ಮಡಿಕೇರಿ NEWS DESK ಡಿ.10 : ಪುರಾಣ ಪ್ರಸಿದ್ಧ ಸುಳ್ಯ ಸೀಮೆಯ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವಾಲಯದಲ್ಲಿ ಡಿ.16 ರಿಂದ ಜ.14ರ ವರೆಗೆ ಧನುಪೂಜೆ ನಡೆಯಲಿದೆ. ಡಿ.16 ರಿಂದ ಶ್ರೀ ದೇವಳದಲ್ಲಿ ಎಂದಿನಂತೆೆ ಎಲ್ಲಾ ಸೇವೆಗಳೂ ನಡೆಯುವುದಲ್ಲದೆ ಬೆಳಿಗ್ಗೆ 5 ಗಂಟೆಗೆ ಧನುಪೂಜೆ ಜರುಗಲಿದೆ. ಧನುಪೂಜೆಯ ಎಲ್ಲಾ ದಿನಗಳಲ್ಲಿ ಸೀಮೆಯ ಭಜನಾ ತಂಡಗಳಿಂದ ಮುಂಜಾನೆ 4 ಗಂಟೆಗೆ ಭಜನಾ ಸೇವೆ ನಡೆಯಲಿದೆ. ಧನುಪೂಜೆ ಮಾಡಿಸುವವರು ರೂ.500 ನೀಡಿ ತಮಗೆ ಬೇಕಾದ ದಿವಸವನ್ನು ಆಯ್ಕೆ ಮಾಡಿಕೊಂಡು ದೇವಳದ ಕಚೇರಿ ಸಮಯದಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪೂಜೆಯಲ್ಲಿ ಪಾಲ್ಗೊಳ್ಳುವವವರು ಕುಟುಂಬ ಸಮೇತರಾಗಿ ಮುಂಜಾನೆ 4.45 ಗಂಟೆಗೆ ಮೊದಲೇ ದೇವಾಲಯದಲ್ಲಿ ಹಾಜರಿರಬೇಕು. ಜ.14 ರಂದು ಶ್ರೀ ದೇವಳದಲ್ಲಿ ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, 9 ರಿಂದ ಆಯಿರಕೊಡ ಅಭಿಷೇಕ, ಸಿಯಾಳಾಭಿಷೇಕ, ಶತರುದ್ರಾಭಿಷೇಕ ಹಾಗೂ ರಾತ್ರಿ ರಂಗಪೂಜೆ ಜರುಗಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ. ಹೆಚ್ಚಿನ ಮಾಹಿತಿಗೆ 9483140142 ನ್ನು ಸಂಪರ್ಕಿಸಬಹುದಾಗಿದೆ.











