ಮಡಿಕೇರಿ ನ.3 NEWS DESK : ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ರೋಗ ಕಾರ್ಯಕ್ರಮದಡಿಯಲ್ಲಿ ಸಕ್ರಿಯ ಕ್ಷಯ ರೋಗಪತ್ತೆ ಮತ್ತು ಚಿಕಿತ್ಸೆ ಆಂದೋಲನ ಕಾರ್ಯಕ್ರಮ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣಧಿಕಾರಿ ಡಾ.ಸನ್ನತ್ ಕುಮಾರ್ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳು ಡಾ.ಇಂದೂಧರ ಕೆ ಕಾರ್ಯಕ್ರಮ ಉದ್ಘಾಟಿಸಿದರು. ಮನೆ ಮನೆ ಭೇಟಿ ಮಾಡಿ ಕ್ಷಯ ರೋಗದ ಲಕ್ಷಣಗಳಿದ್ದರೆ ಕಫದ ಮಾದರಿಯ ಸಂಗ್ರಹಣೆ ಮಾಡಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಲು ವೈದ್ಯಾಧಿಕಾರಿಗಳು ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಚಿನ್ಮಯಿ, ಸಿಬ್ಬಂದಿಗಳಾದ ಹಿರಿಯ ಪ್ರಾ. ಆ.ಸುರಕ್ಷಾಧಿಕಾರಿ, ಪಾರ್ವತಿ ಮತ್ತು ಕಿರಿಯ ಪ್ರಾ ಆ ಸುರಕ್ಷಾಧಿಕಾರಿ ಶ್ವೇತ ಮತ್ತು ದಿವ್ಯ, ಹಿರಿಯ ಅರೋಗ್ಯ ನಿರೀಕ್ಷೆಣಾಧಿಕಾರಿ ಮಹೇಶ್, S T L S ಪುಟ್ಟರಾಜು ಮತ್ತು ಜಿಲ್ಲಾ ಮೇಲ್ವಿಚಾರಕರಾದ ಶ್ರೀಧರ್, ಎಲ್ಲಾ ಆಶಾ ಕಾರ್ಯಕರ್ತೆ ಭಾಗವಹಿಸಿದರು.












