
ಕುಶಾಲನಗರ ಜು.13 NEWS DESK : ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಲೋಕಲ್ ಗವರ್ನಿಂಗ್ ಬೋರ್ಡ್ ಹಾಗೂ ಸಾಮಾನ್ಯ ಸಭೆ ನಡೆಯಿತು. 2026-27ನೇ ಸಾಲಿನ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆಯಾಗಿರುವ ಜೆಸಿ ರಂಗಸ್ವಾಮಿ, ರೋಟರಿ ಅಧ್ಯಕ್ಷ ಸಿ.ಎ. ರುದ್ರೇಶ್ ಪಟೇಲ್ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೆಸಿಐ ವಲಯ-14ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಜೆಸಿಐ ಕುಶಾಲನಗರ ಕಾವೇರಿಗೆ ಲಭಿಸಿದ “ಔಟ್‌ಸ್ಟ್ಯಾಂಡಿಂಗ್ ಅಧ್ಯಕ್ಷ” ಪ್ರಶಸ್ತಿಯನ್ನು ಅಧ್ಯಕ್ಷ ಶ್ರೀನಿವಾಸ್ ಬಿ. ಅವರಿಗೆ ಹಾಗೂ “ಔಟ್‌ಸ್ಟ್ಯಾಂಡಿಂಗ್ ಟ್ರೈನಿಂಗ್ ಎಲ್.ಒ.ಎಂ ಪ್ರಶಸ್ತಿಯ ಸಂಬಂಧ ಅಭಿನಂದಿಸಲಾಯಿತು. ಕುಶಾಲನಗರ ಮಾಜಿ ಅಧ್ಯಕ್ಷರಾದ ಲೋಕೇಶ್ ಸಾಗರ್, ರಜನಿಕಾಂತ್ ಎಂ.ಜೆ., ಪ್ರಶಾಂತ್ ಕೆ.ಡಿ., ಜಗದೀಶ್ ಬಿ., ತೇಜ ದಿನೇಶ್, ಜೆಸಿಐ ಶನಿವಾರಸಂತೆ ಅಧ್ಯಕ್ಷ ರವಿ ಸಿ. ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಕುಶಾಲನಗರ ಕಾವೇರಿ ಅಧ್ಯಕ್ಷ ಶ್ರೀನಿವಾಸ್ ಬಿ. ವಹಿಸಿದ್ದರು.









