
ಮಡಿಕೇರಿ ಡಿ.2 NEWS DESK : ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಎಆರ್‍ಟಿಇಟಿ-2025)ಯು ಡಿ.7 ರಂದು ಮೊದಲನೇ ಅಧಿವೇಶನ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆ ಹಾಗೂ 2ನೇ ಅಧಿವೇಶನ 2 ಗಂಟೆಯಿಂದ 4.30 ರವರೆಗೆ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳಾದ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು (ಬ್ಲಾಕ್-1)(ಅಭ್ಯರ್ಥಿಯ ಸಂಖ್ಯೆ ಬೆಳಗ್ಗೆ 228, ಮಧ್ಯಾಹ್ನ 276), ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲೆ ವಿಭಾಗ(ಬ್ಲಾಕ್-2)(ಅ.ಸಂ.ಬೆಳಗ್ಗೆ 228, ಮಧ್ಯಾಹ್ನ 276), ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಅ.ಸಂ.ಮಧ್ಯಾಹ್ನ 236), ಮಡಿಕೇರಿ ಸಂತ ಮೈಕಲರ ಪ್ರೌಢಶಾಲೆ(ಅ.ಸಂ.ಬೆಳಗ್ಗೆ 227, ಮಧ್ಯಾಹ್ನ 276) ಹಾಗೂ ಮಡಿಕೇರಿ ಸಂತ ಮೈಕಲರ ಪದವಿ ಪೂರ್ವ ಕಾಲೇಜು(ಅ.ಸಂ.ಮಧ್ಯಾಹ್ನ 239) ಒಟ್ಟು ಅಭ್ಯರ್ಥಿಗಳ ಸಂಖ್ಯೆ ಬೆಳಗ್ಗೆ 683 ಮತ್ತು ಮಧ್ಯಾಹ್ನ 1303. ಹೆಚ್ಚಿನ ಮಾಹಿತಿಗೆ ಕಚೇರಿಯ ಪರೀಕ್ಷಾ ನೋಡಲ್ ಅಧಿಕಾರಿ ಬಿಂದು ಕೆ.ಆರ್. ಅವರ ಮೊ.ಸಂ.9611720320 ಹಾಗೂ ಸಹಾಯವಾಣಿ ಸಂಖ್ಯೆ ಉಪ ನಿರ್ದೇಶಕರು(ಆಡಳಿತ) 9448999344 ನ್ನು ಸಂಪರ್ಕಿಸಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು ಅವರು ತಿಳಿಸಿದ್ದಾರೆ.








