Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಮಡಿಕೇರಿಯಲ್ಲಿ ಮರಗಳ ಕಡಿತಕ್ಕೆ ಸಾರ್ವಜನಿಕರ ತೀವ್ರ ವಿರೋಧ; ಅತ್ತಿ ಮರ, ಶತಮಾನದ ಸಂಪಿಗೆ ಮರ ಉಳಿಸಿ ಅಭಿವೃದ್ಧಿಗೆ ಡಿ.ಸಿ.ಎಫ್ ಸೂಚನೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿಯಲ್ಲಿ ಮರಗಳ ಕಡಿತಕ್ಕೆ ಸಾರ್ವಜನಿಕರ ತೀವ್ರ ವಿರೋಧ; ಅತ್ತಿ ಮರ, ಶತಮಾನದ ಸಂಪಿಗೆ ಮರ ಉಳಿಸಿ ಅಭಿವೃದ್ಧಿಗೆ ಡಿ.ಸಿ.ಎಫ್ ಸೂಚನೆ

ನವೆಂಬರ್ 17, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ, NEWS DESK ನ.17: ನಗರದ ಗಾಂಧಿ ಮೈದಾನದ ಬಳಿಯ ಅತ್ತಿ ಮರಗಳನ್ನು ಕಡಿಯದೆಯೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಿದೆ. 12 ಮರಗಳ ಪೈಕಿ ಒಂದು ಮರ ಮಾತ್ರ ರಸ್ತೆ ಬದಿಯ ಕಾಲುದಾರಿಗೆ ಬಾಗಿರುವ ಹಿನ್ನೆಲೆಯಲ್ಲಿ ಅದರ ತೆರವಿಗೆ ನಗರಸಭೆ ಅರಣ್ಯ ಇಲಾಖೆಯಿಂದ ಅನುಮತಿ ಕೋರಿದೆ. ಆದರೆ, ಮರ ತೆರವು ಅಗತ್ಯವಿದೆಯೇ ಎಂಬುದನ್ನು ನಗರಸಭೆ ಅಭಿಯಂತರರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಪರಿಶೀಲಿಸಿ, ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಭಾಗದ ಡಿ.ಸಿ.ಎಫ್ ಅಭಿಷೇಕ್ ತಿಳಿಸಿದರು.

ನಗರದ ಕಾವೇರಿ ಕಲಾಕ್ಷೇತ್ರದ ಆವರಣದಲ್ಲಿರುವ 100 ವರ್ಷಕ್ಕೂ ಅಧಿಕ ವಯಸ್ಸಿನ ಬೃಹತ್ ಸಂಪಿಗೆ ಮರವನ್ನು ತೆರವುಗೊಳಿಸಲು ನಗರಸಭೆ ಅಭಿಯಂತರರು ಅರಣ್ಯ ಇಲಾಖೆಗೆ ಅನುಮತಿ ಕೋರಿದ್ದರು. ಈ ಸ್ಥಳದಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಸಂಪಿಗೆ ಮರವನ್ನು ಕಡಿಯದೆಯೇ ಕಟ್ಟಡ ನಿರ್ಮಿಸಲು ಸಾಧ್ಯವಾಗುವಂತೆ ಪರ್ಯಾಯ ನೀಲನಕ್ಷೆ ಸಿದ್ಧಪಡಿಸಿ ಒಂದು ವಾರದೊಳಗೆ ಅರಣ್ಯ ಇಲಾಖೆಗೆ ಸಲ್ಲಿಸುವಂತೆ ನಗರಸಭೆ ಅಭಿಯಂತರ ಹೇಮಕುಮಾರ್ ಅವರಿಗೆ ಡಿ.ಸಿ.ಎಫ್ ಅಭಿಷೇಕ್ ಸೂಚಿಸಿದರು.

ರಾಜಾಸೀಟು ರಸ್ತೆ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ಗಾಂಧಿ ಮೈದಾನದ ಬಳಿಯ 12 ಅತ್ತಿ ಮರಗಳು ಹಾಗೂ ಕಾವೇರಿ ಕಲಾಕ್ಷೇತ್ರದ ಆವರಣದಲ್ಲಿರುವ ಬೃಹತ್ ಸಂಪಿಗೆ ಮರವನ್ನು ಕಡಿಯಲು ನಗರಸಭೆ ಅನುಮತಿ ಕೋರಿದ್ದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಭವನದಲ್ಲಿ ಡಿ.ಸಿ.ಎಫ್ ಅಭಿಷೇಕ್ ಅವರ ಸಮ್ಮುಖದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ಹಾಗೂ ನಗರಸಭೆ ಅಭಿಯಂತರರ ನಡುವೆ ಚರ್ಚೆ ನಡೆಯಿತು.

ರಾಜಾಸೀಟು ರಸ್ತೆ ಅಭಿವೃದ್ಧಿಯ ನೆಪದಲ್ಲಿ ರಸ್ತೆಯ ಬದಿಯಲ್ಲಿ ದಶಕಗಳಿಂದ ಬೆಳೆದು ನಿಂತಿರುವ 12 ಅತ್ತಿ ಮರಗಳನ್ನು ಕಾಲುದಾರಿ ಸೌಂದರ್ಯೀಕರಣದ ಉದ್ದೇಶದಿಂದ ತೆರವುಗೊಳಿಸಲು ನಗರಸಭೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿತ್ತು. ಆದರೆ, ರಸ್ತೆ ಅಭಿವೃದ್ಧಿಗೆ ಈ ಮರಗಳಿಂದ ಯಾವುದೇ ಅಡಚಣೆ ಇಲ್ಲದಿರುವುದರಿಂದ ಸಾರ್ವಜನಿಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ನಗರಸಭೆ ಅಭಿಯಂತರರು, ಕಾಲುದಾರಿಗೆ ಬಾಗಿರುವ ಒಂದು ಮರವನ್ನು ಮಾತ್ರ ತೆರವುಗೊಳಿಸಲು ಅನುಮತಿ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕರು, ಮರವು ಕಾಲುದಾರಿಗೆ ಬಾಗಿರುವುದರಿಂದ ಪಕ್ಕದಲ್ಲಿರುವ ಬೇಲಿಯನ್ನು ಸ್ವಲ್ಪ ಒಳಕ್ಕೆ ಸ್ಥಳಾಂತರಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದು ಎಂದು ಸಲಹೆ ನೀಡಿದರು. ಈ ಕುರಿತು ನ.18ರಂದು ಸಾರ್ವಜನಿಕರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸುವಂತೆ ಡಿ.ಸಿ.ಎಫ್ ಅಭಿಷೇಕ್ ಅವರು ಅಭಿಯಂತರ ಹೇಮಕುಮಾರ್ ಅವರಿಗೆ ಸೂಚಿಸಿದರು.

ಇದೇ ವೇಳೆ ಕಾವೇರಿ ಕಲಾಕ್ಷೇತ್ರದ ಆವರಣದಲ್ಲಿರುವ ಸಂಪಿಗೆ ಮರದ ಸುತ್ತ ಜೆ.ಸಿ.ಬಿ ಯಂತ್ರ ಬಳಸಿ ಮಣ್ಣನ್ನು ತೆರವುಗೊಳಿಸಿರುವುದಕ್ಕೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಮತ್ತಷ್ಟು ಮಣ್ಣು ಅಗೆದರೆ ಮರದ ಬೇರುಗಳಿಗೆ ಹಾನಿಯಾಗಿ ಅಪಾಯ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್, ಮರಕ್ಕೆ ಯಾವುದೇ ಹಾನಿಯಾಗದಂತೆ ಅದರ ಸುತ್ತ ಮಣ್ಣು ಹಾಕುವಂತೆ ಅಭಿಯಂತರರಿಗೆ ಸೂಚಿಸಿದರು.

ಸಾರ್ವಜನಿಕರ ಪರವಾಗಿ ಮಾತನಾಡಿದ ಕರ್ನಲ್ ಸಿ.ಪಿ. ಮುತ್ತಣ್ಣ, ಕಾವೇರಿ ಕಲಾಕ್ಷೇತ್ರದ ಜಾಗದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸುವ ನೆಪದಲ್ಲಿ ಶತಮಾನದ ಸಂಪಿಗೆ ಮರವನ್ನು ಕಡಿಯುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಈ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಕಟ್ಟಡ ನಿರ್ಮಾಣದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಸಿದರು.

ಅಭಿಷೇಕ್ ಜೈನ್ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು ಬೇರೆಡೆ ಗಿಡಗಳನ್ನು ನೆಡುವುದಕ್ಕಿಂತ, ಅಸ್ತಿತ್ವದಲ್ಲಿರುವ ಮರಗಳನ್ನು ಉಳಿಸಿಕೊಂಡೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ವೈಜ್ಞಾನಿಕ ಕ್ರಮಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಜ್ಞಾ ಜಿ.ಆರ್ ಮಾತನಾಡಿ, ಅತ್ತಿ ಹಾಗೂ ಸಂಪಿಗೆ ಮರಗಳು ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಸಂರಕ್ಷಿತವಾಗಿವೆ. ಇಂತಹ ಮರಗಳನ್ನು ಕಡಿಯುವ ಮೊದಲು ಪರ್ಯಾಯ ಅಭಿವೃದ್ಧಿ ಮಾರ್ಗಗಳನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ ಎಂದರು.

ಸಂಪತ್ ಕುಮಾರ್ ಸರಳಾಯ ಮಾತನಾಡಿ, 1980ರ ದಶಕದಲ್ಲಿ ಅಂದಿನ ಜಿಲ್ಲಾಧಿಕಾರಿ ಹಾಗೂ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿಯೇ ಅತ್ತಿ ಮರಗಳನ್ನು ನೆಡಲಾಗಿತ್ತು. ಇಂತಹ ಮರಗಳನ್ನು ಅನಗತ್ಯವಾಗಿ ನಾಶಪಡಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರಜ್ವಲ್ ಜಿ.ಆರ್ ಮಾತನಾಡಿ, ಕಾವೇರಿ ಕಲಾಕ್ಷೇತ್ರದ ಜಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲು ಪುರಾತತ್ವ ಇಲಾಖೆಯಿಂದ ಇನ್ನೂ ಅನುಮತಿ ದೊರೆತಿಲ್ಲ ಎಂದು ತಿಳಿಸಿದರು.

ವಿಪಿನ್ ಬಾಳಿಗ ಹಾಗೂ ಅನಿಲ್ ಬೆಟ್ಟದಳ್ಳಿ ಮಾತನಾಡಿ, ಸಂಪಿಗೆ ಮರವನ್ನು ಉಳಿಸುವುದು ಅತ್ಯಗತ್ಯ. ಮರದ ಸುತ್ತಲಿನ ಪ್ರದೇಶವನ್ನು ಸುಂದರವಾಗಿ ಅಭಿವೃದ್ಧಿಪಡಿಸಿ ಉದ್ಯಾನವನದ ರೂಪ ನೀಡಬಹುದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ನೈಲ ಗಣೇಶ್, ಡಾ. ಶಾಂತಿ ಅಚ್ಚಪ್ಪ, ಆಂಟೊನಿ ಫ್ರಾಂಕ್ಲಿನ್, ಪ್ರಸನ್ನ ಕೆ.ಟಿ., ಡಾ. ಅನುಶಾ, ಪ್ರಯಾಗ್ ಗೌಡ, ಪುನೀತ್ ಕೆ.ಎಸ್., ಧನುಶ್ ಕಾವೇರಿಯಪ್ಪ, ಕರಣ್ ಸುಬ್ಬಯ್ಯ, ಸೋಮಣ್ಣ, ಚೆಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದು, ಮರಗಳ ಕಡಿತಕ್ಕೆ ವಿರೋಧ ವ್ಯಕ್ತಪಡಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

2027ನೇ ಸಾಲಿನ ಕೊಡವ ಹಾಕಿ ಉತ್ಸವದ ಪೂರ್ವಭಾವಿ ಸಭೆ

ನವೆಂಬರ್ 18, 2026

ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ 2026ಕ್ಕೆ ಅರ್ಜಿ ಆಹ್ವಾನ

ನವೆಂಬರ್ 18, 2026

ಮಕ್ಕಳ ದಿನಾಚರಣೆ ಪ್ರಯುಕ್ತ ನ.21ರಂದು ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮ

ನವೆಂಬರ್ 18, 2026

ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ 2026ಕ್ಕೆ ಅರ್ಜಿ ಆಹ್ವಾನ

ನವೆಂಬರ್ 18, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ನ.18: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2026ನೇ ಸಾಲಿನ ಅಕಾಡೆಮಿ ಗೌರವ…

ಮಕ್ಕಳ ದಿನಾಚರಣೆ ಪ್ರಯುಕ್ತ ನ.21ರಂದು ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮ

ನವೆಂಬರ್ 18, 2026

ನ.21ರಂದು ಕೂಡಿಗೆ ಗ್ರಾಮದಲ್ಲಿ ಪ್ರಜಾಸೇವಾ ಅಭಿಯಾನ

ನವೆಂಬರ್ 18, 2026

ಹೊಸ ಉತ್ಪಾದನಾ ಕೈಗಾರಿಕಾ ಘಟಕಗಳಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ

ನವೆಂಬರ್ 18, 2026

₹436 ಕೋಟಿ ಸಮಗ್ರ ಸಂಚಾರ ಯೋಜನೆಗೆ ಸಿಎಂ ಡಿ.ಕೆ. ಶಿವಕುಮಾರ್ ಶಿಲಾನ್ಯಾಸ; ಐಒಸಿ ಜಂಕ್ಷನ್‌ನಲ್ಲಿ ಬೆಂಗಳೂರಿನ ಮೊದಲ ಎಲಿವೇಟೆಡ್ ರೋಟರಿ ಫ್ಲೈಓವರ್ ನಿರ್ಮಾಣ – ಬೈಯಪ್ಪನಹಳ್ಳಿಯಲ್ಲಿ ಹೆಚ್ಚುವರಿ ರೈಲ್ವೆ ಮೇಲ್ಸೇತುವೆ

ನವೆಂಬರ್ 18, 2026

ನ.21ರಿಂದ ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ; ನ.23ರಂದು ಸಮಾರೋಪ ಸಮಾರಂಭ; ಪೊಲೀಸ್ ಅಧಿಕಾರಿಗಳು ಭಾಗಿ

ನವೆಂಬರ್ 18, 2026

ಅರೆಭಾಷೆ ಸ್ಮರಣ ಸಂಚಿಕೆಗೆ ಲೇಖನ, ಕತೆ, ಕವನ ಮತ್ತಿತರ ಬರಹಗಳ ಆಹ್ವಾನ; ನವೆಂಬರ್ 25ರೊಳಗೆ ಬರಹಗಳನ್ನು ಕಳುಹಿಸಲು ಸೂಚನೆ

ನವೆಂಬರ್ 18, 2026

ವಿಕಲಚೇತನರ ಹಕ್ಕುಗಳ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ; ಸರ್ಕಾರಿ ನೇಮಕಾತಿಯಲ್ಲಿ ವಿಕಲಚೇತನರಿಗೆ ಶೇ.5 ಮೀಸಲಾತಿ ಜಾರಿಗೆ ಸೂಚನೆ

ನವೆಂಬರ್ 18, 2026

ನ.21ರಿಂದ ಓಂಕಾರೇಶ್ವರ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮ; ನ.24ರಂದು ತೆಪ್ಪೋತ್ಸವ, ನ.25ರಂದು ಹುತ್ತರಿ ಆಚರಣೆ

ನವೆಂಬರ್ 18, 2026

ಮಧುಮೇಹ ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯಿರಿ : ಡಾ. ಶ್ರೀನಿವಾಸ್ ; ಕೊಡಗು ಜಿಲ್ಲೆಯಲ್ಲಿ ಮಧುಮೇಹ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ವಿಶೇಷ ಒತ್ತು – 2025-26ನೇ ಸಾಲಿನಲ್ಲಿ 2.31 ಲಕ್ಷ ಮಂದಿಗೆ ತಪಾಸಣೆ

ನವೆಂಬರ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.