವನಕ್ಕೆ ಮಾರಕವಾಗುತ್ತಿರುವ ಈ ಹೊತ್ತಿನಲ್ಲಿ ಶರಣರ ವಚನಗಳ ಸಾರ ಸಾತ್ವಿಕ ಜೀವನಕ್ಕೆ ಮನುಷ್ಯರನ್ನು ಒಯ್ಯುತ್ತದೆ. ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿರುವ ಮನೆಯಂಗಳಕ್ಕೆ ಶರಣ ಸಾಹಿತ್ಯ ಕಾರ್ಯಕ್ರಮ ಅನನ್ಯವಾದುದು ಎಂದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಅನೇಕ ವರ್ಷಗಳಿಂದ ನಿತ್ಯ ಚಟುವಟಿಕೆಗಳಲ್ಲಿ ಇರುವ ಶರಣ ಸಾಹಿತ್ಯ ಪರಿಷತ್ತು ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೀಗ ಹಳ್ಳಿ ನಗರ ಪ್ರದೇಶಗಳ ಮನೆಯಂಗಳದತ್ತ ಶರಣ ಸಾಹಿತ್ಯ ಪರಿಷತ್ತಿನ ಆಶಯಗಳನ್ನು ಜನಮಾನಸಕ್ಕೆ ಬಿತ್ತನೆ ಮಾಡಲಗುತ್ತಿದೆ ಎಂದರು. ಕೊಡ್ಲಿಪೇಟೆ ಗಂಗಾ ವೀರಶೈವ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ಸುರೇಶ್ ಮಾತನಾಡಿ, ಜಗತ್ತಿನಲ್ಲಿ ಶ್ರೇಷ್ಠ ಧರ್ಮವಾದ ವೀರಶೈವ ಧರ್ಮದ ಸಾರಗಳೊಂದಿಗೆ ಶರಣ ಸಾಹಿತ್ಯದ ಆಶಯಗಳನ್ನು ಜನರತ್ತ ಒಯ್ಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಕೊಡ್ಲಿಪೇಟೆ ಯಲ್ಲಿ ರೂ 80 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ವೀರಶೈವ ಮಹಿಳಾ ಸಮಾಜದ ಕಟ್ಟಡ ಕಾಮಗಾರಿಗೆ ಸಾರ್ವಜನಿಕರ ಆರ್ಥಿಕ ಸಹಕಾರ ಕೋರಿದರು. ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಬಿ.ನಟರಾಜು, ಮಹಡಿಮನೆ ಸುರೇಶ್, ಗಂಗಾ ವೀರಶೈವ ಮಹಿಳಾ ಸಮಾಜದ ಉಪಾಧ್ಯಕ್ಷೆ ಗೀತಾ ದಯಾಶಂಕರ್, ಕಾರ್ಯದರ್ಶಿ ತ್ರಿವೇಣಿ ಚಂದ್ರಶೇಖರ್, ನಿರ್ದೇಶಕ ರಾದ ಮಮತಾ ಸತೀಶ್, ಸುಶೀಲಾ, ದೀಪಿಕಾ, ಜ್ಞಾನೇಶ್ವರಿ, ಚಂದ್ರಾವತಿ, ಭವ್ಯ ವಸಂತ್, ದೀಪಿಕಾ ವಿನಾಯಕ, ಲಲಿತ ಪ್ರಸನ್ನ, ಕೊಡ್ಲಿಪೇಟೆಯ ಜ್ಯೋತಿ, ರಶ್ಮಿ,ಉಷಾ, ಲತಾ ಲೋಕೇಶ್, ಶಾರದಾ, ರಾಜಮಣಿ, ರೂಪ ಮೊದಲಾದವರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ ದಸರಾ ಶೋಭಾಯಾತ್ರೆಗೆ ದಿನಾಂಕ ನಿಗದಿ : ಅ.20ರಂದು ದಶಮಂಟಪಗಳ ಮೆರವಣಿಗೆ*

ಸೆಪ್ಟೆಂಬರ್ 13, 2026

*ಗೌರಿ–ಗಣೇಶ ಹಬ್ಬ: 2,400 ವಿಶೇಷ ಬಸ್‌ಗಳ ವ್ಯವಸ್ಥೆ*

ಸೆಪ್ಟೆಂಬರ್ 13, 2026

*ಗೌರಿ ಗಣೇಶೋತ್ಸವ : ಕಾನೂನು ಪಾಲನೆಗೆ ಆದ್ಯತೆ ನೀಡಿ : ಎಸ್‌ಪಿ ಬಿಂದುಮಣಿ ಮನವಿ*

ಸೆಪ್ಟೆಂಬರ್ 13, 2026

*ಗೌರಿ–ಗಣೇಶ ಹಬ್ಬ: 2,400 ವಿಶೇಷ ಬಸ್‌ಗಳ ವ್ಯವಸ್ಥೆ*

ಸೆಪ್ಟೆಂಬರ್ 13, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಬೆಂಗಳೂರು, NEWS DESK ಸೆ.13: ಗೌರಿ–ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ…

*ಗೌರಿ ಗಣೇಶೋತ್ಸವ : ಕಾನೂನು ಪಾಲನೆಗೆ ಆದ್ಯತೆ ನೀಡಿ : ಎಸ್‌ಪಿ ಬಿಂದುಮಣಿ ಮನವಿ*

ಸೆಪ್ಟೆಂಬರ್ 13, 2026

*ಇಂಡಿಯಾ ಸ್ಕಿಲ್ : ಹೆಸರು ನೋಂದಣಿಗೆ ಅವಕಾಶ*

ಸೆಪ್ಟೆಂಬರ್ 12, 2026

*ಬೆಳ್ಳುಮಾಡು ಶ್ರೀ ಮಾದೇರಪ್ಪ ದೇವಾಲಯದ ಜೀರ್ಣೋದ್ಧಾರಕ್ಕೆ ರೂ.3 ಲಕ್ಷ ಅನುದಾನ*

ಸೆಪ್ಟೆಂಬರ್ 12, 2026

*ಸೆ.14 ರಂದು ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಣೆ*

ಸೆಪ್ಟೆಂಬರ್ 12, 2026

*ಸೆ.15 ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಅಗತ್ಯ ಸಿದ್ಧತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ ಸೂಚನೆ*

ಸೆಪ್ಟೆಂಬರ್ 12, 2026

*ಸೆ.19 ರಂದು ಕೊಡಗು ಮಹಿಳಾ ಸಹಕಾರ ಸಂಘದ 86ನೇ ವಾರ್ಷಿಕ ಮಹಾಸಭೆ*

ಸೆಪ್ಟೆಂಬರ್ 12, 2026

*ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬಾಲಕಾರ್ಮಿಕ ತಪಾಸಣೆ : ಕಾನೂನು ಅರಿವು*

ಸೆಪ್ಟೆಂಬರ್ 12, 2026

*ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತಗೊಳಿಸಿ ವರದಿ ಜಾರಿಗೆ ಪ್ರಸ್ತಾವನೆ ಸಲ್ಲಿಸಲಿ : ಸೇವ್ ಕೊಡಗು ಸಂಘಟನೆ ಒತ್ತಾಯ*

ಸೆಪ್ಟೆಂಬರ್ 12, 2026

*ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಖಂಡನೆ : ಮಡಿಕೇರಿಯಲ್ಲಿ ಪ್ರತಿಭಟನೆ*

ಸೆಪ್ಟೆಂಬರ್ 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.