ಮಡಿಕೇರಿ ಅ.14 NEWS DESK : ರಾತ್ರೋರಾತ್ರಿ ಖದೀಮರು ಶ್ರೀಗಂಧದ ಮರ ಕಳವು ಮಾಡಿರುವ ಘಟನೆ ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ನಡೆದಿದೆ. ನಿಟ್ಟೂರು ಕಾರ್ಮಾಡು ಮೆಟ್ರಿಕ್ ಪೂರ್ವ ಗಿರಿಜನ ಬಾಲಕಿಯರ ವಸತಿ ನಿಲಯದ ಕಾಂಪೌಂಡ್ ನಲ್ಲಿ ಬೆಳೆದು ನಿಂತಿದ್ದ ಶ್ರೀಗಂಧ ಮರವನ್ನು ತಡರಾತ್ರಿ ಕಡಿದು ಕಳ್ಳತನ ಮಾಡಿದ್ದಾರೆ. ಗ್ರಾಮ ಸಭೆಯಲ್ಲಿ ವಸತಿನಿಲಯದ ಕ್ಯಾಮರಾವನ್ನು ಮರ ಕಾಣುವ ಹಾಗೆ ತಿರುಗಿಸಲು ಗ್ರಾಮಸ್ಥರು ಪ್ರಾಸ್ತಪಿಸಿದ್ದರು. ಈ ವಿಷಯ ತಿಳಿದ ಚೋರರು ತಾರಾತೂರಿಯಲ್ಲಿ ಕೃತ್ಯವೆಸಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ವಾರವಷ್ಟೇ ನಿಟ್ಟೂರು ಮುಖ್ಯ ರಸ್ತೆಯ ಬದಿಯ ಮನೆಗಳಲ್ಲಿ ಕಳ್ಳತನ ನಡೆದಿತ್ತು. ಕಳ್ಳರ ಬಂಧನಕ್ಕೆ ಕ್ರಮ ಕೖಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.











