ಮಡಿಕೇರಿ, NEWS DESK ಆ.29: ಮಡಿಕೇರಿ ತಾಲ್ಲೂಕಿನ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷ ಮಂದೀರ ತೇಜಸ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಇದೇ ಸಂದರ್ಭ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು.
ಹಾಕತ್ತೂರಿನ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 95.68 ಅಂಕ ಪಡೆದ ಬಿಳಿಗೇರಿ ಗ್ರಾಮದ ದೇವಜನ ಎಂ. ಬಾಲಕೃಷ್ಣ ಅವರ ಪುತ್ರ ಮನಿಶ್ ಡಿ.ಬಿ. ಅವರಿಗೆ ಪ್ರಥಮ ಹಾಗೂ ಹಾಕತ್ತೂರಿನ ಅಮ್ಮಾಟಂಡ ಎಂ. ಮಾದಪ್ಪ ಅವರ ಪುತ್ರಿ ಅಧಿತಿ ಎ.ಎಂ. (ಶೇ. 90.08) ಅವರಿಗೆ ದ್ವಿತೀಯ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಗ್ಗೋಡ್ಲು ಗ್ರಾಮದ ಹೊನ್ನುಕೋಟಿ ಎಸ್. ಸಂಗೀತ ಅವರ ಪುತ್ರ ಭವಿಷ್ ಪಿ.ಎ. (ಶೇ. 97.50 ಅಂಕ) ಅವರಿಗೆ ಪ್ರಥಮ ಹಾಗೂ ಕಗ್ಗೋಡ್ಲುವಿನ ಸತೀಶ್ ಸಿ.ಎಸ್. ಅವರ ಪುತ್ರ ಸಂದೀಪ್ ಶರ್ಮ ಸಿ.ಎಸ್. (ಶೇ. 97.17) ಅವರಿಗೆ ದ್ವಿತೀಯ ಬಹುಮಾನವನ್ನು ಪ್ರದಾನ ಮಾಡಲಾಯಿತು.
ಪದವಿ ವಿಭಾಗಕ್ಕೆ ಸಂಬಂಧಿಸಿದಂತೆ ಹಾಕತ್ತೂರಿನ ಸುನಿತ ಬಿ.ಡಿ. ಅವರ ಪುತ್ರಿ ಚೈತನ್ಯ ಬಿ.ಡಿ. (ಇಂಜಿನಿಯರಿಂಗ್‌ನಲ್ಲಿ ಶೇ. 85.82) ಅವರಿಗೆ ಪ್ರಥಮ ಹಾಗೂ ಮೇಕೇರಿಯ ಮಹದೇವ ಹೆಚ್.ಎ. ಅವರ ಪುತ್ರ ಧರುಣ್ ಪ್ರಶೋಬ್ ಎಂ.ಎನ್. (ಇಂಜಿನಿಯರಿಂಗ್‌ನಲ್ಲಿ ಶೇ. 83.20) ಅವರಿಗೆ ದ್ವಿತೀಯ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಸಂಘದ ಉಪಾಧ್ಯಕ್ಷ ಮಂದೀರ ಉಮೇಶ್ ಅಪ್ಪಣ್ಣ, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಎಂ. ತೀರ್ಥಕುಮಾರ್, ಸಿಬ್ಬಂದಿ ವರ್ಗ ಹಾಗೂ ಸದಸ್ಯರು ಉಪಸ್ಥಿತರಿದ್ದರು.








