
ಮಡಿಕೇರಿ ನ.1 NEWS DESK : ತಿತಿಮತಿಯಲ್ಲಿ ರೂ.2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ ಕಾಮಗಾರಿಗೆ ಉಸ್ತುವಾರಿ ಸಚಿವ ಎನ್.ಎಸ್ ಭೋಸರಾಜು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು. ತಿತಿಮತಿಯಿಂದ ಪಾಲಿಬೆಟ್ಟಕ್ಕೆ ತೆರಳುವ ಜಿಲ್ಲಾ ರಸ್ತೆಯು ಮಳೆಯಿಂದ ತೀವ್ರ ಹಾನಿಗೊಳಗಾಗಿದ್ದನ್ನು ಮನಗಂಡ ಶಾಸಕರು, ಮಳೆ ನಿಂತ ಕೂಡಲೇ ಕಾಮಗಾರಿ ಆರಂಭಿಸಲು ಅನುದಾನ ಒದಗಿಸಿದ್ದರು. ಈ ರಸ್ತೆಯಲ್ಲಿ ನೂರಾರು ಜನ ದಿನನಿತ್ಯ ಪ್ರಯಾಣಿಸುವುದರಿಂದ, ಕಾಮಗಾರಿ ಬಳಿಕ ಸಾರ್ವಜನಿಕರ ಅನುಕೂಲಕ್ಕೆ ಈ ರಸ್ತೆ ತೆರವುಗೊಳ್ಳಲಿದೆ. ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಧರ್ಮಜ ಉತ್ತಪ್ಪ, ವಲಯ ಅಧ್ಯಕ್ಷರು ನವೀನ್, ಪಕ್ಷದ ಪ್ರಮುಖರು ಬೇನ್ನಿ, ಪಂಕಜ, ಭಸಂತ್, ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.










