ನಾಪೋಕ್ಲು ಡಿ.9 NEWS DESK : ಶ್ರೀ ಪೊನ್ನುಮುತ್ತಪ್ಪ ದೇವಾಲಯದಲ್ಲಿ ಡಿ.15 ರಂದು ಪುತ್ತರಿ ವೆಳ್ಳಾಟಂ ಜರುಗಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ದೇವಾಲಯದಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ನಡೆಸಿಕೊಂಡು ಬರುತ್ತಿರುವ ಪುತ್ತರಿ ವೆಳ್ಳಾಟಂ. ಡಿ.15ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ದೇವಾಲಯದಲ್ಲಿ ಕೇರಳದ ಪ್ರಖ್ಯಾತ ಪರಶಿನಿಕಡವು ಮಡೆಯನ್ ಅವರ ನೃತ್ಯದೊಂದಿಗೆ ದೇವರನ್ನು ಮಲೆ ಇಳಿಸುವ ಮೂಲಕ ಪುತ್ತರಿವೆಳ್ಳಾಟಂಗೆ ಚಾಲನೆ ನೀಡಲಾಗುತ್ತದೆ. ಸಂಜೆ 6 ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಲಿದೆ. ರಾತ್ರಿ 7.30 ಗಂಟೆಗೆ ಗುಳಿಗ ದೇವರ ವೆಳ್ಳಾಟಂ, 8 ಗಂಟೆಗೆ ಕುಟ್ಟಿಚಾತ ದೇವರ ವೆಳ್ಳಾಟಂ ನಡೆದ ಬಳಿಕ 9.30 ಗಂಟೆಗೆ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತ ಶ್ರೀ ಪೊನ್ನು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಎ.ಕೆ.ಚಂದ್ರನ್ ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.











