ಮಡಿಕೇರಿ ನ.28 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕುಂಜಿಲ -ಕಕ್ಕಬೆ ಗ್ರಾಮ ಪಂಚಾಯತ್ ನ ಎನ್ ಆರ್ ಎಲ್ ಎಂ ನೂತನ ಕಟ್ಟಡವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಶಾಸಕರು, ಗ್ರಾಮದ ಹಾಗೂ ಗ್ರಾಮಸ್ಥರ ಹಿತದೃಷ್ಟಿಯಿಂದ ಪಂಚಾಯತ್ ಆಡಳಿತ ಪಾರದರ್ಶಕವಾಗಿ ಹಾಗೂ ಜನಪರವಾಗಿ ಇರಬೇಕೆಂದು ಕರೆ ನೀಡಿದರು. ಈ ಕಟ್ಟಡದಲ್ಲಿ ಲೈಬ್ರರಿ ವ್ಯವಸ್ಥೆ ಕಂಡು ಸಂತಸಗೊಂಡ ಶಾಸಕರು ಇದರ ಸದುಪಯೋಗ ಜನರಿಗೆ ಒದಗುವಂತಾಗಲಿ ಎಂದು ಕರೆ ನೀಡಿದರು. ನೂತನ ಪಂಚಾಯತ್ ಕಟ್ಟಡದಲ್ಲಿ ಗ್ರಾಮದ ಒಳಿತಿಗೆ ಶ್ರಮಿಸುವ ಬದ್ಧತೆ ಎಲ್ಲಾ ಪಂಚಾಯತ್ ಸದಸ್ಯರಿಗೆ ಇರಲಿ ಎಂದು ಸಲಹೆ ನೀಡಿದ ಶಾಸಕರು, ಗ್ರಾಮದ ಜನತೆಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ಪಣ ತೊಡಬೇಕೆಂದು ಸಲಹೆ ನೀಡಿದರು. ಈ ಸಂದರ್ಭ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮಂದ್ರೀರ ಮೋಹನ್, ಕೆಡಿಪಿ ಸದಸ್ಯರು ಬಾಚಮಾಂಡ ಲವ ಚಿಣ್ಣಪ್ಪ, ತಾಲ್ಲೂಕು ನಿರ್ವಹಣಾಧಿಕಾರಿ ಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಬಾನಂಡ ಪ್ರತ್ಯು, ಪಂಚಾಯಿತಿ ಅಧ್ಯಕ್ಷರು ಪೊಂಗೇರ ಶಿಲ್ಪಾ ಲೋಕೇಶ್, ಉಪಾಧ್ಯಕ್ಷರು ಕಲಿಯಂಡ ಬೀನಾ ಸುಚಿತ್ರ, ಸದಸ್ಯರು ಕಲಿಯಂಡ ಸಂಪನ್ ಅಯ್ಯಪ್ಪ, ಪ್ರಕಾಶ್, ರಜಾಕ್, ಲೀಲಾವತಿ, ಬೊಪ್ಪಣ್ಣ, ಹರೀಶ್ ಮೊಣ್ಣಪ್ಪ, ಸಫಿಯ, ಶೈಲಾ, ಬಷೀರ್, ಭರತ್ ಚಂದ್ರ ದೇವಯ್ಯ, ರಾಶಿನ್, ಇಂದಿರಾ, ಅಶೋಕ್ ಕುಮಾರ್, ಪಕ್ಷದ ಪ್ರಮುಖರು ಚಿಣ್ಣಪ್ಪ, ಶೈಲಾ ಕುಟ್ಟಪ್ಪ, ಸೂರಜ್ ಹೊಸೂರು, ಕುಂಡಚ್ಚಿರ ಮಂಜು ದೇವಯ್ಯ, ಸಿದ್ದು ನಾಚಪ್ಪ, ಉಪಸ್ಥಿತರಿದ್ದರು.











