Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*
  • *ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*
  • *ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*
  • *ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*
  • *ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*
  • *ಕಸ್ತೂರಿ ರಂಗನ್ ವರದಿಯಿಂದ 53 ಗ್ರಾಮಗಳನ್ನು ಕೈಬಿಡಲು ಆಗ್ರಹ : ಸೆ.11ರಂದು ಬೃಹತ್ ಪ್ರತಿಭಟನೆ*
  • *ದೈವಜ್ಞ ಬ್ರಾಹ್ಮಣ ಸಮಾಜದಿಂದ ಮಡಿಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ನೂಲು ಹುಣ್ಣಿಮೆ, ಜನಿವಾರ ಹಬ್ಬ ಹಾಗೂ ಋಗ್ ಉಪಕರ್ಮ*
  • *ಅರೆಭಾಷೆ ಅಕಾಡೆಮಿ ವತಿಯಿಂದ ವಾಡೆಗಳ ಅಧ್ಯಯನ : ಪ್ರವಾಸ ಚಚಡಿ, ರುದ್ರಾಪುರ, ತಲ್ಲೂರು ವಾಡೆಗಳ ಭೇಟಿ*
  • *****ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರುವ ಓಣಂ : ವಿಶೇಷ ಲೇಖನ : ಪಿ.ಪಿ.ಸುಕುಮಾರ್*****
  • *ಸುಂಟಿಕೊಪ್ಪ: ಮಕ್ಕಳಿಗೆ ನಾಟಿ ಕೃಷಿಯ ಅನುಭವ : 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*

ಆಗಷ್ಟ್ 26, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ಸುಂಟಿಕೊಪ್ಪ, NEWS DESK ಆ. 26: ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಕೇರಳ ಮೂಲದ ಮಲಯಾಳಿ ಭಾಷಿಕರು ದೇವರ ನಾಡು ಕೇರಳದ ನಾಡಹಬ್ಬವಾದ ಓಣಂ ಅನ್ನು ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಆಚರಿಸಿದರು. ಸುಂಟಿಕೊಪ್ಪದಲ್ಲಿಯೂ ಮಲಯಾಳಿ ಭಾಷಿಕರು ವಿಶೇಷವಾಗಿ ಓಣಂ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಓಣಂ ಹಬ್ಬದ ಆಚರಣೆಯ ಹಿಂದೆ ಬಲಿಚಕ್ರವರ್ತಿಯ ಪೌರಾಣಿಕ ಕಥೆಯಿದೆ. ಬಲಿಚಕ್ರವರ್ತಿ ಧರ್ಮಿಷ್ಠ, ಪರಾಕ್ರಮಿ ಹಾಗೂ ಮಹಾದಾನಿಯಾಗಿದ್ದು, ಆತನ ಆಡಳಿತದಲ್ಲಿ ರಾಜ್ಯ ಸುಭಿಕ್ಷೆಯಿಂದ ಕೂಡಿತ್ತು. ಪ್ರಜೆಗಳು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು ಎನ್ನುವುದು ಪುರಾಣದ ನಂಬಿಕೆ.
ಬಲಿಚಕ್ರವರ್ತಿ ಇಂದ್ರಪದವಿ ಪಡೆಯಲು ಮಹಾಯಾಗ ನಡೆಸಲು ಮುಂದಾದಾಗ ದೇವತೆಗಳು ಆತಂಕಗೊಂಡು ಮಹಾವಿಷ್ಣುವಿನ ಮೊರೆ ಹೋದರು. ಆಗ ವಿಷ್ಣು ವಾಮನ ರೂಪದಲ್ಲಿ ಬಲಿಚಕ್ರವರ್ತಿಯ ಬಳಿಗೆ ತೆರಳಿ ಮೂರು ಹೆಜ್ಜೆ ಜಾಗವನ್ನು ದಾನವಾಗಿ ಕೇಳಿದರು. ಬಲಿಚಕ್ರವರ್ತಿ ಮಾತು ನೀಡಿದಂತೆ ದಾನ ಮಾಡಲು ಒಪ್ಪಿದಾಗ, ವಾಮನನು ತ್ರಿವಿಕ್ರಮನಾಗಿ ಬೆಳೆದು ಒಂದು ಹೆಜ್ಜೆಯಲ್ಲಿ ಭೂಮಿಯನ್ನೂ, ಮತ್ತೊಂದು ಹೆಜ್ಜೆಯಲ್ಲಿ ಆಕಾಶವನ್ನೂ ಆವರಿಸಿದನು. ಮೂರನೇ ಹೆಜ್ಜೆ ಇಡಲು ಸ್ಥಳ ಕೇಳಿದಾಗ, ಬಲಿಚಕ್ರವರ್ತಿ ತನ್ನ ತಲೆಯನ್ನೇ ಅರ್ಪಿಸಿದನು ಎಂಬುದು ಪೌರಾಣಿಕ ಕಥೆ.
ಬಲಿಚಕ್ರವರ್ತಿ ತನ್ನ ಪ್ರಜೆಗಳನ್ನು ಪ್ರೀತಿಸುತ್ತಿದ್ದ ಹಿನ್ನೆಲೆಯಲ್ಲಿ, ಪ್ರತಿವರ್ಷ ಓಣಂ ಸಂದರ್ಭದಲ್ಲಿ ತನ್ನ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಮಲಯಾಳಿ ಭಾಷಿಕರಲ್ಲಿದೆ.
ಸಿಂಹ ಮಾಸದ ಹಸ್ತ ನಕ್ಷತ್ರದ ಸಂದರ್ಭದಲ್ಲಿ ಹತ್ತು ದಿನಗಳ ಕಾಲ ಓಣಂ ಆಚರಣೆ ನಡೆಯುತ್ತದೆ. ಹಬ್ಬಕ್ಕೆ ಹತ್ತು ದಿನಗಳ ಮುನ್ನವೇ ಮಹಿಳೆಯರು ಮನೆ ಅಂಗಳವನ್ನು ಸ್ವಚ್ಛಗೊಳಿಸಿ, ಸೆಗಣಿ ಸಾರಿಸಿ, ವಿವಿಧ ಹೂಗಳಿಂದ ಸುಂದರವಾದ ಹೂವಿನ ರಂಗೋಲಿ (ಪೂಕಳಂ) ನಿರ್ಮಿಸುವುದು ಸಂಪ್ರದಾಯವಾಗಿದೆ. ಪೂಕಳಂನ ಮಧ್ಯಭಾಗದಲ್ಲಿ ಸೆಗಣಿ ಗುಚ್ಛದ ಮೇಲೆ ಮಣ್ಣಿನ ದೀಪವಿಟ್ಟು ದೀಪ ಬೆಳಗಿಸಲಾಗುತ್ತದೆ.
ಓಣಂ ದಿನದಂದು ಹೊಸ ಬಟ್ಟೆ ಧರಿಸಿ, ಮನೆಗಳಿಗೆ ತಳಿರು ತೋರಣ ಕಟ್ಟಲಾಗುತ್ತದೆ. ಬಳಿಕ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಧ್ಯಾಹ್ನ ಬಂಧು-ಮಿತ್ರರು ಒಂದೆಡೆ ಸೇರಿ ಸಸ್ಯಾಹಾರದಿಂದ ತಯಾರಿಸಿದ ವಿವಿಧ ಬಗೆಯ ಪಲ್ಯ, ಪುಳಿಇಂಜಿ, ಪಪ್ಪಡ, ಪಾಯಸ ಸೇರಿದಂತೆ ಹಲವು ಖಾದ್ಯಗಳನ್ನೊಳಗೊಂಡ ಸಾಂಪ್ರದಾಯಿಕ ಓಣಂ ಸದ್ಯವನ್ನು ಸವಿದು ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ.
ಜಾತಿ, ಮತ, ಬಡವ-ಬಲ್ಲಿದ ಎಂಬ ಯಾವುದೇ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಆಚರಿಸುವುದು ಓಣಂ ಹಬ್ಬದ ವಿಶೇಷತೆಯಾಗಿದೆ. ಸಂಸ್ಕೃತಿ, ಪರಂಪರೆ, ಸಹಬಾಳ್ವೆ ಹಾಗೂ ಸೌಹಾರ್ದತೆಯ ಸಂದೇಶ ಸಾರುವ ಓಣಂ ಹಬ್ಬವು ಸುಂಟಿಕೊಪ್ಪದಲ್ಲೂ ಮಲಯಾಳಿ ಭಾಷಿಕರ ನಡುವೆ ಸಂಭ್ರಮದ ವಾತಾವರಣ ಮೂಡಿಸಿತು.
Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*

ಆಗಷ್ಟ್ 26, 2026

*ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*

ಆಗಷ್ಟ್ 26, 2026

*ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*

ಆಗಷ್ಟ್ 26, 2026

*ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*

ಆಗಷ್ಟ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಆ.26: ಕೊಡಗು ಜಿಲ್ಲೆಯಲ್ಲಿ ಮೋಡ ಭಿತ್ತನೆ ಮಾಡಲ್ಲ. ಅದರ ಅಗತ್ಯವೂ ಜಿಲ್ಲೆಗೆ ಇಲ್ಲ ಎಂದು ಮಡಿಕೇರಿ…

*ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*

ಆಗಷ್ಟ್ 26, 2026

*ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*

ಆಗಷ್ಟ್ 26, 2026

*ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*

ಆಗಷ್ಟ್ 26, 2026

*ಕಸ್ತೂರಿ ರಂಗನ್ ವರದಿಯಿಂದ 53 ಗ್ರಾಮಗಳನ್ನು ಕೈಬಿಡಲು ಆಗ್ರಹ : ಸೆ.11ರಂದು ಬೃಹತ್ ಪ್ರತಿಭಟನೆ*

ಆಗಷ್ಟ್ 26, 2026

*ದೈವಜ್ಞ ಬ್ರಾಹ್ಮಣ ಸಮಾಜದಿಂದ ಮಡಿಕೇರಿಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ನೂಲು ಹುಣ್ಣಿಮೆ, ಜನಿವಾರ ಹಬ್ಬ ಹಾಗೂ ಋಗ್ ಉಪಕರ್ಮ*

ಆಗಷ್ಟ್ 26, 2026

*ಅರೆಭಾಷೆ ಅಕಾಡೆಮಿ ವತಿಯಿಂದ ವಾಡೆಗಳ ಅಧ್ಯಯನ : ಪ್ರವಾಸ ಚಚಡಿ, ರುದ್ರಾಪುರ, ತಲ್ಲೂರು ವಾಡೆಗಳ ಭೇಟಿ*

ಆಗಷ್ಟ್ 26, 2026

*****ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರುವ ಓಣಂ : ವಿಶೇಷ ಲೇಖನ : ಪಿ.ಪಿ.ಸುಕುಮಾರ್*****

ಆಗಷ್ಟ್ 26, 2026

*ಸುಂಟಿಕೊಪ್ಪ: ಮಕ್ಕಳಿಗೆ ನಾಟಿ ಕೃಷಿಯ ಅನುಭವ : 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ*

ಆಗಷ್ಟ್ 26, 2026

*ಹಬ್ಬದ ಸಂದರ್ಭ ಧ್ವನಿವರ್ಧಕ ಬಳಕೆಗೆ ವಿಶೇಷ ಅನುಮತಿ ನೀಡಿ : ಕೊಡಗು ಯುವ ಸೇನಾ ಒತ್ತಾಯ*

ಆಗಷ್ಟ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.