
ವಿರಾಜಪೇಟೆ ಸೆ.23 NEWS DESK : ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಮಾಜಿ ಸೈನಿಕ ಹಾಗೂ ಉದಯೋನ್ಮುಖ ಉದ್ಯಮಿ ಎಂ.ಕೆ.ಸಲಾಂ ಅವರನ್ನು ಸನ್ಮಾನಿಸಲಾಯಿತು. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಎಂ.ಕೆ.ಸಲಾಂ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಲೆಯ ಹಳೆಯ ವಿದ್ಯಾರ್ಥಿ, ಸೈನಿಕ ಎಂ.ಕೆ.ಸಲಾಂ ಅವರು, ತನ್ನ ಯಶಸ್ವಿಗೆ ಮೂಲ ಕಾರಣಕರ್ತರಾದ ತಂದೆ ಅಬ್ದುಲ್ಲಾ ಹಾಗೂ ತಾಯಿ ರುಕೀಯ ಅವರ ಆಶೀರ್ವಾದ ಎಲ್ಲಾ ವಿದ್ಯಾರ್ಥಿಗಳಿಗೂ ಇರಲಿ ಎಂದು ಅವರ ಹೆಸರಿನಲ್ಲಿ ದತ್ತಿನಿಧಿ ಪ್ರಾರಂಭಿಸಿ ಒಂದನೇ ತರಗತಿಯಿಂದ 7ನೇ ತರಗತಿಯಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರದಂತೆ ಶೈಕ್ಷಣಿಕ ಪ್ರೋತ್ಸಾಹಕ್ಕಾಗಿ ಧನ ಸಹಾಯವನ್ನು ಶಾಲೆಗೆ ನೀಡಿದರು. ತನ್ನ ಕೈಯಲ್ಲಿ ಸಾಧ್ಯವಾಗವರೆಗೂ ಇದನ್ನು ಮುಂದುವರಿಸಲಿಕ್ಕೆ ಸಾಧ್ಯವಾಗಲಿ ಎಂದು ಆಶಿಸಿ ಶಾಲೆಯ ಪ್ರತಿಯೊಂದು ಏಳಿಗೆ ಕೆಲಸದಲ್ಲಿ ಕೈ ಜೋಡಿಸುತ್ತೆನೆ ಎಂಬ ಭರವಸೆಯನ್ನು ನೀಡಿದರು. ಬಳಿಕ ಶಾಲೆಯಲ್ಲಿ ಪ್ರಾರಂಭಿಸಿದ ತರಕಾರಿ ಉದ್ಯಾನವನಕ್ಕೆ ಬೇಲಿ ಹಾಕಲು ಬೇಕಾದ ಸಿಮೆಂಟ್ ಕಂಬಗಳನ್ನು ಉಚಿತವಾಗಿ ನೀಡಿದರು. ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ಜೆ.ಶಾರದ, ಉದಿಯಂಡ ಚಂಗಪ್ಪ, ಕೋದಂಡ ಮಂಜುಳಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ವಿಮಲಾ ಕೆ.ಎಂ, ಎಸ್‍ಡಿಎಂಸಿ ಅಧ್ಯಕ್ಷೆ ಫಾತಿಮಾ, ಶಿಕ್ಷಕಿ ಬಬಿತಾ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕ ವೃಂದದವರು ಇದ್ದರು.








