
ವಿರಾಜಪೇಟೆ ಸೆ.12 NEWS DESK : ವಿರಾಜಪೇಟೆ ಕೊಡಗು ಮಹಿಳಾ ಸಹಕಾರ ಸಂಘ ನಿ. ಇದರ 2025-26ನೇ ಸಾಲಿನ 86ನೇ ವಾರ್ಷಿಕ ಮಹಾಸಭೆಯು ಸೆ.19 ರಂದು ನಡೆಯಲಿದೆ. ಸಂಘದ ಅಧ್ಯಕ್ಷರಾದ ಪಟ್ರಪಂಡ ಗೀತಾ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ 10.30ಕ್ಕೆ ಸಂಘದ ಕಟ್ಟಡದಲ್ಲಿ ಸಭೆ ಜರುಗಲಿದ್ದು, ಸಾಲಿನ ಲೆಕ್ಕಪರಿಶೋಧನಾ ವರದಿ ಮಂಡನೆ, ನಿವ್ವಳ ಲಾಭದ ವಿಲೇವಾರಿ ಹಾಗೂ ಮುಂಬರುವ ಸಾಲಿನ ಆಯವ್ಯಯ ಬಜೆಟ್ಗೆ ಅನುಮೋದನೆ ಪಡೆಯಲಾಗುವುದು. ಸದಸ್ಯರು ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿ ಹಾಗೂ ಆಹ್ವಾನ ಪತ್ರಿಕೆಯ ಪರಿಚಯ ಚೀಟಿಯೊಂದಿಗೆ ಆಗಮಿಸಿ ಸಭಾ-ಭತ್ಯೆ ಪಡೆದುಕೊಳ್ಳುವಂತೆ ಸಂಘದ ಕಾರ್ಯದರ್ಶಿ ಬಿ.ಜಿ. ಪುಷ್ಪಲತ ಪ್ರಕಟಣೆಯಲ್ಲಿ ಕೋರಿದ್ದಾರೆ.









