ಮಡಿಕೇರಿ ನ.11 NEWS DESK : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ “ನನ್ನ ಕಲ್ಪನೆಯ ಸ್ವಚ್ಛ ಕೊಡಗು” ಎಂಬ ವಿಚಾರವಾಗಿ ಪ್ರಬಂಧ ಸ್ಪರ್ಧೆಯನ್ನು ಶಾಲಾ ಮಕ್ಕಳಿಗೆ ಆಯೋಜಿಸುತ್ತಿದ್ದು, ಜಿಲ್ಲೆಯಾದ್ಯಂತ ಇರುವ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಬಹುದೆಂದು ಕೋರಲಾಗಿದೆ. ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಐದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಕೈ ಬರಹ ಅಥವಾ ಡಿಟಿಪಿ ಮಾಡಿ ಕಳುಹಿಸಬೇಕು. ಕಡ್ಡಾಯವಾಗಿ ಕನ್ನಡದಲ್ಲಿಯೇ ಬರೆಯಬೇಕು. ಪ್ರಬಂಧವು 200 ವಾಕ್ಯಗಳನ್ನು ಮೀರಬಾರದು. ಯಾವುದೇ ರೀತಿಯ ಕೃತಕ ಬುದ್ದಿ ಮತ್ತೆಯನ್ನು(ಎ.ಐ) ಉಪಯೋಗಿಸುವಂತಿಲ್ಲ. ದಿನಾಂಕ 30/11/2025ರ ಒಳಗೆ ಕೆಳಗಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಬೇಕು, ವಿದ್ಯಾರ್ಥಿಯ ಹೆಸರು, ತರಗತಿ, ವ್ಯಾಸಂಗ ಮಾಡುತ್ತಿರುವ ಶಾಲೆ, ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಮತ್ತು ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಗುವುದು. ಆಯ್ದ ಪ್ರಬಂಧಗಳನ್ನು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಆಯ್ದ ಸಲಹೆಗಳನ್ನು, ಬರೆದವರ ಹೆಸರಿನೊಂದಿಗೆ ಜಿಲ್ಲಾಡಳಿತಕ್ಕೆ ಸಲ್ಲಿಸಿ ಸ್ವಚ್ಚಕೊಡಗು ನಿರ್ಮಾಣಕ್ಕೆ ಕೈ ಜೋಡಿಸಲಾಗುವುದು. ಪ್ರಬಂಧವನ್ನು ಚಾಮೆರ ದಿನೇಶ್ ಬೆಳ್ಯಪ್ಪ ಕೊಡಗು ಜಿಲ್ಲಾ ಅಧ್ಯಕ್ಷರು, ಕರಾಮಸಾಪ(ರಿ), ಅಪ್ಪಯ್ಯಸ್ವಾಮಿ ರಸ್ತೆ, ವಿರಾಜಪೇಟೆ – 57121ಗೆ ತಲುಪುವಂತೆ ಕಳುಹಿಸಬೇಕೆಂದು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಿನೆರವಂಡ ಡ್ಯಾನಿ ಕುಶಾಲಪ್ಪ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.











