ಬಾಡಗರಕೇರಿ ಕೂಟಿಯಾಲ ಸಂಪರ್ಕ ರಸ್ತೆ ಕಾಮಗಾರಿಗೆ ಭೂಮಿ ಪೂಜೆ
11/02/2023

ಮಡಿಕೇರಿ ಫೆ.11 : ಪೊನ್ನಂಪೇಟೆ ತಾಲ್ಲೂಕಿನ ಬಾಡಗರಕೇರಿ ಕೂಟಿಯಾಲ ಸಂಪರ್ಕ ರಸ್ತೆಗೆ ರೂ.2 ಕೋಟಿ 60 ಲಕ್ಷ ಅನುದಾನ ಸರಕಾರದಿಂದ ಮಂಜೂರಾಗಿದ್ದು, ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.
