Advertisement
2:01 AM Thursday 7-December 2023

ಕೊಂಗಣ ವೇಡಿಬೆಲು-ಕೆಂದರೆಕಾಡು ಕಾಲೋನಿ : ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ

11/02/2023

ಮಡಿಕೇರಿ ಫೆ.11 :  ಪೊನ್ನಂಪೇಟೆ ತಾಲ್ಲೂಕು, ಬಿ.ಶೆಟ್ಟಗೇರಿ ಗ್ರಾ.ಪಂ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು.

ಕೊಂಗಣ ವೇಡಿಬೆಲು ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ ರೂ.60 ಲಕ್ಷ ಮತ್ತು ಪಾಂಡಂಡ ಕೆಂದರೆಕಾಡು ಪರಿಶಿಷ್ಟ ಪಂಗಡ ಕಾಲೋನಿ ಸಂಪರ್ಕ ರಸ್ತೆಗೆ 55 ಲಕ್ಷ ಅನುದಾನ ಕಾವೇರಿ ನೀರಾವರಿ ನಿಗಮದಿಂದ ಒದಗಿಸಲಾಗಿದ್ದು, ಭೂಮಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.