Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅಡುಗೆ ಅನಿಲದ ಕೊರತೆ : ಕೇಂದ್ರ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ*
  • *ಕನ್ನಡ ಸಾಹಿತ್ಯ ಸುದೀರ್ಘವಾದ ಕಾಲದಿಂದ ಜೀವಂತಿಕೆ ಉಳಿಸಿಕೊಂಡು ಬೆಳೆಯುತ್ತಿರುವ ಸಾಹಿತ್ಯ : ಪ್ರೊ.ಡಿ.ಕೆ.ಸರಸ್ವತಿ*
  • *ಸೋಮವಾರಪೇಟೆ : ಹೋಟೆಲ್ ಹಾಗೂ ಬೇಕರಿಗಳಿಗೆ ಆಹಾರ ನಿರೀಕ್ಷಕರ ಭೇಟಿ*
  • *ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ಬೃಹತ್ ಗಾತ್ರದ ಸ್ಟೀಲ್ ಪಾತ್ರೆಯ ಕೊಡುಗೆ*
  • *ಮಾ.18 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಕೊಡಗಿನಲ್ಲಿ 6,183 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ*
  • *ಮಾ.27 ರಂದು ಸೋಮವಾರಪೇಟೆಯಲ್ಲಿ ಶ್ರೀ ರಾಮನವಮಿ ಉತ್ಸವ*
  • *ಮಾ.22 ರಿಂದ ಬಿಳಿಗೇರಿಯ ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*
  • *ಕೊಡಗು ಮಹಿಳಾ ಕಾಂಗ್ರೆಸ್ ನೂತನ ಬ್ಲಾಕ್ ಅಧ್ಯಕ್ಷರುಗಳ ನೇಮಕ*
  • *ಮಡಿಕೇರಿಯಲ್ಲಿ 132ನೇ ವರ್ಷದ ಶ್ರೀ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾ.19 ರಿಂದ ಆರಂಭ*
  • *’ರತ್ನ ಶ್ರೀ’ ರಾಜ್ಯಮಟ್ಟದ ಪ್ರಶಸ್ತಿಗೆ ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ (ರಿ) ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಸಮೀರ್ ಆಯ್ಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಬೇಂಗ್ ನಾಡಿನ ಚೇರಂಬಾಣೆಯಲ್ಲಿ ಸಿಎನ್‌ಸಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ : ಜಾತಿ, ಭಾಷೆ, ಧರ್ಮದ ಕಾಲಂನಲ್ಲಿ “ಕೊಡವ” ಎಂದೇ ನಮೂದಿಸಿ : ಎನ್.ಯು.ನಾಚಪ್ಪ ಕರೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಬೇಂಗ್ ನಾಡಿನ ಚೇರಂಬಾಣೆಯಲ್ಲಿ ಸಿಎನ್‌ಸಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ : ಜಾತಿ, ಭಾಷೆ, ಧರ್ಮದ ಕಾಲಂನಲ್ಲಿ “ಕೊಡವ” ಎಂದೇ ನಮೂದಿಸಿ : ಎನ್.ಯು.ನಾಚಪ್ಪ ಕರೆ*

ಸೆಪ್ಟೆಂಬರ್ 30, 20257 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಸೆ.30 : ರಾಜ್ಯ ಸರಕಾರದ ವತಿಯಿಂದ ಇದೇ ಸೆ.22 ರಿಂದ ಅ.7ರ ವರೆಗೆ ನಡೆಯಲಿರುವ ಜಾತಿವಾರು ಗಣತಿಯ ಸಂದರ್ಭ ಜಾತಿ, ಭಾಷೆ ಮತ್ತು ಧರ್ಮದ ಕಾಲಂನಲ್ಲಿ “ಕೊಡವ” ಎಂದೇ ಬರೆಸುವ ಮೂಲಕ ಆ್ಯನಿಮಿಸ್ಟಿಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕೆ ಕೊಡವರು ಕಟಿಬದ್ಧರಾಗಿರಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕರೆ ನೀಡಿದ್ದಾರೆ. ಸಿಎನ್‌ಸಿ ಸಂಘಟನೆ ವತಿಯಿಂದ ಬೇಂಗ್ ನಾಡಿನ ಚೇರಂಬಾಣೆಯಲ್ಲಿ ನಡೆದ 14ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹಿಂದೂ ಧರ್ಮದ ಬಗ್ಗೆ ವಿಶ್ಲೇಷಿಸಿ ಹಿಂದೂ ಎನ್ನುವುದು ಒಂದು ಧರ್ಮವಲ್ಲ. ಅದೊಂದು ಜೀವನ ಶೈಲಿ ಎಂದು ಬಹಳ ಸೊಗಸಾಗಿ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಈ ಸಂಬಂಧ “ಹಿಂದೂ ಒಂದು ಧರ್ಮವಲ್ಲ, ಅದೊಂದು ಜೀವನ ಶೈಲಿ” ಎಂದು ಹೊರಡಿಸಿದ ತೀರ್ಪನ್ನು ಕೂಡ ಮೋದಿಯವರು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟಿçÃಯತೆ, ಇಂಡಿಯನ್ ನ್ಯಾಷನಲಿಸಂ ಮತ್ತು ಧರ್ಮವನ್ನು ಒಂದೇ ಸಂಕೋಲೆಯಲ್ಲಿ ಕಟ್ಟಬಾರದು. ನಾವು ಕೊಡವರು ಕೊಡಗಿಗೆ ಸೀಮಿತವಾದ ಆದಿಮಸಂಜಾತ ಆ್ಯನಿಮಿಷ್ಟಿಕ್ ನಂಬಿಕೆಯ ಅಪರೂಪದ ಅಪ್ಪಟ್ಟ ದೇಶ ಪ್ರೇಮಿ, ಅಖಂಡ ರಾಷ್ಟ್ರೀಯವಾದಿ ಜನರಾಗಿದ್ದಾರೆ. ಇಂದು ನಮ್ಮ ಜನ್ಮಭೂಮಿಯಲ್ಲಿ ನಮ್ಮ ಅಸ್ಮಿತೆ, ಸ್ವಾಭಿಮಾನ, ಅಸ್ತಿತ್ವ, ಹೆಗ್ಗುರುತು ಮತ್ತು ಭವಿಷತ್ತಿಗೆ ಬುನಾದಿಯಾಗಲು ಸಂವಿಧಾನ ಭದ್ರತೆ ಬೇಕು. ಆ ಮೂಲಕ ನಮ್ಮ ಎಲ್ಲಾ ಸಂವಿಧಾನಿಕ ಹಕ್ಕುಗಳ ಮೂಲಕ ಸ್ಥಿರೀಕರಣವಾಗಬೇಕಾದರೆ ರಾಜ್ಯ ದಾಖಲೆಯ ಮೂಲ ಸತ್ವವಾದ ಗಣತಿಯಲ್ಲಿ ನಾವು ಸೇರಬೇಕು. ಇದು ಮುಂದೆ 2026-27ರಲ್ಲಿ ನಡೆಯುವ ರಾಷ್ಟ್ರೀಯ ಜನಗಣತಿಯೊಂದಿಗಿನ ಜಾತಿ ಸಮೀಕ್ಷೆಗೂ ಪೂರಕವಾಗಲಿದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು.
ಇಂದು ಸಿಖ್ ಸಮುದಾಯ ಅಪ್ರತಿಮ ರಾಷ್ಟ್ರ ಪ್ರೇಮಿಗಳು, ಶೂರರು ಆಗಿದ್ದರೂ ಭಾರತದ ಅಸ್ಮಿತೆಯನ್ನು ರಕ್ಷಿಸಲು 550 ವರ್ಷಗಳ ಹಿಂದೆ ಸಿಖ್ ಧರ್ಮವನ್ನು ಸ್ಥಾಪಿಸಿದರು. ಅವರ ಧಾರ್ಮಿಕ ಲಾಂಛನವಾದ ಕಿರ್ಪಾಣಕ್ಕೆ ಬೇರೆಯೇ ಧರ್ಮದ ಕಾರಣಕ್ಕಾಗಿ ಸಂವಿಧಾನದ 25, 26ರ ಅಡಿಯಲ್ಲಿ ಶಾಶ್ವತ ರಾಜ್ಯಾಂಗ ಖಾತರಿ ಸಿಕ್ಕಿದೆ. ಅಂತೆಯೆ 1871-72ರ ರಿಂದ 1931ರ ತನಕ ಕೊಡವರನ್ನು ಧರ್ಮಾತೀತವಾದ ಪ್ರತ್ಯೇಕ ರೇಸ್ ಎಂದು ದಾಖಲಾಗಿದ್ದು ಸೇರಿದಂತೆ ಕೊಡವರ ಧಾರ್ಮಿಕ ಸಂಸ್ಕಾರ ತೊಕ್-ಗನ್ ಇಂಡಿಯನ್ ಆರ್ಮ್ಸ್ ಆ್ಯಕ್ಟ್ನಲ್ಲಿ ವಿಶೇಷ ಮಾನ್ಯತೆ ಪಡೆದಿದ್ದರು, 1941ರ ಜನಗಣತಿಯ ನಂತರ ಬಹುಸಂಖ್ಯಾತರ ಸಾಗರದ ಮಧ್ಯೆ ನಮ್ಮ ಹೆಗ್ಗುರುತು ಮುಳುಗಿ ಹೋದ ಹಿನ್ನೆಲೆಯಲ್ಲಿ ನಮ್ಮ ಅಪರೂಪತೆಯನ್ನು ಪ್ರದರ್ಶನ ರೂಪದಲ್ಲಿ ರುಜುವಾತು ಪಡೆಸುತ್ತಿದ್ದರು. ಜನಗಣತಿಯ ಮೂಲಕ ರಾಜ್ಯ ದಾಖಲೆಯಲ್ಲಿ ಇಲ್ಲದ ಕಾರಣ 2029ರ ಶಸ್ತಾçಸ್ತç ತಿದ್ದುಪಡಿ ಸಂದರ್ಭ ನಾವು ಆ ವಿಶೇಷತೆಯನ್ನು ಕಳೆದುಕೊಳ್ಳುವ ಅಪಾಯವಿದೆ. ಸಿಖ್‌ರಂತೆಯೇ ಕೊಡವರು ಯೋಧ ಪರಂಪರೆಯ ಜನರಾಗಿದ್ದು, ರಾಷ್ಟç ರಕ್ಷಣೆ ಮತ್ತು ರಾಷ್ಟç ಅಭಿವೃದ್ಧಿಯಲ್ಲಿ ನಮ್ಮ ಕಾಣಿಕೆ ಅಮೋಘವಾಗಿದ್ದು, ನಮ್ಮ ತೋಕ್-ಗನ್‌ಗೆ ರಾಜ್ಯಾಂಗ ಖಾತ್ರಿ ಸಂವಿಧಾನ 25-26ರ ಧಾರ್ಮಿಕ ಸ್ವಾತಂತ್ರದ ಅನ್ವಯ ದೊರಕಬೇಕಾದ್ದಲ್ಲಿ ಧರ್ಮ, ಜಾತಿ ಮತ್ತು ಭಾಷೆ ಕಾಲಂ ನಲ್ಲಿ ಕಡ್ಡಾಯವಾಗಿ ಕೊಡವ ಎಂದು ದಾಖಲಿಸಲೇಬೇಕು. ಆ ಮೂಲಕ ನಮ್ಮ ಪ್ರತ್ಯೇಕ ವ್ಯಕ್ತಿತ್ವ ಮತ್ತು ಅಸ್ತಿತ್ವವನ್ನು ಸಾಬೀತು ಪಡಿಸಬೇಕು. ಇದು ನಮ್ಮ ಅಸ್ಮಿತೆಯ ಪ್ರಶ್ನೆ ಎಂದು ಹೇಳಿದರು. ಕೊಡವರ ವೈಶಿಷ್ಟ್ಯ ಅವರಿಗಿರುವ ಆ್ಯನಿಮಿಷ್ಟಿಕ್ ಧಾರ್ಮಿಕ ಹಿನ್ನೆಲೆಯನ್ನು ಭಾಷೆ, ಜಾತಿ ಕಾಲಂ ನಲ್ಲಿ “ಕೊಡವ” ಎಂದು ದಾಖಲಿಸಿ, ರಾಜ್ಯಾಂಗ ಖಾರ್ತಿ ಪಡೆದಲ್ಲಿ ಮಾತ್ರ ಕೊಡವರ ಧಾರ್ಮಿಕ ಸಂಸ್ಕಾರ ತೋಕ್-ಗನ್ ವಿಶೇಷ ಹಕ್ಕು ಸಂವಿಧಾನದ 25 ಮತ್ತು 26ರ ಧಾರ್ಮಿಕ ಸ್ವಾತಂತ್ರ್ಯದಡಿ ಶಾಶ್ವತ ಮುಂದುವರೆಯಲು ಸಾಧ್ಯ. ಸಾಗರದಂತಿರುವ ಬಹು ಸಂಖ್ಯಾತ ಸಮುದಾಯದ ಮಧ್ಯೆ ಗುರುತಿಸಿ ಮುಳುಗಿ ವಿಶೇಷತೆ ಕಳೆದುಕೊಂಡು ಎಲ್ಲರಂತೆ ಆಗಿ ಹೋದಲ್ಲಿ 2029ರ ಶಸ್ತ್ರಾಸ್ತ್ರ ಕಾಯ್ದೆ ತಿದ್ದುಪಡಿಯ ಸಂದರ್ಭ ಕೊಡವರ ಈ ವಿಶೇಷ ಹಕ್ಕು ಕಳೆದುಕೊಳ್ಳುವುದು ಶತ ಸಿದ್ಧ. – ಕೊಡವರು ಪ್ರತ್ಯೇಕ ಎಂದು ದಾಖಲಿಸಲ್ಪಟ್ಟಿದೆ. ಕೊಡವ ಲ್ಯಾಂಡ್ ಸೆಲ್ಫ್ರೂಲ್, ಎಸ್.ಟಿ.ವರ್ಗೀಕರಣ ಮತ್ತು ಪಾರ್ಲಿಮೆಂಟ್ ಎಸೆಂಬ್ಲಿಯಲ್ಲಿ ಸಿಕ್ಕಿಂನ ಸಂಘ ಮತಕ್ಷೇತ್ರದಂತೆ ಪ್ರತ್ಯೇಕ ಕೊಡವ ಮತ ಕ್ಷೇತ್ರವನ್ನು ಪಡೆಯಬಹುದು ಎಂದರು. ಕೊಡವ ಅಸ್ಮಿತೆಯನ್ನು ಅದೃಶ್ಯ ಮಾಡಲು ರೋಹಿಂಗ್ಯ, ಬಾಂಗ್ಲದೇಶಿಗರು ಸೇರಿದಂತೆ ಕೊಡವ ಭಾಷೆ ಅನುಸರಿಸುವ, ನಕಲು ಮಾಡುವ ಕೊಡವ ಭಾಷೆ ಕಲಿತಿರುವ ಮತ್ತು ಮಾತನಾಡುವವರನ್ನೆಲ್ಲ ಕೊಡವರೊಂದಿಗೆ ಒಂದೇ ಬುಟ್ಟಿಯಲ್ಲಿ ಹಾಕಿ ಅವರೆಲ್ಲ ಕೊಡವರೆಂದು “ಧರ್ಮ ದೀಕ್ಷೆ” ನೀಡುವ ಸಂಚಿನ ಮೂಲಕ ಕೊಡವ ಅಸ್ಮಿತೆ ಮತ್ತು ಅಸ್ತಿತ್ವವನ್ನು ನಾಶ ಮಾಡುವ ಪಿತೂರಿಯೊಂದಿಗೆ ಕೊಡವ ವಿರೋಧಿ ಮತ್ತು ಸಂವಿಧಾನ ವಿರೋಧಿ ಶಕ್ತಿಗಳು ಕೆಲವು ದ್ರೋಹಿ ಕೊಡವರನ್ನು ಗುರಾಣಿಯಾಗಿ ಬಳಸುತ್ತ ಕೊಡವರ ವ್ಯಕ್ತಿತ್ವ ಮತ್ತು ಅಸ್ತಿತ್ವವನ್ನು ಇನ್ನಿಲ್ಲವಾಗಿಸುವ ಹವಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಾಂಗ್ಲಾದೇಶಿಗರು, ರೋಹಿಂಗ್ಯಗಳು, ಜಾರ್ಖಂಡ್, ಅಸ್ಸಾಂ ಮತ್ತು ಮಧ್ಯಪ್ರದೇಶದ ಅಕ್ರಮ ವಲಸಿಗರು ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರ ರೂಪದಲ್ಲಿ ಆಶ್ರಯ ಪಡೆದಿದ್ದಾರೆ. ಜಾತಿ ಜನಗಣತಿಯ ಸಂದರ್ಭ ಇವರುಗಳನ್ನು ಸಕ್ರಮಗೊಳಿಸಿದರೆ ಮತ್ತು ಇವರುಗಳಿಂದ ಕಾನೂನು ಉಲ್ಲಂಘನೆಯಾದರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಎಚ್ಚರಿಕೆ ನೀಡಿದರು. ಹಿಂದೂ ಮಿತಾಕ್ಷರ ಉತ್ತರಾಧಿಕಾರಿ ಕಾಯ್ದೆ ಪ್ರಕಾರ ಮದುವೆಯಲ್ಲಿ “ಸಪ್ತಪದಿ ಶಾಸ್ತ್ರ” ಕಡ್ಡಾಯ. ಆದರೆ ಕೊಡವರು ಸಪ್ತಪದಿ ಆಚರಿಸುವುದಿಲ್ಲ. ಮದುವೆಯ ಮುನ್ನಾದಿನ ಮಧುಮಗಳ ತಾಯಿ ಮಗಳ ಕೊರಳಿಗೆ ಪವಿತ್ರ ಪತ್ತಾಕ್ ಕಟ್ಟುತ್ತಾರೆ. ಕೊಡವರ ಎಲ್ಲಾ ಹಬ್ಬ ಹರಿದಿನಗಳು, ಶುಭದಿನಗಳು ಪಂದಿಕರಿ ಮತ್ತು ಮದ್ಯ ಸೇವನೆ ಕಡ್ಡಾಯ. ಆದರೂ ಕಾನೂನಿನಲ್ಲಿ ಬದಲಿ ವ್ಯವಸ್ಥೆ ಇಲ್ಲದ ಕಾರಣ, ತಾತ್ಕಲಿಕ ವ್ಯವಸ್ಥೆಯಾಗಿ ಕೊಡವರು, ಸಿಖ್ಖರು, ಜೈನರು ಮತ್ತು ಬೌದ್ಧರು ಹಿಂದೂ ಮಿತಾಕ್ಷರ ಉತ್ತರಾಧಿಕಾರಿ ಕಾಯ್ದೆ ಅಡಿಯಲ್ಲಿ ಮುಂದುವರೆದಿದ್ದಾರೆ. ಈ ಕಾರಣವನ್ನೆ ನೆಪ ಹುಡುಕಬಾರದು. ಕೊಡವರ ಪ್ರತ್ಯೇಕ ಅಸ್ತಿತ್ವ ಸಂವಿಧಾನದಡಿಯಲ್ಲಿ ಸ್ಥಿರವಾಗಿ ಕಾಪಾಡಲ್ಪಟ್ಟರೆ, ಭಾರತ ರಾಷ್ಟ್ರೀಯತೆಯ ಕಿರೀಟಕ್ಕೆ ಇನ್ನೊಂದು ವಿಶೇಷ ಗರಿ ಮೂಡಿದಂತಾಗುತ್ತದೆ ಎಂದು ಎನ್.ಯು.ನಾಚಪ್ಪ ವಿಶ್ಲೇಷಿಸಿದರು.
ಕೊಡಗಿನಲ್ಲಿ ಅಕ್ರಮ ವಲಸಿಗರು ಸಕ್ರಮಗೊಳ್ಳುವ ಅಥವಾ ಅಧಿಕೃತ ನಿವಾಸಿಗಳೆಂದು ಘೋಷಿಸಲ್ಪಡುವ ಅಪಾಯವಿದ್ದು, ಕೊಡವರು ಜಾಗೃತರಾಗಬೇಕಾಗಿದೆ. ಒಂದು ವೇಳೆ ಕಾನೂನು ಮೀರಿ ಅಕ್ರಮ ವಲಸಿಗರು ಸ್ಥಳೀಯ ನಿವಾಸಿಗಳೆಂದು ಘೋಷಿಸಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಜಿಲ್ಲಾಡಳಿತವೇ ಇದಕ್ಕೆ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಟರ್ಕಿ ದೇಶದ ಕಾರ್ಮಿಕರಿಗೆ ಪ್ಯಾರಿಸ್‌ನಲ್ಲಿ ಗೆಸ್ಟ್ ವರ್ಕರ್ ಪರ್ಮಿಟ್ ನೀಡಿದಂತೆ ಕೊಡಗಿನಲ್ಲೂ ಕಾರ್ಮಿಕ ಸಮಸ್ಯೆಯನ್ನು ನೀಗಿಸಲು ವಲಸಿಗ ಕಾರ್ಮಿಕರಿಗೆ ಗೆಸ್ಟ್ ವರ್ಕರ್ ಪರ್ಮಿಟ್ ನೀಡಬೇಕು. ವಾರ್ಷಿಕ ಕೆಲಸ ಮುಗಿದ ನಂತರ ಅವರ ರಾಜ್ಯ ಅಥವಾ ದೇಶಕ್ಕೆ ಹಿಂದಿರುಗಬೇಕು. ಮತ್ತೆ ಬರಬೇಕಾದರೆ ವರ್ಕ್ ಪರ್ಮಿಟ್ ನವೀಕರಣಗೊಳಿಸುವ ಪದ್ಧತಿ ಜಾರಿಗೆ ತರಬೇಕು. ಆ ಮೂಲಕ ಜನಸಂಖ್ಯೆ ಪಲ್ಲಟಕ್ಕೆ ತಡೆ ಹಾಕಬೇಕು ಎಂದರು. 2015ರಲ್ಲಿ ನರೇಂದ್ರ ಮೋದಿ-ಶೇಕ್ ಅಸಿನಾ ಒಪ್ಪಂದ ಡಾಕ ದಲ್ಲಿ ನಡೆದಾಗ ಅದರ ಮೂಲ ತಿರುಳೆ ಈ ಗೆಸ್ಟ್ ವರ್ಕರ್ ರ‍್ಮಿಟ್ ಆಗಿತ್ತು. ಕೊಡಗಿನಲ್ಲಿಯೂ ಅದನ್ನು ಮುಂದುವರೆಸಬೇಕು. ಆದರೆ ದುರುಳ ರಾಜಕರಣಿಗಳು-ಮಧ್ಯವರ್ತಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಅಕ್ರಮ ಕೂಟಕ್ಕೆ ಓಟ್ ಬ್ಯಾಂಕ್ ಸೃಷ್ಟಿ, ಭೂಮಿ ಕಬ್ಜ ಮತ್ತು ಮರ ಹನನ ಮುಖ್ಯ ಗುರಿಯಾಗಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಅಕ್ರಮ ವಲಸಿಗರಿಗೆ ಆಶ್ರಯ ಕಲ್ಪಿಸುವ ಏಕೈಕ ಉದ್ದೇಶದಿಂದ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಲಾಗುತ್ತಿದ್ದು, ದೊಡ್ಡ ಜಾಲವೊಂದು ಕಾರ್ಯಾಚರಿಸುತ್ತಿದೆ. ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳು ಕಾನೂನು ಬಾಹಿರವಾಗಿ ಕೊಡವ ಲ್ಯಾಂಡ್ ನಲ್ಲಿ ಆಶ್ರಯ ಪಡೆದು ತಮ್ಮ ಇರುವಿಕೆಯನ್ನು ಸಕ್ರಮಗೊಳಿಸಿಕೊಳ್ಳಲು ಮುಂದಾಗಿರುವುದು, ಸರಕಾರಿ ಯಂತ್ರಗಳು ಆಶ್ರಯ ನೀಡಲು ಹವಣಿಸುತ್ತಿರುವುದು ಮತ್ತು ದೊಡ್ಡ ದೊಡ್ಡ ಕಂಪೆನಿಗಳು ಬೆಂಬಲಕ್ಕೆ ನಿಂತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ನಕಲಿ ಆಧಾರ್ ಮತ್ತು ಐಡಿ ಕಾರ್ಡ್ ನೀಡುವ ಜಾಲ ಕಳೆದ ಎರಡು ವರ್ಷಗಳಿಂದ ಚಟುವಟಿಕೆಯಿಂದ ಇದ್ದು, ಈ ನಕಲಿ ಆಧಾರ್ ಕಾರ್ಡ್ನ್ನೇ ಬಳಸಿ ಅಕ್ರಮ ವಲಸಿಗರು ಕೊಡಗು ಮಾತ್ರವಲ್ಲದೆ ಹೊರ ಭಾಗದಲ್ಲೂ ತೋಟದ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕೊಡವ ಲ್ಯಾಂಡ್ ನ ಪ್ರತೀ ಗ್ರಾಮಗಳಲ್ಲಿ ಅವರದ್ದೇ ಆದ ಮಾರುಕಟ್ಟೆ, ಮನಿಚೈನ್, ಬಡ್ಡಿದಂಧೆ, ಗೋವು ಕಳ್ಳತನ, ಹಲ್ಲೆ, ಸುಲಿಗೆ, ಕಾಫಿ, ಕಾಳು ಮೆಣಸು ಕಳ್ಳತನ, ಕಳ್ಳಬೇಟೆ, ಅಕ್ರಮವಾಗಿ ಕಾವೇರಿ ನದಿಯಿಂದ ವಿದ್ಯುತ್ ತಂತಿ ಬಳಸಿ ಮೀನು ಹಿಡಿಯುವುದು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಭ್ರಷ್ಟ ರಾಜಕಾರಣಿಗಳು ಅಕ್ರಮ ವಲಸಿಗರ ಮಾಹಿತಿ ಕಲೆಹಾಕಿ ಅವರನ್ನೆಲ್ಲ ಮತದಾರರ ಪಟ್ಟಿಯಲ್ಲಿ ಸೇರಿಸಿ ನಿವೇಶನ ಮತ್ತು ವಸತಿ ನೀಡುವ ಭರವಸೆ ನೀಡುತ್ತಿದ್ದು, ಇದಕ್ಕೆ ಆಡಳಿತ ಯಂತ್ರ ಬೆಂಬಲ ನೀಡುತ್ತಿದೆ. ಜಾಗ ಮಂಜೂರು ಮಾಡಿ ಹಕ್ಕುಪತ್ರ ಕೊಡಿಸುವ ಮೂಲಕ ಮತದಾರರ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡು ಆ ಜನಸಂಖ್ಯೆ ತೂಕದ ಆಧಾರದಲ್ಲಿ ಮುಂದಿನ ಕ್ಷೇತ್ರ ಮರು ವಿಂಗಡಣೆ ಸಂದರ್ಭ ಕೊಡಗಿಗೆ ಪ್ರತ್ಯೇಕ ಪಾರ್ಲಿಮೆಂಟ್ ಸೀಟು ಸಿಗದಂತೆ ಮಾಡುವ ಹುನ್ನಾರ ಅಡಗಿದೆ.
ಕೊಡವರ ಬಾಹುಳ್ಯದ ಮೂಲ ನೆಲೆಯಾದ ಪಶ್ಚಿಮಘಟ್ಟದ ಪರ್ವತ ಶ್ರೇಣಿಯ ಸಂಕೋಲೆಗಳಾದ ಮರೆನಾಡಿನಿಂದ ಸೂರ್ಲಬ್ಬಿನಾಡ್ ವರೆಗೆ ಸೂಕ್ಷ್ಮ ಪರಿಸರ ವಲಯದ ಕುರಿತು ಹೈಕೋರ್ಟ್ ಸ್ಪಷ್ಟ ಆದೇಶವಿದ್ದರೂ ಅದನ್ನು ಗಾಳಿಗೆ ತೂರಿ ಸಾವಿರಾರು ಎಕರೆ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾ ದೇಶಿಗರು ಹಾಗೂ ರೋಹಿಂಗ್ಯಗಳಿಗೆ ಆಶ್ರಯ ಕಲ್ಪಿಸಲು ಷಡ್ಯಂತ್ರ ನಡೆದಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.
*ಕೊಡವ ಎಂದು ನಮೂದಿಸಿ* ಜಾತಿ ಜನಗಣತಿಯಲ್ಲಿ ಉತ್ತಮ ನಾಳೆಗಾಗಿ ಮತ್ತು ಅತ್ಯಂತ ನಗಣ್ಯ ಆ್ಯನಿಮಿಸ್ಟೆಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಜಾತಿ-ಭಾಷೆ, ಭಾಷೆ, ಧರ್ಮದ ಕಾಲಂನಲ್ಲಿ “ಕೊಡವ” ಎಂದೇ ನಮೂದಿಸುವಂತೆ ಸಲಹೆ ನೀಡಿದರು. ಕೊಡವರು ಯಾವುದೇ ಪಂಥಗಳು ಅಥವಾ ಉಪಪಂಗಡಗಳಿಲ್ಲದ ಏಕೈಕ, ಏಕ-ಜನಾಂಗೀಯ ಗುಂಪಾಗಿದ್ದು, ವಿಶಿಷ್ಟ ಗುರುತು, ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ವಿಭಿನ್ನ ಸಮುದಾಯದವರಾಗಿದ್ದಾರೆ ಎಂದರು. ಕುಟುಂಬ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಕೊಡವರು ಜನಸಂಖ್ಯಾ ನಿಯಂತ್ರಣದ ಮೂಲಕ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಅಮೋಘ ಕಾಣಿಕೆಯನ್ನು ನೀಡಿದ್ದಾರೆ. ರಾಷ್ಟ್ರೀಯ ಭದ್ರತೆಗಾಗಿ ಎರಡು ಜಾಗತಿಕ ಯುದ್ಧಗಳು, ಪಾಕಿಸ್ತಾನದ ವಿರುದ್ಧ ನಾಲ್ಕು ಯುದ್ಧ, ಚೀನಾದ ವಿರುದ್ಧ 1 ಯುದ್ಧ ಮತ್ತು ವಿಶ್ವ ಸಂಸ್ಥೆಯ ಅಸಂಖ್ಯಾತ ಶಾಂತಿ ಪಡೆಗಳಲ್ಲಿ ಭಾಗಿಯಾಗಿ ಹುತಾತ್ಮರಾದ ಕಾರಣ ಕೊಡವರ ಜನಸಂಖ್ಯೆ ಕಡಿಮೆಯಾಗಿದೆ. ರಾಷ್ಟ್ರ ನಿರ್ಮಾಣ ಮತ್ತು ರಾಷ್ಟ್ರೀಯ ಭದ್ರತೆಗಾಗಿ ಜನಸಂಖ್ಯೆಯನ್ನು ಕಳೆದುಕೊಂಡ ಕೊಡವರನ್ನು ಗೌರವಾಧರಗಳಿಂದ ಕಂಡು ಅವರ ನಗಣ್ಯ ಜನಸಂಖ್ಯೆಗೆ “ಸಿಕ್ಕಿಂನ ಸಂಘ ಮತಕ್ಷೇತ್ರದ” ಮಾದರಿಯಲ್ಲಿ ವಿಶೇಷ ಪ್ರಾತಿನಿಧ್ಯವನ್ನು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ನೀಡಬೇಕು ಎಂದು ಒತ್ತಾಯಿಸಿದರು. ಮುಕ್ಕೋಡ್ಲುವಿನ ಆದಿಮಸಂಜಾತ ವೃದ್ಧ ದಂಪತಿಗಳಾದ ಕಾಳಚಂಡ ನಾಣಿಯಪ್ಪ ಅವರ ತೋಟವನ್ನು ನಾಶ ಮಾಡಿ ಅವಮಾನಿಸಿರುವುದು ಅಮಾನವೀಯ ಕೃತ್ಯ ಮತ್ತು ಕ್ರೂರ ವ್ಯಂಗ್ಯವಾಗಿದೆ. ಮೂಲ ನಿವಾಸಿ ಕೊಡವರನ್ನು ಅವರ ಪ್ರಾಚೀನ ನೆಲೆಯಿಂದ ಪಲ್ಲಟಗೊಳಿಸಿ ಖಾಲಿಯಾದ ಆ ಪ್ರದೇಶದಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿ ಓಟ್ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಹುನ್ನಾರ ನಡೆದಿದೆ. ಇದು ಹೀಗೆ ಪುನರಾವರ್ತನೆಯಾದರೆ ನಾವು ಸಹಿಸಲಾರೆವು ಎಂದು ಎಚ್ಚರಿಕೆ ನೀಡಿದರು. 2018ರಲ್ಲಿ ಕೊಡವಲ್ಯಾಂಡ್ ನಲ್ಲಿ ವ್ಯಾಪಕ ಜಲಸ್ಫೋಟ ಮತ್ತು ಭೂಸ್ಫೋಟ ಸಂಭವಿಸಿ ಸಾವುನೋವು, ಕಷ್ಟನಷ್ಟಗಳು ಎದುರಾಗಿದ್ದರೂ ಪರಿಸರ ಕಾಳಜಿಯನ್ನು ಬಲಿಕೊಟ್ಟು ಬೃಹತ್ ವಿಲ್ಲಾ ಮತ್ತು ಟೌನ್‌ಶಿಪ್ ಮಾಡಲು ಆಡಳಿತಾಂಗ ಸಂಚು ರೂಪಿಸಿದೆ. ಜಿಲ್ಲಾಡಳಿತ ಎಗ್ಗಿಲ್ಲದೆ ಭೂಪರಿವರ್ತನೆಗೆ ಅವಕಾಶ ನೀಡುತ್ತಿದೆ. ಹೊರಗಿನ ಬಂಡವಾಳಶಾಹಿಗಳು ಕಪ್ಪುಹಣವನ್ನು ಬಳಸಿ ಭೂಖರೀದಿಯಲ್ಲಿ ತೊಡಗಿದ್ದಾರೆ. ದೊಡ್ಡ ದೊಡ್ಡ ರೆಸಾರ್ಟ್ಗಳು ತಲೆ ಎತ್ತುತ್ತಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತವೇ ಎದುರಾಗುವ ಸಾಧ್ಯತೆಗಳಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಆದಿಮಸಂಜಾತ ಕೊಡವರಿಗೆ ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯೊಂದಿಗೆ ಸ್ವಯಂ ಆಡಳಿತ ಮತ್ತು ಆಂತರಿಕ ಸ್ವಯಂನಿರ್ಣಯದ ಹಕ್ಕನ್ನು ಖಾತ್ರಿ ಪಡಿಸುವುದರಿಂದ ಈ ರೀತಿಯ ಅಕ್ರಮ ಮತ್ತು ಅನಾಹುತಗಳನ್ನು ತಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸೂರ್ಯ-ಚಂದ್ರ, ಭೂದೇವಿ, ಪ್ರಕೃತಿ ದೇವಿ, ಜಲದೇವಿ, ವನದೇವಿ, ಸಂವಿಧಾನ, ಗುರು ಕಾರೋಣ ಹೆಸರಿನಲ್ಲಿ ಸಿಎನ್‌ಸಿಯ ಕೊಡವಲ್ಯಾಂಡ್ ಹೋರಾಟದೊಂದಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರತಿಜ್ಞೆ ಸ್ವೀಕರಿಸಿದರು. ರಾಷ್ಟ್ರಗೀತೆ ಜನ-ಗಣ-ಮನದೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.
*ಅ.11 ರಂದು ನೂರೊಕ್ಕ ನಾಡಿನ ಚೆಟ್ಟಳ್ಳಿಯಲ್ಲಿ ಜನಜಾಗೃತಿ*
ಕೊಡವ ಲ್ಯಾಂಡ್ ಗೆ ಹಾಗೂ ಕೊಡವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಟಿ.ಶೆಟ್ಟಿಗೇರಿ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ನಾಪೋಕ್ಲು, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ವಿರಾಜಪೇಟೆ, ಗೋಣಿಕೊಪ್ಪ ಮತ್ತು ಮೂರ್ನಾಡು ಮಾನವ ಸರಪಳಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಅ.11 ರಂದು ಬೆಳಿಗ್ಗೆ 10.30 ಗಂಟೆಗೆ ನೂರೊಕ್ಕ ನಾಡಿನ ಚೆಟ್ಟಳ್ಳಿಯಲ್ಲಿ 15ನೇ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ತಿಳಿಸಿದರು. ಮಂದಪಂಡ ರಚನ ಮನೋಜ್, ಕಲ್ಮಾಡಂಡ ದೇಚಮ್ಮ ಮೇದಪ್ಪ, ಮಂದಪಂಡ ಹರಿಣಿ ಅಯ್ಯಣ್ಣ, ಕಲ್ಮಾಡಂಡ ದಮಯಂತಿ ಮೊಣ್ಣಪ್ಪ, ಮಂದಪಂಡ ನಿಹಾಲಿ ದೇಚಕ್ಕ, ಪಟ್ಟಮಾಡ ಸೀತಮ್ಮ, ಅಳ್ಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಬೊಳರ್ಪಂಡ ಚೆಂಗಪ್ಪ, ನಾಪಂಡ ಗಣೇಶ್, ಮಂದಪಂಡ ಸೂರಜ್, ಮಂದಪಂಡ ದೀಪಕ್, ಪೊನ್ನಚೆಟ್ಟೀರ ಸುರೇಶ್, ಕೇಕಡ ಬೋಪಣ್ಣ, ಕೇಕಡ ಜೋಯಪ್ಪ, ಇಂದಂಡ ಸೋಮಯ್ಯ, ಪಟ್ಟಮಾಡ ರವಿ, ಪೊಡನೋಳಂಡ ತೇಜ, ತೇಲಂಪಂಡ ಬೋಪಯ್ಯ, ಪೊನ್ನಚೆಟ್ಟಿರ ರಮೇಶ್ ಗಣಪತಿ, ಪೊಡನೋಳಂಡ ಮಧು, ಪೊನ್ನಚೆಟ್ಟಿರ ಮೋಹನ್, ಕುಂಚೆಟ್ಟಿರ ಗೋಪಾಲ್, ಕೂಪದಿರ ಸಾಬು, ಕಾಡಂಡ ಅಪ್ಪ ಸ್ವಾಮಿ, ಕೇಕಡ ರಮೇಶ್, ಕಲ್ಮಾಡಂಡ ವಾಸು, ಇಂದಂಡ ದೇವಯ್ಯ, ಮೊಟ್ಟೆಯಂಡ ವಾಸು ಕಾಳಪ್ಪ, ಕೇಕಡ ಪಳಂಗಪ್ಪ, ಕುಂಜೆಟ್ಟಿರ ಅಜಿತ್, ಕಲ್ಮಾಡಂಡ ಜಗ್ಗು, ಕೇಕಡ ತಿಮ್ಮಯ್ಯ, ಪರ್ವಂಡ ಕಾಳಪ್ಪ, ಪಟ್ಟಮಾಡ ಧನು ಬೆಳ್ಯಪ್ಪ, ಇಂದಂಡ ಪೂವಯ್ಯ, ಅಜ್ಜಿನಂಡ ಮಾಚಯ್ಯ, ಬಡ್ಡಿರ ಪಳಂಗಪ್ಪ, ಬೊಡಂಡ ಸೋಮಯ್ಯ, ಇಂದಂಡ ಬೋಪಣ್ಣ, ಕುಂಚೆಟ್ಟಿರ ದೇವಯ್ಯ, ಚಿಯಬೇರ ಬಿದ್ದಪ್ಪ, ಬಡ್ಡಿರ ಮುದ್ದಪ್ಪ, ಚಿಯಬೇರ ಮುದ್ದಪ್ಪ, ಪಟ್ಟಮಾಡ ತಿಮ್ಮಯ್ಯ, ಪಟ್ಟಮಾಡ ನಾಚಪ್ಪ, ಪಟ್ಟಮಾಡ ಮಧು, ಕುಂಚೆಟ್ಟಿರ ನಂಜಪ್ಪ, ತೇಲಪಂಡ ನಂದ, ಕಬ್ಬಚ್ಚಿರ ಶರೀನ್, ಇಂದಂಡ ವಾಸು, ಕಾಡಂಡ ಶರತ್, ಪೊನ್ನಚೆಟ್ಟಿರ ಮಂದಣ್ಣ, ಮಂದಪಂಡ ವಿನು ಅಯ್ಯಣ್ಣ, ಕುಂಚೆಟ್ಟಿರ ರಮೇಶ್, ಮಂದಪಂಡ ನಾಣಯ್ಯ, ಚಿಯಬೇರ ರೋಶನ್ ತಮ್ಮಯ್ಯ, ಪಟ್ಟಮಾಡ ಅಶೋಕ್, ಅಳ್ಮಂಡ ನೆಹರು, ಕೊಟ್ಟುಕತ್ತೀರ ಅರುಣ್ ಅಪ್ಪಯ್ಯ, ಮಂದಪಂಡ ಅರಸು, ಮಂಗೇರಿ ಸೋಮಯ್ಯ, ಮಂದಪಂಡ ವಿಹಾನ್ ದೇವಯ್ಯ, ಕೇಕಡ ಅಪ್ಪಣ್ಣ, ಮೊಟ್ಟೆಯಂಡ ಮೊಣ್ಣಪ್ಪ, ಮೊಟ್ಟೆಯಂಡ ಕುಟ್ಟಪ್ಪ, ಇಂದಂಡ ಗಣೇಶ್, ಬಾಚರಣಿಯಂಡ ಕಾರ್ಯಪ್ಪ, ಬಾಚರಣಿಯಂಡ ಹ್ಯಾರಿ, ಮಂದಪಂಡ ಜೀವನ್, ಬಾಚರಣಿಯಂಡ ಗಣಪತಿ, ಬೊಳರ್ಪಂಡ ನೆಹರು ಪೂವಯ್ಯ, ಅಜ್ಜಿನಂಡ ಸುರೇಶ್, ಬಡ್ಡಿರ ನಂದ ಕುಮಾರ್, ಅಯ್ಯಂಡ ಹರೀಶ್, ಕೊಟ್ಟುಕತ್ತೀರ ಗೌತಮ್ ಪೊನ್ನಣ್ಣ, ಕೇಕಡ ಸುಬ್ಬಯ್ಯ, ಅಜ್ಜಿನಂಡ ವಿಶಾಕ್, ತೇಲಪಂಡ ಅಯ್ಯಪ್ಪ, ಅಯ್ಯಂಡ ಗಣೇಶ್, ಅಯ್ಯಂಡ ಪೆಮ್ಮಯ್ಯ, ಬಾಚರಣಿಯಂಡ ಲವ, ಪೊಡನೊಳಂಡ ಸುಬ್ಬಯ್ಯ, ತೇಲಪಂಡ ಸುಬ್ಬಯ್ಯ, ಅಯ್ಯಂಡ ರಾಮಕೃಷ್ಣ, ಪಟ್ಟಮಾಡ ಪ್ರಧಾನ್ ತಿಮ್ಮಯ್ಯ, ಪೊಡನೊಳಂಡ ಜೀವನ್, ಬಡ್ಡಿರ ಸುರೇಶ್, ಕೇಕಡ ಯಶಸ್ಸು, ಕೇಕಡ ಬೋಪಣ್ಣ, ಬಡ್ಡಿರ ಗಣಪತಿ, ಅಜ್ಜಿನಂಡ ಜಗದೀಶ್, ಕುಂಚೆಟ್ಟಿರ ಕಾರ್ಯಪ್ಪ, ಬಡ್ಡಿರ ಕಾರ್ತಿಕ್, ಮೇರಿಯಂಡ ಕವಿನ್ ಕಾರ್ಯಪ್ಪ, ಕೇಕಡ ಧರ್ಮಯ್ಯ, ಅಜ್ಜಿನಂಡ ಗಿರಿ, ಪ್ಟಟಮಾಡ ವಿಜು, ಬಡ್ಡಿರ ಸೋಮಣ್ಣ, ಚೌರೀರ ಅಜಿತ್, ಇಂದಂಡ ಸುಬ್ಬಯ್ಯ, ಅಯ್ಯಂಡ ಅಯ್ಯಪ್ಪ, ಪರ್ವಂಡ ಪ್ರದೀಪ್, ಮೊಟ್ಟೆಯಂಡ ಕಾರ್ಯಪ್ಪ, ಮೊಟ್ಟೆಯಂಡ ತೀರ್ಥ, ಮೊಟ್ಟೆಯಂಡ ಪಾರ್ಥ ಭಾಗವಹಿಸಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅಡುಗೆ ಅನಿಲದ ಕೊರತೆ : ಕೇಂದ್ರ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ*

ಮಾರ್ಚ್ 17, 2026

*ಕನ್ನಡ ಸಾಹಿತ್ಯ ಸುದೀರ್ಘವಾದ ಕಾಲದಿಂದ ಜೀವಂತಿಕೆ ಉಳಿಸಿಕೊಂಡು ಬೆಳೆಯುತ್ತಿರುವ ಸಾಹಿತ್ಯ : ಪ್ರೊ.ಡಿ.ಕೆ.ಸರಸ್ವತಿ*

ಮಾರ್ಚ್ 17, 2026

*ಸೋಮವಾರಪೇಟೆ : ಹೋಟೆಲ್ ಹಾಗೂ ಬೇಕರಿಗಳಿಗೆ ಆಹಾರ ನಿರೀಕ್ಷಕರ ಭೇಟಿ*

ಮಾರ್ಚ್ 17, 2026

*ಕನ್ನಡ ಸಾಹಿತ್ಯ ಸುದೀರ್ಘವಾದ ಕಾಲದಿಂದ ಜೀವಂತಿಕೆ ಉಳಿಸಿಕೊಂಡು ಬೆಳೆಯುತ್ತಿರುವ ಸಾಹಿತ್ಯ : ಪ್ರೊ.ಡಿ.ಕೆ.ಸರಸ್ವತಿ*

ಮಾರ್ಚ್ 17, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮಾ.17 NEWS DESK : ದತ್ತಿ ಉಪನ್ಯಾಸಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸುವುದರೊಂದಿಗೆ ಹೊಸ ವಿಚಾರಗಳನ್ನು ತಿಳಿಸಿ ಕನ್ನಡ…

*ಸೋಮವಾರಪೇಟೆ : ಹೋಟೆಲ್ ಹಾಗೂ ಬೇಕರಿಗಳಿಗೆ ಆಹಾರ ನಿರೀಕ್ಷಕರ ಭೇಟಿ*

ಮಾರ್ಚ್ 17, 2026

*ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ಬೃಹತ್ ಗಾತ್ರದ ಸ್ಟೀಲ್ ಪಾತ್ರೆಯ ಕೊಡುಗೆ*

ಮಾರ್ಚ್ 17, 2026

*ಮಾ.18 ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ : ಕೊಡಗಿನಲ್ಲಿ 6,183 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ*

ಮಾರ್ಚ್ 17, 2026

*ಮಾ.27 ರಂದು ಸೋಮವಾರಪೇಟೆಯಲ್ಲಿ ಶ್ರೀ ರಾಮನವಮಿ ಉತ್ಸವ*

ಮಾರ್ಚ್ 17, 2026

*ಮಾ.22 ರಿಂದ ಬಿಳಿಗೇರಿಯ ಶ್ರೀ ಭಗವತಿ ದೇವರ ವಾರ್ಷಿಕೋತ್ಸವ*

ಮಾರ್ಚ್ 17, 2026

*ಕೊಡಗು ಮಹಿಳಾ ಕಾಂಗ್ರೆಸ್ ನೂತನ ಬ್ಲಾಕ್ ಅಧ್ಯಕ್ಷರುಗಳ ನೇಮಕ*

ಮಾರ್ಚ್ 17, 2026

*ಮಡಿಕೇರಿಯಲ್ಲಿ 132ನೇ ವರ್ಷದ ಶ್ರೀ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾ.19 ರಿಂದ ಆರಂಭ*

ಮಾರ್ಚ್ 17, 2026

*’ರತ್ನ ಶ್ರೀ’ ರಾಜ್ಯಮಟ್ಟದ ಪ್ರಶಸ್ತಿಗೆ ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ (ರಿ) ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಸಮೀರ್ ಆಯ್ಕೆ*

ಮಾರ್ಚ್ 17, 2026

*ಕಾರ್ಯವೈಖರಿಗೆ ಮೆಚ್ಚುಗೆ : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಗೆ ಕೊಡುಗೆ*

ಮಾರ್ಚ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.