ಮಡಿಕೇರಿ ಡಿ.13 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲಿ ಪ್ರಕಟಿಸಲು ಉದ್ದೇಶಿಸಿರುವ ವಿಷಯಾಧಾರಿತ ಪುಸ್ತಕಗಳ ಪ್ರಕಟಣೆಗೆ ಅರ್ಹ ಆಸಕ್ತ ಯುವ ಬರಹಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಕಾಡೆಮಿ ವತಿಯಿಂದ ಕೊಡ ಮಾಡುವ ಅಂದಾಜು 20 ವಿಭಿನ್ನ ರೀತಿಯ ವಿಷಯಗಳ ಮೇಲೆ ಅಧ್ಯಯನ, ಸಂಶೋಧನೆ ನಡೆಸಿ, ನಿಖರವಾದ ಮಾಹಿತಿ ಸಂಗ್ರಹಿಸಿ ಕನಿಷ್ಟ ನೂರು ಪುಟಗಳ ಸಚಿತ್ರ ವಿವರವುಳ್ಳ ಪುಸ್ತಕಗಳನ್ನು ಹೊರತರಲಾಗುವುದು. ಆಯ್ಕೆಯಾಗುವ ಬರಹಗಾರರಿಗೆ ಪುಸ್ತಕದ ವಿಷಯ ಹಾಗೂ ತಲಾ ರೂ.25 ಸಾವಿರ ಪ್ರೋತ್ಸಾಹ ಧನವನ್ನು ಷರತ್ತುಗಳೊಂದಿಗೆ ನೀಡಲಾಗುವುದು. ಆಸಕ್ತ ಬರಹಗಾರರು ಅಧ್ಯಯನ ಕ್ಷೇತ್ರದಲ್ಲಿ ತಮ್ಮ ಅನುಭವ, ಅರ್ಹತೆ ಹಾಗೂ ಆಸಕ್ತಿಯೊಂದಿಗಿನ ಸ್ವ ವಿವರವುಳ್ಳ ಅರ್ಜಿಯನ್ನು ಅಕಾಡೆಮಿ ಕಚೇರಿಗೆ ತಲುಪಿಸಲು ಡಿ.25 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮೊಬೈಲ್ ಸಂಖ್ಯೆ 8762942976 ಯನ್ನು ಸಂಪರ್ಕಿಸಬಹುದು. ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ-571201 ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










