
ಸುಂಟಿಕೊಪ್ಪ ಸೆ.27 NEWS DESK : ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಹಗಲಿರುಳು ಸೇವೆ ಸಲ್ಲಿಸಿ ನಗರ ಸೌಂದರ್ಯವನ್ನು ಹೆಚ್ಚಿಸಲು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪೌರ ಕಾರ್ಮಿಕರ ಸೇವೆ ಅನನ್ಯವಾದದ್ದು ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪಂಚಾಯಿತಿ ಪೌರ ಕಾರ್ಮಿಕರು ಹಾಗೂ ನೀರು ಗಂಟಿಗಳನ್ನು ಸನ್ಮಾನಿಸಿ ಮಾತನಾಡಿದರು. ಪೌರಕಾರ್ಮಿಕರು ಹಾಗೂ ನೀರುಗಂಟಿಗಳು ಕರ್ತವ್ಯ ನಿರ್ವಹಿಸಿದಿದ್ದರೇ ನಗರ, ಗ್ರಾಮಗಳು ಸ್ವಚ್ಛತೆ ಹಾಗೂ ಆರೋಗ್ಯವಂತರಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು. ಅವರುಗಳು ನಿರ್ವಹಿಸುವ ಕಾರ್ಯವನ್ನು ಸಾಮಾನ್ಯ ನಾಗರೀಕರು ನಿರ್ವಹಿಸಲು ಸಾಧ್ಯವೇ ಇಲ್ಲಾವೆಂದರಲ್ಲದೆ ಅವರ ಸೇವೆಯನ್ನು ಪ್ರಶಂಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣ ಪ್ರದೇಶಕ್ಕೆ ಹತ್ತಿರವಾಗಿರುವ ದೊಡ್ಡ ಗ್ರಾಮ ಪಂಚಾಯಿಗಳಲ್ಲಿ ಪೌರಕಾರ್ಮಿಕರ ಮತ್ತು ನೀರು ಗಂಟಿಗಳು ಸೇವೆಯಿದ್ದು ಇವರುಗಳು ಅವಿರತ ಪರಿಶ್ರಮದಿಂದ ಪ್ರತಿ ಬಡಾವಣೆಗಳು ನೈರ್ಮಲ್ಯ ಮುಕ್ತ ಪ್ರದೇಶವಾಗಿ ಕಾಣುತ್ತದೆ. ಆದರೆ ಪೌರಕಾರ್ಮಿಕರನ್ನು ಕಡೆಗಣಿಸದೆ ಗೌರವಯುತ್ತವಾಗಿ ನಡೆಸಿಕೊಳ್ಳುವ ಕಾರ್ಯವು ನಡೆಯಬೇಕಿದೆ. ಪ್ರತಿಯೊಂದು ಸಂಘ ಸಂಸ್ಥೆಯ ಸಾಮಾಜಿಕ ವೇದಿಕೆಗಳಲ್ಲಿ ಪೌರಕಾರ್ಮಿಕರನ್ನು ಅಭಿನಂದಿಸಿ ಗೌರವಿಸುವ ಕಾರ್ಯವು ನಡೆಯುವಂತಾಗಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಪೌರಕಾರ್ಮಿಕರು ಗ್ರಾಮಸ್ಥರೊಂದಿಗೆ ಸೌಜನ್ಯತೆಯಿಂದ ವರ್ತಿಸಬೇಕು ಅದೇ ರೀತಿಯಲ್ಲಿ ಗ್ರಾಮದ ನಿವಾಸಿಗಳು ಸಹ ಸೌಜನ್ಯ ಗೌರವವನ್ನು ನೀಡಬೇಕೆಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಉಪಾಧ್ಯಕ್ಷೆ ಶಿವÀಮ್ಮ, ಸದಸ್ಯರುಗಳಾದ ರಫೀಕ್‍ಖಾನ್, ಆಲಿಕುಟ್ಟಿ, ಶಬ್ಬೀರ್, ಪ್ರಸಾದ್‍ಕುಟ್ಟಪ್ಪ, ಪಿ.ಎಫ್.ಸಬಾಸ್ಟೀನ್, ಶಾಂತಿ, ಮಂಜುಳಾ (ರಾಸಥಿ), ವಸಂತಿ, ಪಂಚಾಯಿತಿ ಅಧಿಕಾರಿ ವಿ.ಜಿ.ಲೋಕೇಶ್, ಪಂಚಾಯಿತಿ ಸಿಬ್ಬಂದಿಗಳಾದ ಲೆಕ್ಕಾ ಪರಿಶೋಧಕಿ ಚಂದ್ರಕಲಾ, ಕರವಸೂಲಿಗಾರ ಶ್ರೀನಿವಾಸ್, ಗಣಕಯಂತ್ರ ಸಿಬ್ಬಂದಿ ಡಿ.ಎಂ.ಮಂಜುನಾಥ್, ಸಂದ್ಯಾ, ಬಿಆರ್‍ಡಬ್ಲ್ಯುಓ ಮಂದಣ್ಣ ಇದ್ದರು. ಕಾರ್ಯಕ್ರಮದ ಮೊದಲಿಗೆ ಪಂಚಾಯಿತಿ ಪೌರಕಾರ್ಮಿಕರು ಹಾಗೂ ನೀರು ಗಂಟಿಗಳಾದ ಸಪಾಯಿ ಕರ್ಮಾಚಾರಿ ಸಂಘದ ಜಿಲ್ಲಾಧ್ಯಕ್ಷರಾದ ರಂಗಸ್ವಾಮಿ, ರಂಗಸ್ವಾಮಿ, ವೀರಭದ್ರ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.









