
ಮೂರ್ನಾಡು ಸೆ.27 NEWS DESK : ಯೋಗಿ ನಾರಾಯಣ ಬಲಿಜ ಸಂಘದ ವತಿಯಿಂದ ಮಡಿಕೇರಿ ವಕೀಲರ ಸಂಘದ ಉಪಾಧ್ಯಕ್ಷರಾದ ಸಂಜಯ್ ರಾಜ್ ಹಾಗೂ ಕೊಡಗು ಪತ್ರಕರ್ತರ ಸಂಘದ ಖಜಾಂಚಿ ಟಿ.ಕೆ.ಸಂತೋಷ್ ಅವರನ್ನು ಸನ್ಮಾನಿಸಲಾಯಿತು. ಮೂರ್ನಾಡು ವಿಎಸ್ಎಸ್ ಸಭಾಂಗಣದಲ್ಲಿ ನಡೆದ ಸಂಘದ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗಣೇಶ್ ನಾಯ್ಡು ಅವರು ವಹಿಸಿ, ಕೊಡಗು ಬಲಿಜ ಸಂಘದ ಸದಸ್ಯತ್ವ ನೋಂದಾವಣೆ ಹಾಗೂ ಸಂಘದ ಕಾರ್ಯಕ್ರಮದ ಬಗ್ಗೆ ಮಾತನಾಡಿದವರು. ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಸುಬ್ರಮಣಿ. ಉಪಾಧ್ಯಕ್ಷರಾದ ಶ್ವೇತಾ ನರೇಂದ್ರ. ಮಡಿಕೇರಿ ತಾಲೂಕು ಕಾರ್ಯದರ್ಶಿ ಟಿ.ವಿ .ಲೋಕೇಶ್. ಸಂಘದ ಪದಾಧಿಕಾರಿಗಳಾದ ಬಾಲಕೃಷ್ಣ, ಎಲ್ಐಸಿ ಗಣೇಶ್ ರಮಿತಾ, ಯಶ್ವಂತ್, ನರೇಂದ್ರ, ವಿಜಯಕುಮಾರ್ ಅನಿತಾ ಮೊದಲಾದವರು ಹಾಜರಿದ್ದರು.









