
ಮಡಿಕೇರಿ NEWS DESK ಮೇ 8 : ಕ್ಷೇತ್ರ ಪುನರ್ ವಿಂಗಡಣೆಯ ಸಂದರ್ಭ ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರವನ್ನು ರಚಿಸಬೇಕೆಂದು ಆಗ್ರಹಿಸಿ 48 ಗಂಟೆಗಳ ಕಾಲ ಅಹೋರಾತ್ರಿ ಸತ್ಯಾಗ್ರಹ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರ್ಧರಿಸಿದೆ.
ಮಡಿಕೇರಿಯ “ಕೊಡವ ಮಂದ್” ನಲ್ಲಿ ಮೇ 12 ರಂದು ಬೆಳಿಗ್ಗೆ 10.30 ಗಂಟೆಯಿAದ ಮೇ 14 ರಂದು ಬೆಳಿಗ್ಗೆ 10.30 ರವರೆಗೆ ಸತ್ಯಾಗ್ರಹ ನಡೆಸಲಾಗುವುದು. ಸತ್ಯಾಗ್ರಹದಲ್ಲಿ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿ, ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರ ನೀಡಬೇಕೆಂದು ಆಗ್ರಹಿಸಿರುವ ಮನವಿ ಪತ್ರವನ್ನು ಭಾರತದ ರಾಷ್ಟಪತಿಗಳು, ಪ್ರಧಾನಮಂತ್ರಿಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊಡವರಿಗೆ ಮಾತ್ರ ಮೀಸಲಾದ “ವಿಶೇಷ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರ”ಗಳನ್ನು ನೀಡಬೇಕು ಅಥವಾ ಸಿಕ್ಕಿಂನ “ಸಂಘ” ಕ್ಷೇತ್ರದ ಮಾದರಿಯಲ್ಲಿ ಕೊಡವ ಕ್ಷೇತ್ರಗಳನ್ನು ಸೃಷ್ಟಿಸಬೇಕು. ಶೇ.33ರ ಮಹಿಳಾ ಮೀಸಲಾತಿಯೊಳಗೆ ಕೊಡವ ಮಹಿಳೆಯರಿಗೆ ಒಳ ಮೀಸಲಾತಿ ನೀಡಬೇಕೆಂದು ಆಗ್ರಹಿಸಲಾಗುವುದು. 2027ರ ಜನಗಣತಿ ಸಂದರ್ಭ ಕೊಡವರಿಗೆ ಪ್ರತ್ಯೇಕ “ಕೋಡ್” ಮತ್ತು ಕಾಲಂ ನೀಡಬೇಕು. 1871-1931ರವರೆಗೆ ಇದ್ದಂತೆ ಸ್ವತಂತ್ರ ಜನಾಂಗ ಎಂದು ದಾಖಲಿಸಬೇಕು. ವಿಧಿ 25 ಮತ್ತು 26ರ ಅಡಿಯಲ್ಲಿ “ಗನ್-ತೋಕ್” ಧಾರ್ಮಿಕ ಹಕ್ಕನ್ನು ರಕ್ಷಿಸಬೇಕು. ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ ಗೆ ಸೇರಿಸಿ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕು. ತಲಕಾವೇರಿಯನ್ನು ಕೊಡವರ ಪವಿತ್ರ ಯಾತ್ರಾಸ್ಥಳ ಎಂದು ಘೋಷಿಸಬೇಕು. ಕೊಡವ ಜನಾಂಗೀಯ ಹೆಗ್ಗುರುತು, ಅಪೂರ್ವ ಜಾನಪದ ಪರಂಪರೆಗಳ ನಿಧಿಯಾದ ಮಂದ್ ಮತ್ತು ದೇವಕಾಡುಗಳನ್ನು ಯುನೆಸ್ಕೋ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಬೇಕು. ಕೆಳದಿ ಅರಸರು ಹಾಗೂ ಬ್ರಿಟಿಷರು ವಶಪಡಿಸಿಕೊಂಡ ಮತ್ತು ಹೊರಗಿನವರಿಗೆ ಲೀಸ್ ಅಥವಾ ಮಾರಾಟ ಮಾಡಿದ ಜಮ್ಮಾಮಲೆ ಮತ್ತು ಇತರ ವಂಶಪಾರAಪರ್ಯ ಭೂಮಿಯನ್ನು ವಿಶ್ವ ರಾಷ್ಟç ಸಂಸ್ಥೆಯ ಆದಿಮಸಂಜಾತ ಆಸ್ತಿ ಕಾಯ್ದೆಯಡಿ ಮರಳಿಸಬೇಕು. 1785ರ ದೇವಟ್‌ಪರಂಬ್ ಜನಾಂಗೀಯ ಹತ್ಯೆ ಮತ್ತು ನಾಲ್ನಾಡ್ ಹಾಗೂ ಮಡಿಕೇರಿ ಕೋಟೆಯಲ್ಲಿ ನಡೆದ ಅರಮನೆ ಹತ್ಯಾಕಾಂಡಗಳನ್ನು ಅಂತರಾಷ್ಟ್ರೀಯ ಸ್ಮಾರಕಗಳಾಗಿ ಗುರುತಿಸಬೇಕು. ಉಲುಗುಲಿ, ಮುಳ್ಳುಸೋಗೆ ಮತ್ತು ಲಕ್ಕಡಿಕೋಟೆಗಳಲ್ಲಿ ಕೊಡವ ಯುದ್ಧ ಸ್ಮಾರಕಗಳನ್ನು ನಿರ್ಮಿಸಬೇಕು. ಹೆಲ್ಸಿಂಕಿ ನಿಯಮಗಳು 1966ರ ಪ್ರಕಾರ ಕೊಡವ ಭೂಪ್ರದೇಶಕ್ಕೆ ಕಾವೇರಿ ನೀರಿನ ಪಾಲು ನೀಡಬೇಕು. ಕೊಡವ ಇತಿಹಾಸವನ್ನು ಸುಳ್ಳಾಗಿಸಿದ ಇತಿಹಾಸಕಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಆಡಳಿತ ವ್ಯವಸ್ಥೆಯ ಮುಂದಿಡುವುದಾಗಿ ಎನ್.ಯು.ನಾಚಪ್ಪ ತಿಳಿಸಿದ್ದಾರೆ. “ಹೊಸ ಸೆಂಟ್ರಲ್ ವಿಸ್ಟಾ ಸಂಸತ್ತಿನಲ್ಲಿ 1200ಕ್ಕೂ ಹೆಚ್ಚು ಸೀಟುಗಳಿವೆ. ರಾಷ್ಟç ಸೇವೆ ಮಾಡಿದ ಮತ್ತು ಜನಸಂಖ್ಯೆ ನಿಯಂತ್ರಿಸಿದ ಕೊಡವರನ್ನು ಶಿಕ್ಷಿಸಬೇಡಿ” ಎಂದು ಆಗ್ರಹಿಸಿದ್ದಾರೆ.








