ಮೌಂಟೇನ್ ವ್ಯೂ ಶಾಲೆಯ ವಾರ್ಷಿಕೋತ್ಸವ : ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಿ : ಟಿ.ಪಿ.ರಮೇಶ್ ಕರೆ

ವಿರಾಜಪೇಟೆ ಫೆ.11 : ಮಕ್ಕಳ ಬಗ್ಗೆ ಪೋಷಕರಿಗೆ ಇರುವಷ್ಟೇ ಕಾಳಜಿ ಶಿಕ್ಷಕರಿಗೂ ಇರುತ್ತದೆ ಎಂದು ಟಿ.ಪಿ.ರಮೇಶ್ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಪುರಭವನದಲ್ಲಿ ನಡೆದ ನಗರದ ದಖ್ಖನಿ ಮೊಹಲ್ಲಾದಲ್ಲಿರುವ ಮೌಂಟೇನ್ ವ್ಯೂ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದರು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳ ಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾಡ್ರ್ಯ ಹಾಗೂ ಆರೋಗ್ಯ ಹೊಂದುವಂತೆ ತಿಳಿಸಿದರು.
ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ ಮಾತನಾಡಿ, ಶಾಲೆಯ ಎಲ್ಲ ಮಕ್ಕಳು ಒಳ್ಳೆಯ ರೀತಿ ಓದಿ ಹೆಚ್ಚಿನ ಫಲಿತಾಂಶವನ್ನು ಪಡೆದು ಶಾಲೆಗೆ ಒಳ್ಳೆ ಕೀರ್ತಿ ತರಬೇಕು. ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಿ ಓದಿನ ಕಡೆ ಹೆಚ್ಚು ಗಮನ ಹರಿಸಬೇಕು ಮತ್ತು ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಆಡಳಿತ ಅಧಿಕಾರಿ ಸೈಯದ್ ಅಸ್ಮಾ ಶಾಲೆ ಬೆಳೆದು ಬಂದ ರೀತಿ ಮತ್ತು ಶಾಲೆಗೆ ಪ್ರೋತ್ಸಾಹ ಮಾಡಿದಂತಹ ಸರ್ವರನ್ನು ಸ್ಮರಿಸಿದರು.
ಶಾಲೆಯ ಸಂಸ್ಥಾಪಕರಾದ ದಿವಂಗತ ನಸೀರ್ ಅವರ ಹೆಸರಿನಲ್ಲಿ ಮೂವತ್ತು ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವುದಾಗಿ ಘೋಷಣೆ ಮಾಡಿದರು.
ಇದೇ ಸಂದರ್ಭ ಶಾಲೆಯಲ್ಲಿ ನಡೆದ ಕ್ರೀಡಾ ಚಟುವಟಿಕೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ವಿಶೇಷವಾಗಿ ಶಾಲೆಯಲ್ಲಿ ಶಿಕ್ಷಕರಿಗೆ ನಡೆದ ಸ್ಪರ್ಧೆಯಲ್ಲಿ ಹಳೆ ಕಾಲದಲ್ಲಿ ಸೌದೆ ತಂದು ಅಡುಗೆ ಮಾಡುವ ಸ್ಪರ್ಧೆಯಲ್ಲಿ ಸಹ ಶಿಕ್ಷಕ ದೀಪಕ್ ಬಿ.ಪಿ ಪ್ರಥಮ ಸ್ಥಾನ ಪಡೆದರೆ ಮುಖ್ಯ ಶಿಕ್ಷಕ ಲವಿನ್ ಲೋಪೇಸ್ ದ್ವಿತೀಯ ಹಾಗೂ ಗ್ರೀಟಾ, ನೌಫಿಯ ತೃತೀಯ ಸ್ಥಾನ ಪಡೆದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಳೇ ಕಾಲದ ಅಡುಗೆಗಳ ಬಗ್ಗೆ ಮತ್ತು ಅದರ ಹಿಂದಿನ ಕಷ್ಟದ ಬಗ್ಗೆ ಮತ್ತು ಆಹಾರ ಪೌಷ್ಟಿಕಾಂಶಗಳ ಬಗ್ಗೆ ಅರಿವನ್ನು ಮಾಡಿಕೊಡಲಾಯಿತು
ಹೂಗಳ ಜೋಡಣೆಯಲ್ಲಿ ಮುಖ್ಯ ಶಿಕ್ಷಕ ಲವಿನ್ ಲೋಪೆಸ್ ಪ್ರಥಮ ಸ್ಥಾನ, ಮಂಜುಳಾ ದ್ವಿತೀಯ ಸ್ಥಾನ ಪಡೆದುಕೊಂಡರು.
ಶಾಲೆಯ ಮುಖ್ಯ ಶಿಕ್ಷಕ ಲವಿನ್ ಲೋಪೆಸ್ ಶಾಲೆಯಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳ ವರದಿ ಮಂಡಿಸಿದರು.
ಹತ್ತನೇ ತರಗತಿ ವಿದ್ಯಾರ್ಥಿಗಳಾದ ಅಸ್ಮಿನ, ಝಾಕೀಯಾ, ಮಿಸ್ ಬಾ ಮುಭ್ಸಸೀನಾ ಪ್ರಾರ್ಥನೆ ನೆರವೇರಿಸಿದರು.
ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸೈಯದ್ ಸಿಮ್ರಾನ್, ಸಹ ಶಿಕ್ಷಕರುಗಳಾದ ದೀಪಕ್ ವಿ.ಪಿ. ಮಹಮ್ಮದ್ ಶಾಫಿ, ಮಂಜುಳಾ ಗ್ರೀಟಾ, ನೌಫಿಯಾ ಇತರೆ ಶಿಕ್ಷಕರು ಸಿಬ್ಬಂದಿ ವರ್ಗ ಮತ್ತು ಪೋಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
