Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕುಂದುರುಮೊಟ್ಟೆಯಲ್ಲಿ ನೋಡುಗರ ಮನಸೆಳೆದ ಚಿಣ್ಣರ ದಸರಾ ಮಂಟಪಗಳು!
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಂದುರುಮೊಟ್ಟೆಯಲ್ಲಿ ನೋಡುಗರ ಮನಸೆಳೆದ ಚಿಣ್ಣರ ದಸರಾ ಮಂಟಪಗಳು!

ನವೆಂಬರ್ 12, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, NEWS DESK ನ.12: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ, ಸೃಜನಶೀಲತೆ ಹಾಗೂ ಕಲಾತ್ಮಕ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಚಿಣ್ಣರ ದಸರಾ ಮಂಟಪಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ನ.8ರಂದು ಸಂಜೆ ದೇವಾಲಯದ ದಸರಾ ಉತ್ಸವದ ಅಂಗವಾಗಿ ಸರ್ವ ದೇವತೆಗಳ ವಿಗ್ರಹಗಳಿಗೆ ಶಾಂತಿ ಪೂಜೆ ಸಲ್ಲಿಸಿದ ಬಳಿಕ ರಾತ್ರಿ ಚಿಣ್ಣರ ದಸರಾ ಮಂಟಪಗಳ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳು ನಿರ್ಮಿಸಿದ್ದ ಚಿಕ್ಕ ಮಂಟಪಗಳು ಚಲನ-ವಲನಗಳಿಂದ ಕೂಡಿದ್ದು, ಮುಖ್ಯ ದಸರಾ ಉತ್ಸವದ ದಶಮಂಟಪಗಳಿಗೆ ಸರಿಸಮಾನವೆಂಬಂತೆ ಗಮನ ಸೆಳೆದವು.

ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ಆವರಣದಲ್ಲಿ ಮೂರ್ನಾಡು ಹಾಗೂ ಮಡಿಕೇರಿಯ ವಿವಿಧ ದೇವಾಲಯಗಳ ವ್ಯಾಪ್ತಿಯ ಮಕ್ಕಳು ತಮ್ಮ ಕಲ್ಪನೆ ಮತ್ತು ಕೈಚಳಕದಿಂದ ಮಂಟಪಗಳನ್ನು ನಿರ್ಮಿಸಿದ್ದರು. ದೇವತೆಗಳು ಮತ್ತು ರಾಕ್ಷಸರ ನಡುವಿನ ಸಂಹಾರ, ಪೌರಾಣಿಕ ಕಥಾಹಂದರ ಹಾಗೂ ವಿವಿಧ ಸನ್ನಿವೇಶಗಳನ್ನು ವಿಗ್ರಹಗಳ ಚಲನ-ವಲನಗಳ ಮೂಲಕ ಪ್ರದರ್ಶಿಸಿದ್ದು ವಿಶೇಷವಾಗಿತ್ತು.

ಸಾಕಷ್ಟು ಸಂಖ್ಯೆಯಲ್ಲಿ ಪುಟಾಣಿ ಮಕ್ಕಳು ತಮ್ಮದೇ ಆದ ಕಲ್ಪನೆಗೆ ಅನುಗುಣವಾಗಿ ಮಂಟಪಗಳನ್ನು ಸಿದ್ಧಪಡಿಸಿ, ಅವುಗಳನ್ನು ಮನೆಗಳಿಂದ ಪ್ರತ್ಯೇಕವಾಗಿ ತಂದು ದೇವಾಲಯದ ಆವರಣದಲ್ಲಿ ಜೋಡಿಸಿ ಪ್ರದರ್ಶನ ನೀಡಿದರು. ಮಕ್ಕಳು ಮೊಬೈಲ್‌ಗಳಲ್ಲಿ ಹೆಚ್ಚಿನ ಸಮಯ ಕಳೆಯುವುದಕ್ಕಿಂತ ಕ್ರೀಡೆ, ಧಾರ್ಮಿಕ ಚಟುವಟಿಕೆ ಹಾಗೂ ಸೃಜನಶೀಲ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಇದೇ ಮಕ್ಕಳು ದೊಡ್ಡ ದಸರಾ ಮಂಟಪಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಭರವಸೆಯೂ ಮೂಡಿದೆ. ಈ ಕಾರ್ಯದಲ್ಲಿ ಗಂಡು ಮಕ್ಕಳೊಂದಿಗೆ ಹೆಣ್ಣು ಮಕ್ಕಳು ಕೂಡ ಕೈಜೋಡಿಸಿರುವುದು ಗಮನಾರ್ಹವಾಗಿತ್ತು.

ಹಿಂದಿನ ವರ್ಷಗಳಲ್ಲಿ ಮಕ್ಕಳ ಮಂಟಪಗಳು ಕಾರ್ಡ್‌ಬೋರ್ಡ್, ಹಳೆಯ ಕ್ಯಾಲೆಂಡರ್‌ಗಳು, ಬಿದಿರು ಹಾಗೂ ಜೆಕೆ ಕಾರ್ಡ್‌ಗಳನ್ನು ಬಳಸಿ ಸರಳವಾಗಿ ಸಿದ್ಧಪಡಿಸಲಾಗುತ್ತಿತ್ತು. ದೇವತೆಗಳು ಮತ್ತು ರಾಕ್ಷಸರ ಚಿತ್ರಗಳನ್ನು ರಚಿಸಿ, ಟಾರ್ಚ್ ಬ್ಯಾಟರಿಗಳ ಮೂಲಕ ದೀಪಾಲಂಕಾರ ಮಾಡಿ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಮಕ್ಕಳ ಮಂಟಪಗಳು ಹೆಚ್ಚು ಆಕರ್ಷಕವಾಗಿ ರೂಪುಗೊಂಡಿದ್ದವು.

ಮುಖ್ಯ ದಸರಾ ಮಂಟಪಗಳಲ್ಲಿ ಬಳಕೆಯಾದ ಥರ್ಮಕೋಲ್ ಶೀಟ್‌ಗಳು, ಪ್ಲೈವುಡ್ ತುಣುಕುಗಳು ಹಾಗೂ ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ, ಅವುಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಬಳಸಿ ಚಿಕ್ಕ ಮಂಟಪಗಳನ್ನು ನಿರ್ಮಿಸಿದ್ದರು. ದಶಮಂಟಪಗಳ ಶೆಡ್‌ಗಳಲ್ಲಿ ಉಳಿದಿದ್ದ ಹಳೆಯ ಹಾಗೂ ಶಿಥಿಲಗೊಂಡ ವಿಗ್ರಹಗಳನ್ನು ಪಡೆದು ಅವುಗಳನ್ನು ಮರುಬಳಕೆ ಮಾಡಿಕೊಂಡಿದ್ದರು. ಈ ಮಂಟಪಗಳನ್ನು ಸಿದ್ಧಪಡಿಸಲು ಸುಮಾರು 15ರಿಂದ 20 ದಿನಗಳ ಕಾಲ ಶ್ರಮಿಸಿದ್ದಾರೆ ಎನ್ನಲಾಗಿದೆ.

ದೊಡ್ಡ ದಸರಾ ಮಂಟಪಗಳಲ್ಲಿನ ಕಥಾಹಂದರಗಳನ್ನು ಆಯ್ದುಕೊಂಡು, ಅವುಗಳನ್ನು ಸಂಕ್ಷಿಪ್ತಗೊಳಿಸಿ ಚಿಕ್ಕ ಮಂಟಪಗಳಿಗೆ ಹೊಂದುವಂತೆ ರೂಪಿಸಿರುವುದು ಮಕ್ಕಳ ಸೃಜನಶೀಲತೆಗೆ ಸಾಕ್ಷಿಯಾಗಿತ್ತು. ಮಂಟಪಗಳ ನಿರ್ಮಾಣ ಪೂರ್ಣಗೊಂಡ ಬಳಿಕ ಕಥೆಗೆ ಅನುಗುಣವಾಗಿ ಚಲನ-ವಲನಗಳನ್ನು ಅಳವಡಿಸಿ, ಮಕ್ಕಳು ಪರಸ್ಪರ ಸಹಕಾರದಿಂದ ಪ್ರದರ್ಶನ ನೀಡಿದರು. ಈ ಕಾರ್ಯದಲ್ಲಿ ಮನೆಯ ಹಿರಿಯರು ಮಾರ್ಗದರ್ಶನ ಹಾಗೂ ಸಹಕಾರ ನೀಡಿರುವ ಸಾಧ್ಯತೆಯೂ ಇದೆ.

ಬಹುಮಾನ ವಿಜೇತ ತಂಡಗಳು

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಟ್ಟು ಎಂಟು ಚಿಣ್ಣರ ಮಂಟಪಗಳ ಪೈಕಿ ಮಹದೇವಪೇಟೆಯ ‘ಟೀಮ್ ಅಗ್ನಿ’ ಪ್ರಥಮ ಬಹುಮಾನ ಪಡೆದುಕೊಂಡಿತು. ಕೋದಂಡರಾಮ ದೇವಾಲಯದ ‘ಟೀಮ್ ಕೆಆರ್‌ಟಿ’ ಹಾಗೂ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ‘ಕೆಸಿಎಮ್’ ತಂಡಗಳು ದ್ವಿತೀಯ ಬಹುಮಾನವನ್ನು ಸಮಾನವಾಗಿ ಹಂಚಿಕೊಂಡವು. ಮೂರ್ನಾಡುವಿನ ‘ಟೀಮ್ ಪೂಚರ್ ಬಾಯ್ಸ್’ ತೃತೀಯ ಬಹುಮಾನ ಹಾಗೂ ಅಶೋಕಪುರದ ‘ಟೀಮ್ 14’ ನಾಲ್ಕನೇ ಬಹುಮಾನ ಪಡೆದುಕೊಂಡವು.

ಇದೇ ಸಂದರ್ಭದಲ್ಲಿ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ವಿವಿಧ ಪೂಜಾ ಕೈಂಕರ್ಯಗಳು, ಕರಗ ಕಟ್ಟುವಿಕೆ, ನಗರ ಪ್ರದಕ್ಷಿಣೆ ಹಾಗೂ ಉತ್ಸವ ಮಂಟಪಗಳ ಸಂದರ್ಭದಲ್ಲಿ ಯುವಕರಿಗೆ ಮಾರ್ಗದರ್ಶನ ನೀಡುತ್ತಾ ಬಂದಿರುವ ಉತ್ಸವ ಸಮಿತಿಯ ಹಿರಿಯರಾದ ಪುಟ್ಟಯ್ಯ ವಾಸು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಚನ್ನಪಂಡ ಹೇಮಂತ್‌ಕುಮಾರ್ (ಅಪ್ಪಿ) ವಹಿಸಿದ್ದರು. ವೇದಿಕೆಯಲ್ಲಿ ಸಮಿತಿಯ ಮಾಜಿ ಅಧ್ಯಕ್ಷ ಕೆ.ಆರ್. ರವಿ ಕರ್ಕರ, ನವೀನ್ ಪೂಜಾರಿ, ಸಿ.ಎಂ. ಸದಾನಂದ, ಕೆ.ಆರ್. ಪ್ರದೀಪ್ ಕರ್ಕರ, ದೇವಾಲಯದ ಮುಖ್ಯ ಅರ್ಚಕ ಪಿ.ಪಿ. ಚಾಮಿ ಹಾಗೂ ಮಂಟಪ ಸಮಿತಿಯ ಪದಾಧಿಕಾರಿ ಖಾದರ್ ಉಪಸ್ಥಿತರಿದ್ದರು.

ಎನ್.ವಿ. ಉನ್ನಿಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿ ಸೂರಜ್ ಸ್ವಾಗತಿಸಿದರು. ವಿನಯ್ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

ನ.16ರಂದು ತಲಕಾವೇರಿಯಲ್ಲಿ ಕಿರು ಸಂಕ್ರಮಣ ವಿಶೇಷ ಪೂಜೆ

ನವೆಂಬರ್ 12, 2026

ನ.21ರಂದು ಮರಗೋಡಿನಲ್ಲಿ ಅದ್ಧೂರಿ ‘ಕನ್ನಡ ಹಬ್ಬ’

ನವೆಂಬರ್ 12, 2026

ಅಂಗಾಂಗ ದಾನ ಮಾಡಿದ ಯೋಗೇಶ್ ಮನೆಗೆ ಪ್ರಸನ್ನ ಎಡಿಕೇರಿ ಭೇಟಿ; ರಾತ್ರಿಯೂ ತಜ್ಞ ವೈದ್ಯರನ್ನು ನಿಯೋಜಿಸುವಂತೆ ಜಿಲ್ಲಾಸ್ಪತ್ರೆ ಸರ್ಜನ್‌ಗೆ ಮನವಿ

ನವೆಂಬರ್ 12, 2026

ನ.21ರಂದು ಮರಗೋಡಿನಲ್ಲಿ ಅದ್ಧೂರಿ ‘ಕನ್ನಡ ಹಬ್ಬ’

ನವೆಂಬರ್ 12, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.12: ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಕಂಪನ್ನು ಮನೆಮನೆಗೂ…

ಕುಂದುರುಮೊಟ್ಟೆಯಲ್ಲಿ ನೋಡುಗರ ಮನಸೆಳೆದ ಚಿಣ್ಣರ ದಸರಾ ಮಂಟಪಗಳು!

ನವೆಂಬರ್ 12, 2026

ಅಂಗಾಂಗ ದಾನ ಮಾಡಿದ ಯೋಗೇಶ್ ಮನೆಗೆ ಪ್ರಸನ್ನ ಎಡಿಕೇರಿ ಭೇಟಿ; ರಾತ್ರಿಯೂ ತಜ್ಞ ವೈದ್ಯರನ್ನು ನಿಯೋಜಿಸುವಂತೆ ಜಿಲ್ಲಾಸ್ಪತ್ರೆ ಸರ್ಜನ್‌ಗೆ ಮನವಿ

ನವೆಂಬರ್ 12, 2026

ನಿಗಮ ಮಂಡಳಿಗಳಿಗೆ ನಿರ್ದೇಶಕರ ಆಯ್ಕೆ: ಕೊಡಗು ಜಿಲ್ಲೆಯಿಂದ ಐವರಿಗೆ ಅವಕಾಶ

ನವೆಂಬರ್ 11, 2026

7ನೇ ಹೊಸಕೋಟೆಯ ಗೌರಿ ಬಡಾವಣೆಯಲ್ಲಿ ಸಾಮರಸ್ಯ ದೀಪಾವಳಿ ಆಚರಣೆ

ನವೆಂಬರ್ 11, 2026

ಸುಂಟಿಕೊಪ್ಪದಲ್ಲಿ ಸಾಮರಸ್ಯ ದೀಪಾವಳಿ ಆಚರಣೆ

ನವೆಂಬರ್ 11, 2026

ನ.17ರಂದು ಬಾಲ ಕಾರ್ಮಿಕರ ಸಮಸ್ಯೆಗಳ ಕುರಿತು ತರಬೇತಿ ಕಾರ್ಯಾಗಾರ

ನವೆಂಬರ್ 11, 2026

ಸಾವಿನಲ್ಲೂ ಸಾರ್ಥಕತೆ ಮೆರೆದ 22ರ ಹರೆಯದ ಯೋಗೇಶ್; ಮೆದುಳು ನಿಷ್ಕ್ರಿಯಗೊಂಡ ಪುತ್ರನ ಅಂಗಾಂಗ ದಾನ ಮಾಡಿದ ಪೋಷಕರು; ಯಕೃತ್, ಕಾರ್ನಿಯಾ ಮೈಸೂರಿಗೆ ರವಾನೆ

ನವೆಂಬರ್ 11, 2026

ನ.14 ರಂದು ಬಲ್ಲಮಾವಟಿಯಲ್ಲಿ ಪ್ರಜಾಸೇವಾ ಅಭಿಯಾನ

ನವೆಂಬರ್ 11, 2026

ನ.13ರಂದು ಮಡಿಕೇರಿಯಲ್ಲಿ ಯುವ ಸಂಸತ್ತು ಕಾರ್ಯಕ್ರಮ

ನವೆಂಬರ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.