
ಮಡಿಕೇರಿ ಸೆ.26 NEWS DESK : ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಏಕತಾ ರ‍್ಯಾಲಿಯಲ್ಲಿ ಕೊಡಗಿನ ಇಬ್ಬರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ. ನಿಫಾ (ನ್ಯಾಶನಲ್ ಇಂಟೆಗ್ರೇಟೆಡ್ ಫಾರಂ ಆಫ್ ಆರ್ಟಿಸ್ಟ್ಸ್ ಮತ್ತು ಆಕ್ಟಿವಿಸ್ಟ್ಸ್) ಸಿಲ್ವರ್ ಜ್ಯೂಬಿಲಿ ಅಂಗವಾಗಿ ನಿಫಾ ಮತ್ತು ವರ್ಲ್ಡ್ ರೆಕಾರ್ಡ್ಸ್ ಆಫ್ ಎಕ್ಸೆಲೆನ್ಸ್ ಇಂಗ್ಲೆಂಡ್ ಭಾರತದಾದ್ಯಂತ ಎಲ್ಲಾ ರಾಜ್ಯ ಹಾಗೂ ಜಿಲ್ಲೆಗಳಿಂದಲೂ ಆಯ್ದ ಸಮಾಜಸೇವಕರಿಗಾಗಿ ನವದೆಹಲಿಯಲ್ಲಿ ಆಯೋಜಿಸಿದ ರಾಷ್ಟ್ರೀಯ ಏಕತಾ ರ‍್ಯಾಲಿಯಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ರಾಷ್ಟ್ರೀಯ ಯುವ ಸಾಮಾಜಿಕ ಕಾರ್ಯಕರ್ತ-ಯಂಗ್ ಕಮ್ಯುನಿಟಿ ಚಾಂಪಿಯನ್ ಪುರುಷ ವಿಭಾಗದಲ್ಲಿ ಪ್ರವೀಣ್ ಸಿದ್ದಾಪುರ ಹಾಗೂ ಮಹಿಳಾ ವಿಭಾಗದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಕೊಡಗು ಮೂಲದ ಆರ್.ಗಾಯತ್ರಿ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹರಿಯಾಣದ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ರಾವ್ ನರ್ಬೀರ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು.









