
ಮಡಿಕೇರಿ ಸೆ.29 NEWS DESK : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಎಂ.ಎಸ್.ಎಂ.ಇ ನಿರ್ದೇಶನಾಲಯ, ಕೆ.ಸಿ.ಟಿ.ಯು. ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಸಂಯುಕ್ತ ಆಶ್ರಯದಲ್ಲಿ ಕೋವಿಡ್ ನಂತರ ನಷ್ಟಕ್ಕೆ ಒಳಗಾದ ಉದ್ಯಮಗಳ ಮರು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಆರ್‍ಎಎಂಪಿ ಯೋಜನೆಯಡಿಯಲ್ಲಿ ಟ್ರೇಡ್ಸ್ ಹಾಗೂ ಇಎಸ್‍ಎಂ ಯೋಜನೆ ಕುರಿತು ಕುಶಾಲನಗರದ ಖಾಸಗಿ ಹೋಟೆಲ್‍ನಲ್ಲಿ ಒಂದು ದಿನದ ಅರಿವು ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬೆಂಗಳೂರು ಟೆಕ್ಸಾಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿದ್ದರಾಜು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಕೆ.ಶಿವಲಿಂಗಯ್ಯ, ಗ್ರಾಮೀಣ ಕೈಗಾರಿಕೆಗಳು ಉಪ ನಿರ್ದೇಶಕರಾದ ರಘು ಸಿ.ಎನ್. ಉಪನಿರ್ದೇಶಕರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಲೀಡ್ ಡಿಸ್ಟ್ರಿಕ್ ಮ್ಯಾನೇಜರ್ ಆರ್.ಕೆ. ಬಾಲಚಂದ್ರ, ಮಡಿಕೇರಿ ಕೆ.ಎಸ್.ಎಫ್.ಸಿ. ಉಪ ವ್ಯವಸ್ಥಾಪಕರು(ಕಾನೂನು) ತೃಪ್ತಿ ಎಸ್., ಡಿ.ಎಸ್.ಎಂ.ಎಸ್. ಅಧ್ಯಕ್ಷರಾದ ಸಿ.ವಿ.ನಾಗೇಶ್, ಕೂಡಿಗೆ ರೆಸ್ಟಿ(ಆರ್‍ಎಸ್‍ಇಟಿಐ)ನ ಪ್ರಕಾಶ್ ಕುಮಾರ್, ಸಿಡಾಕ್‍ನ ಜಂಟಿ ನಿರ್ದೇಶಕರಾದ ಮಧು, ಕುಶಾಲನಗರ ಬ್ಯಾಂಕ್ ಆಫ್ ಬರೋಡದ ಮುಖ್ಯ ವ್ಯವಸ್ಥಾಪಕರಾದ ಸೆಂಥಿಲ್ ಕುಮಾರ್, ಮತ್ತಿತರು ಉಪಸ್ಥಿತರಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರ ಉಪನಿರ್ದೇಶಕರಾದ ವಿ.ಉಮೇಶ ಅವರು ಸ್ವಾಗತಿಸಿದರು. ಸಿಡಾಕ್ ನಿವೃತ್ತ ಜಂಟಿ ನಿರ್ದೇಶಕರಾದ ಮಂಜುನಾಥ ಸ್ವಾಮಿ ಅವರು ನಿರೂಪಿಸಿದರು.









