
ಮಡಿಕೇರಿ ನ.1 NEWS DESK : `ಕನ್ನಡ’ ತಾಯಿಯ ತೇರನೆಳೆಯುವ ಕಾರ್ಯಕ್ಕೆ ಕನ್ನಡಿಗರೆಲ್ಲರೂ ಕೈಜೋಡಿಸುವಂತೆ ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿಗಳಾದ ಟಿ.ಪಿ.ರಮೇಶ್ ಕರೆ ನೀಡಿದರು. ಕೊಡಗು ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ ಕೇಶವಕಾಮತ್ ಅವರು ಕನ್ನಡ ಧ್ವಜಾರೋಹಣವನ್ನು ನೆರವೇರಿಸಿ ಶುಭಕೋರಿದರು. ಈ ಸಂದರ್ಭ ಟಿ.ಪಿ.ರಮೇಶ್ ಮಾತನಾಡಿ, ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಏಕೀಕರಣಕ್ಕೆ ಹಲ ಮಹನೀಯರು ಶ್ರಮಿಸಿದ್ದಾರೆಂದು ತಿಳಿಸಿ, ಕನ್ನಡದ ಸಾಹಿತ್ಯ , ಪರಂಪರೆ, ಸಂಸ್ಕøತಿಯ ಬೆಳವಣಿಗೆಗಳಿಗೆ ಪ್ರತಿಯೊಬ್ಬರು ಶ್ರಮಿಸುವಂತೆ ತಿಳಿಸಿದರು. ಈ ಸಂದರ್ಭ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್, ಹಿರಿಯ ಟ್ರಸ್ಟಿಗಳಾದ ವಿ.ಪಿ.ಸುರೇಶ್, ಶ್ರೀಧರ್ ಹೂವಲ್ಲಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ಎಂ.ವಾಸು ರೈ, ಪುದಿಯನೆರವನ ರೇವತಿ ರಮೇಶ್, ಸಿಬ್ಬಂದಿಗಳಾದ ಯಮುನಾ ಬಜೆಕೋಡಿ, ಶೈನಿ ಆಲ್ವಿನ್ ರಾಜೇಶ್, ಉದ್ಯಮಿಗಳಾದ ಅಶ್ರಫ್, ರೆಹಮಾನ್ ಪುಟಾಣಿಗಳಾದ ತರುಣ್ ಬಜೆಕೋಡಿ, ಮತ್ತು ದೇಶಿಕ ರಾಜೇಶ್ ಇನ್ನಿತರರು ಭಾಗವಹಿಸಿದ್ದರು.









