
ಮಡಿಕೇರಿ ಸೆ.26 NEWS DESK : ಕೊಡಗು ಜಾನಪದ ಪರಿಷತ್ ವತಿಯಿಂದ ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಸಹಯೋಗದಲ್ಲಿ ಸೆ.29 ರಂದು 5ನೇ ವಷ೯ದ ಜಾನಪದ ದಸರಾ ಆಯೋಜಿತವಾಗಿದ್ದು, ಜಾನಪದ ಕಲಾ ತಂಡಗಳಿಂದ ವೈವಿಧ್ಯಮಯ ಜಾನಪದ ಕಲಾ ಪ್ರದಶ೯ನದ ಸೊಬಗು ಕಲಾಪ್ರೇಮಿಗಳ ಮನಸೂರೆಗೊಳ್ಳಲಿದೆ ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಮತ್ತು ಜಾನಪದ ದಸರಾ ಸಂಚಾಲಕ ಅನಿಲ್ ಹೆಚ್.ಟಿ ಮಾಹಿತಿ ನೀಡಿದ್ದಾರೆ. ಸೆ.29 ರಂದು ಸೋಮವಾರ ಬೆಳಗ್ಗೆ 9.30 ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿಯ ಸಕಾ೯ರಿ ಅತಿಥಿಗೖಹದ ಆವರಣದಿಂದ ಸಾಗಲಿರುವ ರಾಮನಗರದ ವೈವಿಧ್ಯಮಯ ತಂಡಗಳೂ ಸೇರಿದಂತೆ ಜಿಲ್ಲೆಯ ಕಲಾತಂಡಗಳ ಕಲಾ ಜಾಥಾವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಉದ್ಘಾಟಸಲಿದ್ದಾರೆ ಬೆಳಗ್ಗೆ 10 ಗಂಟೆಗೆ ಗಾಂದಿ ಮೈದಾನದ ಕಲಾ ಸಂಭ್ರಮ ವೇದಿಕೆ ಮುಂಭಾಗದಲ್ಲಿ ಪೊನ್ನಚ್ಚನ ಮಧೂಸೂದನ್ ಅವರ ಸಂಗ್ರಹದಲ್ಲಿನ ಜಾನಪದ ವಸ್ತುಗಳ ಪ್ರದಶ೯ನ ಉದ್ಘಾಟನೆಗೊಳ್ಳಲಿದೆ. ಬೆಳಗ್ಗೆ 10.15 ಗಂಟೆಗೆ ಕಲಾಸಂಭ್ರಮ ವೇದಿಕೆಯಲ್ಲಿ ಜಾನಪದ ದಸರಾವನ್ನು ವೀರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟರಾಜಾ, ಕೊಡವ ಸಾಹಿತ್ಯ ಸಂಸ್ಕೖತಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಬ್ಯಾರಿ ಭಾಷಾ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು.ಹೆಚ್, ಕೃಷಿಕ ಮಹಿಳೆ ಬಾಗೀರಥಿ ಹುಲಿತಾಳ, ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾಯಾ೯ಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾಯ೯ದಶಿ೯ ಅರುಣ್ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ಜಾನಪದ ಪರಿಷತ್ ಪ್ರಧಾನ ಕಾಯ೯ದಶಿ೯ ಎಸ್.ಐ. ಮುನೀರ್ ಅಹಮ್ಮದ್, ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್ ಪಾಲ್ಗೊಳ್ಳಲಿದ್ದಾರೆ ಮಧ್ಯಾಹ್ನ 11.30 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೊಡಗಿನಾದ್ಯಂತಲಿನ ವಿವಿಧ ಕಲಾತಂಡಗಳಿಂದ ಜಾನಪದ ಕಲಾ ವೈವಿಧ್ಯ ಆಯೋಜಿತವಾಗಿದೆ. ಮಾಲ್ದಾರೆಯ ಶ್ರೀ ಮುತ್ತಪ್ಪ ಚಂಡೆ ಮೇಳ ತಂಡದಿಂದ ಚಂಡೆ ವಾದ್ಯ,ವೀರಾಜಪೇಟೆ ತಾಲೂಕು ಜಾನಪದ ಪರಿಷತ್ ಘಟಕದಿಂದ ಕಂಸಾಳೆ, ಆದಿವಾಸಿ ನೖತ್ಯ, ಜಾನಪದ ಹಾಡು, ನೖತ್ಯ, ಸೋಮವಾರಪೇಟೆ ತಾಲೂಕು ಜಾನಪದ ಪರಿಷತ್ ಘಟಕದಿಂದ ಜಾನಪದ ನೖತ್ಯ, ಓಂಶ್ರೀ ದಯಾನಂದ ತಂಡದಿಂದ ಜಾನಪದ ಗೀತೆ, ಗೋಣಿಕೊಪ್ಪ ತಾಲೂಕು ಜಾನಪದ ಘಟಕದಿಂದ ವೈವಿಧ್ಯಮಯ ಕಾಯ೯ಕ್ರಮ, ಕೊಡವ ಸಾಹಿತ್ಯ ಸಂಸ್ಕೖತಿ ಅಕಾಡೆಮಿಯಿಂದ ಜಾನಪದ ವೈವಿಧ್ಯ, ಅರೆಭಾಷಾ ಸಾಹಿತ್ಯ ಅಕಾಡೆಮಿಯಿಂದ ನೖತ್ಯರೂಪಕ, ಕನಾ೯ಟಕ, ಬ್ಯಾರಿ ಸಾಹಿತ್ಯ, ಸಂಸ್ಕತಿ ಅಕಾಡೆಮಿಯಿಂದ, ಚಿಕ್ಕ ಬೆಟ್ಟಗೇರಿ ಕಲಾತಂಡದಿಂದ ಜಾನಪದ ನೖತ್ಯ, ನಾಟ್ಯಾಂಜಲಿ ಕಲಾತಂಡದಿಂದ ಜಾನಪದ ನೖತ್ಯ, ಮಡಿಕೇರಿ ತಾಲೂಕು ಯುವ ಜಾನಪದ ಪರಿಷತ್ ನಿಂದ ಜನಪದ ಗೀತೆ, ಮೂನಾ೯ಡುವಿನ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ ವಿದ್ಯಾಥಿ೯ಗಳಿಂದ ಜಾನಪದ ಗೀತೆ, ಕೊಡಗು ಗೌಡ ಮಹಿಳಾ ಒಕ್ಕೂಟದಿಂದ ಜಾನಪದ ಸಮೂಹಗೀತೆ ಕುಶಾಲನಗರ ತಾಲೂಕು ಘಟಕದಿಂದ ಜಾನಪದ ನೖತ್ಯ -ಭಾಗಮಂಡಲದ ಶ್ರೀ ಕಾವೇರಿ ಮಹಿಳಾ ಸಂಘದಿಂದ , ಜಾನಪದ ಸಮೂಹಗೀತೆ, ಶನಿವಾರ ಸಂತೆ ಹೋಬಳಿ ಜಾನಪದ ಪರಿಷತ್ ಘಟಕ ದಿಂದ ಜಾನಪದ ಸಮೂಹ ಗೀತೆ ಮಡಿಕೇರಿ ತಾಲೂಕು ಜಾನಪದ ಪರಿಷತ್ ನಿಂದ ಜಾನಪದ ಗೀತೆ ಸೇರಿದಂತೆ ಸಾಕಷ್ಟು ಜಾನಪದ ವೈವಿಧ್ಯಗಳ ಕಾಯ೯ಕ್ರಮ ಆಯೋಜಿಸಲ್ಪಟ್ಟಿವೆ ಎಂದೂ ಅನಿಲ್ ಹೆ್ಚ್.ಟಿ.ಮಾಹಿತಿ ನೀಡಿದ್ದಾರೆ.









