
ಸುಂಟಿಕೊಪ್ಪ ಜೂ.12 NEWS DESK : ಜಿಟೌನ್ ಸುಂಟಿಕೊಪ್ಪದ ವತಿಯಿಂದ ಫಿಪಾ ವಿಶ್ವಕಪ್ 2026 ಸಂಭ್ರಮದ ಹಿನ್ನಲೆಯಲ್ಲಿ ಫುಟ್ಬಾಲ್ ಪ್ರೇಮಿಗಳು ಚೆಸ್ಕಾಂ ಕಚೇರಿಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸರಿ ಸುಮಾರು 150 ಅಡಿ ಉದ್ದ ಮತ್ತು 10 ಅಡಿ ಎತ್ತರದ ವಿವಿಧ ದೇಶಗಳ ಫುಟ್ಬಾಲ್ ಆಟಗಾರರ ಭಾವಚಿತ್ರಗಳನ್ನು ಅಳವಡಿಸಿದ ಬೃಹತ್ ಪ್ಲೆಕ್ಸ್ ಅನ್ನು ನಿರ್ಮಿಸಿ ಅಳವಡಿಸಿದ್ದಾರೆ. ಇದನ್ನು ಸುಂಟಿಕೊಪ್ಪ ಹಿರಿಯ ಪುಟ್ಬಾಲ್ ಆಟಗಾರರಾದ ವಹೀದ್‍ಜಾನ್ ಮತ್ತು ಅಬ್ಧುಲ್ ರಹೆಮಾನ್ ಉದ್ಘಾಟಿಸಿದರು. ಈ ಸಂದರ್ಭ ಜಿಟೌನ್ ಸುಂಟಿಕೊಪ್ಪ ಹಿರಿಯ ಮತ್ತು ಕಿರಿಯ ಆಟಗಾರರು ಫುಟ್ಬಾಲ್ ಜೆರ್ಸಿಗಳನ್ನು ಧರಿಸಿ ಪಟಾಕಿ ಸಿಡಿಸಿ ಸಂಭ್ರಮದಿಂದ ಘೋಷಣೆ ಕೂಗಿದರು. ಈ ಸಂದರ್ಭ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರುಗಳಾದ ಕೆ.ಎ.ಉಸ್ಮಾನ್, ಪಿ.ಎಫ್.ಸಬಾಸ್ಟಿನ್, ಶಬ್ಬೀರ್, ರಫೀಕ್‍ಖಾನ್, ಕೆ.ಎಸ್.ಅನಿಲ್‍ಕುಮಾರ್, ಆದಂ ರಫೀ, ಬಾಸಿತ್, ಬಿ.ಕೆ.ಪ್ರಶಾಂತ್ (ಕೋಕಾ), ಕೆ.ಎ.ಲತೀಫ್, ಕೊಡಗರಹಳ್ಳಿ ನೇತಾಜಿ ಯುವಕ ಸಂಘದ ಮಾಜಿ ಅಧ್ಯಕ್ಷ ಬಿ.ಸಿ.ದಿನೇಶ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಆಟೋಚಾಲಕರ ಸಂಘದ ಅಧ್ಯಕ್ಷ ಶರೀಫ್, ಸುರೇಶ್, ಪಿ.ಎಂ.ಲತೀಫ್,ವಿ.ಎ.ಸಂತೋಷ್,ಮನುಅಚ್ಚಮಯ್ಯ,ಜಿಟೌನ್ ಸ್ಥಾಪಕ ಅಧ್ಯಕ್ಷ ಸಾದಿಲ್, ಜೀನಾಸುದ್ದೀನ್ ಸೇರಿದಂತೆ ಜಿಟೌನ್ ಮತ್ತು ಓಮ್ನಿ ಬಾಯ್ಸ್ ತಂಡದ ಎಲ್ಲಾ ಸದಸ್ಯರು ಇದ್ದರು.









