ಸುಂಟಿಕೊಪ್ಪ,ನ. 13 NEWS DESK : ಕುಶಾಲನಗರ ಸಮೀಪದ ಹೇರೂರು ಗ್ರಾಮದ ಹಾರಂಗಿ ಹಿನ್ನೀರಿನಲ್ಲಿ ಮುಳುಗಿ ನೀರು ಪಾಲಾದ ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದೆ. ಬುಧವಾರ ಮಡಿಕೇರಿ ನಗರದ ಜ್ಯೂನಿಯರ್ ಕಾಲೇಜ್ ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಹೆಬ್ಬೆಟ್ಟಗೇರಿ ಗ್ರಾಮ ನಿವಾಸಿ ಪಾಂಡೀರ ಪೂವಯ್ಯ ಎಂಬುವವರ ಪುತ್ರ ಚಂಗಪ್ಪ (17) ಹಾಗೂ ಕಾಲೂರು ಗ್ರಾಮದ ನಿವಾಸಿ ಚನ್ನಪಂಡ ತಮ್ಮಯ್ಯ ಎಂಬುವವರ ಪುತ್ರ ತರುಣ್ ತಿಮ್ಮಯ್ಯ(17) ಎಂಬುವವರೇ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಸುಂಟಿಕೊಪ್ಪ ಪೊಲೀಸರು, ಕುಶಾಲನಗರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ದುಬಾರೆ ರ್ಯಾಫ್ಟರ್‍ಗಳು ಮೃತ ದೇಹಗಳಿಗಾಗಿ ಶೋಧ ಕಾರ್ಯ ನಡೆಸಿ, ಚಂಗಪ್ಪ ಮೃತ ದೇಹ ಹೊರ ತೆಗೆದಿದ್ದರು. ಇಂದು ಕಾಲೂರು ಗ್ರಾಮದ ನಿವಾಸಿ ಚನ್ನಪಂಡ ತಮ್ಮಯ್ಯ ಎಂಬುವವರ ಪುತ್ರ ತರುಣ್ ತಿಮ್ಮಯ್ಯ(17) ಮೃತ ದೇಹ ಪತ್ತೆಯಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಸಿಬ್ಬಂದಿ, ಅಗ್ನಿ ಶಾಮಕ ದಳದವರು ಸತತವಾಗಿ ಕಾರ್ಯಚರಣೆ ನಡೆಸುವ ಮೂಲಕ ಮೃತದೇಹಗಳನ್ನು ಹಾರಂಗಿ ಹಿನ್ನೀರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಮೃತ ಸಂಬಂಧಿಕರಿಗೆ ಮೃತದೇಹಗಳನ್ನು ಹಸ್ತಾಂತರಿಸಿದರು. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕಿರಣ್ ಗೌರಯ್ಯ, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‍ರಾಜ್, ಕಂದಾಯ ಪರಿವಿಕ್ಷಕರಾದ ಪ್ರಶಾಂತ್, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಹಾಗೂ ಸಿಬ್ಬಂದಿಗಳು ಇದ್ದರು.











