
ಮಡಿಕೇರಿ ಸೆ.27 NEWS DESK : ಕೆ.ವಿ.ವಿ ಎಜುಕೇಶನಲ್ ಟ್ರಸ್ಟ್ ವತಿಯಿಂದ ವಿರಾಜಪೇಟೆ ಕಾವೇರಿ ಕಾಲೇಜಿನ ಆವರಣದಲ್ಲಿ ನೂತನವಾಗಿ ಪ್ರಾರಂಭವಾದ ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಲಾ ಕಾಲೇಜಿನ ಪ್ರಥಮ ವರ್ಷದ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಾಗೂ ಓರಿಯಂಟೇಷನ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕೆ.ವಿ.ವಿ ಎಜುಕೇಶನ್ ಟ್ರಸ್ಟ್ ನ ಮುಖ್ಯಸ್ಥರಾದ ಜಿ.ಎನ್.ನಾಗೇಂದ್ರ ಮಾತನಾಡಿ, ಕಾವೇರಿ ಕಾನೂನು ಕಾಲೇಜಿನ ಧ್ಯೇಯೊದ್ದೇಶಗಳನ್ನು ತಿಳಿಸಿ ತಮ್ಮ ಟ್ರಸ್ಟ್ ಭಾರತದಾತ್ಯಂತ ವಿದ್ಯಾರ್ಥಿಗಳಿಗಾಗಿ ಕಾನೂನು ಶಿಕ್ಷಣವನ್ನು ನೀಡಲು ವಿವಿಧ ಶಾಖೆಗಳನ್ನು ಆರಂಭಿಸಿದ್ದು, ಗುಣಾತ್ಮಕ ಶಿಕ್ಷಣ ಮತ್ತು ಕಾನೂನು ಸೇವೆಗಳನ್ನು ಉತ್ತಮ ರೀತಿಯಲ್ಲಿ ಒದಗಿಸುತ್ತ ಬರುವುದರೊಂದಿಗೆ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಲ್ಲಿ ನ್ಯಾಯಾಧೀಶರ ಪರೀಕ್ಷೆಗೆ ಸಿದ್ದಪಡಿಸಲಾಗುವುದು ಹಾಗೂ ನ್ಯಾಯಾಲಯಗಳಲ್ಲಿ ನಡೆಯುವ ಪ್ರಕ್ರಿಯೆಗಳ ತರಬೇತಿಯನ್ನು ಮೊದಲ ಸೆಮಿಸ್ಟರ್ ಹಂತದಲ್ಲಿಯೇ ಆರಂಭಿಸಲಾಗುತ್ತದೆ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ವಿನೀತಾ ಮಾತನಾಡಿ, ಕಾನೂನು ಶಿಕ್ಷಣದ ಇತಿಹಾಸ ಮತ್ತು ಕಾನೂನು ಶಿಕ್ಷಣದ ಪ್ರಾಮುಖ್ಯತೆಯನ್ನು ವಿವರಿಸಿದರು. ಕಾನೂನು ಶಿಕ್ಷಣವನ್ನು ಪಡೆದಂತವರು ಉತ್ತಮ ಸಮಾಜ ನಿರ್ಮಾಣಕ್ಕೆ ತಮ್ಮ ಕೊಡುಗೆಯನ್ನು ನೀಡಿ ಮಾದರಿ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬೇಕೆಂದರು. ಈ ಸಂದರ್ಭ ಕಾವೇರಿ ಕಾನೂನು ಕಾಲೇಜಿನ ಟ್ರಸ್ಟಿಗಳಾದ ವಿದೇಕ ರೆಡ್ಡಿ , ಪ್ರಶಾಂತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗ ಆಡಳಿತಾತ್ಮಕ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.








