ಮಡಿಕೇರಿ NEWS DESK ಅ.1 : ನಗರದ ಶ್ರೀ ಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿ 49ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದ್ದು, ಈ ಬಾರಿ ಮಂಟಪದಲ್ಲಿ ಶ್ರೀ ವಿಘ್ನರಾಜನಿಂದ ಮಮತಾಸುರನ ಸಂಹಾರ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದೆ ಎಂದು ಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಸಿ.ಯು.ವಿಘ್ನೇಶ್ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್ ಗಳನ್ನು ಬಳಸಲಾಗುತ್ತಿದ್ದು, ಕಥಾ ಸಾರಾಂಶವನ್ನು ವೆಂಕಟೇಶ್ ಕುಡ್ತೆಕರ್, ಧೀರಜ್ ವೆಂಕಟೇಶ್ ಕುಡ್ತೆಕರ್ ಆಯ್ಕೆ ಮಾಡಿದ್ದಾರೆ. ಮಡಿಕೇರಿ ಪೂಜಾ ಲೈಟಿಂಗ್‌ನ ನಜೀರ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕ ಹಾಗೂ ಸ್ಟುಡಿಯೋ ವ್ಯವಸ್ಥೆಯನ್ನು ಮಡಿಕೇರಿಯ ಸಂಗೀತ ಇವೆಂಟ್ಸ್ ನ ಎಚ್.ಪಿ. ಲೋಕೇಶ್ ಮಾಡಲಿದ್ದಾರೆ. ಒಟ್ಟು 27 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಮಂಗಳೂರಿನ ಯತೀಶ್ ಪ್ರಕಾಶ್ ಹಾಗೂ ಹುದುಬೂರಿನ ಮಹದೇವಪ್ಪ ಆಂಡ್ ಸನ್ಸ್ ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಮಂಟಪದ ಉಸ್ತುವಾರಿ ಹಾಗೂ ಟ್ರ್ಯಾಕ್ಟರ್ ನೆಟ್ವರ್ಕ್ ಮತ್ತು ಚಲನವಲನ ವ್ಯವಸ್ಥೆಯನ್ನು ಸ್ಟುಡಿಯೋದ ಎಂ.ವಿ. ನವೀನ್, ಸುಲ್ತಾನ್, ದೀಕ್ಷಿತ್, ಜಲೀಲ್, ನವಾಜ್ ಸವಾದ್, ನೌಫಲ್, ಆರಿಸ್ ಮಾಡಲಿದ್ದಾರೆ. ವೆಲ್ಡಿಂಗ್ ಮತ್ತು ಕ್ರೇನ್ ವ್ಯವಸ್ಥೆಯನ್ನು ಮಡಿಕೇರಿಯ ಅರ್ಮಾನ್ ಮತ್ತು ತೌಫಿಕ್ ಮಾಡಲಿದ್ದಾರೆ. ಪ್ಲಾಟ್ ಫಾರಂನ್ನು ಪುನೀತ್ ತಂಡ ನಿರ್ಮಿಸಲಿದೆ. ಫೈರ್ ವರ್ಕ್ ಕಲಾಕೃತಿಗಳಿಗೆ ಸ್ಪೆಷಲ್ ಎಫೆಕ್ಟ್ನ್ನು ಹೈದರಾಬಾದ್‌ನ ವಿಕ್ಟರಿ ಕ್ರಿಯೇಷನ್ಸ್, ಟೀ99 ಮತ್ತು ಟರ್ಬೊ ಪೊಪರ್ನನ ಕವನ್ ನೀಡಲಿದ್ದಾರೆ. ಧ್ವನಿಮುದ್ರಣವನ್ನು ಪ್ರಜ್ವಲ್ ಭಟ್ಕಳ್ ಮತ್ತು ಟೀಂ99 ಮಾಡಲಿದ್ದು, ಪೂಕೋಡ್‌ನ ಡಿವೈನ್ ಬ್ಯಾಂಡ್ ಸೆಟ್ ಮಂಟಪವನ್ನು ಮುನ್ನಡೆಸಲಿದೆ. ಒಟ್ಟು ರೂ.43 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ ಎಂದು ವಿಘ್ನೇಶ್ ಮಾಹಿತಿ ನೀಡಿದರು.











