Advertisement
12:18 PM Monday 4-December 2023

ಅಹ್ಮದಿಯಾ ಮುಸ್ಲಿಂ ಜಮಾಅತ್ ನಿಂದ ಫೆ.12 ರಂದು ವಿಚಾರ ಸಂಕಿರಣ

11/02/2023

ಮಡಿಕೇರಿ ಫೆ.11 : ಅಹ್ಮದಿಯಾ ಮುಸ್ಲಿಂ ಜಮಾಅತ್ ವತಿಯಿಂದ ಫೆ.12 ರಂದು “ಪರಮಾಣು ಯುದ್ಧದ ವಿನಾಶಕಾರಿ ಪರಿಣಾಮಗಳು ಮತ್ತು ಸಂಪೂರ್ಣ ನ್ಯಾಯಕ್ಕಾಗಿ ನಿರ್ಣಾಯಕ ಅಗತ್ಯ” ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ ಎಂದು ಸಂಘಟನೆಯ ಮಡಿಕೇರಿಯ ಅಧ್ಯಕ್ಷ ಜಿ.ಎಂ.ಮೊಹಮ್ಮದ್ ಷರೀಫ್ ತಿಳಿಸಿದ್ದಾರೆ.
ಅಂದು ಬೆಳಗ್ಗೆ 11 ಗಾಳಿಬೀಡುವಿನ ಔರಿಕಾ ಕೂರ್ಗ್, ಲೆಮನ್ ಟ್ರೀ ಹೋಟೆಲ್ ಸಭಾಂಗಣದಲ್ಲಿ ಅಹ್ಮದೀಯ ಮುಸ್ಲಿಂ ಜಮಾತ್ ಅಧ್ಯಕ್ಷ ಜಿ.ಎಂ.ಮೊಹಮ್ಮದ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಭಾಷಣಕಾರರಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ನಿವೃತ್ತ ಏರ್‍ಮಾರ್ಷಲ್ ಕೆ.ಸಿ.ನಂದ ಕಾರ್ಯಪ್ಪ, ಖ್ಯಾತ ವಕೀಲರು ಮತ್ತು ಲೇಖಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಅಹ್ಮದಿಯಾ ಮುಸ್ಲಿಂ ಜನಾತ್ ಮಿಷನರಿ ಜನಬ್ ಎಸ್.ಬಿ.ಹುಸಾಮ್ ಅಹ್ಮದ್, ಸಿಆರ್‍ಪಿಎಫ್ ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಆಫ್ ಪೆÇಲೀಸ್ ಕೆ.ಅರ್ಕೇಶ್, ಬ್ರೈನೋಬ್ರೇನ್ ಮಡಿಕೇರಿ ಕೇಂದ್ರದ ಫ್ಯಾಕಲ್ಟಿ ಮತ್ತು ಫ್ರಾಂಚೈಸಿ ಎಂ. ಕವಿತಾ ಕರುಂಬಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಅಹ್ಮದೀಯ ಮುಸ್ಲಿಂ ಸಮುದಾಯವು ಇಸ್ಲಾಂನಲ್ಲಿನ ಪುನರುಜ್ಜೀವನದ ಆಂದೋಲನವಾಗಿದೆ, ಇದು ಶಾಂತಿ, ಪ್ರೀತಿ, ನ್ಯಾಯ ಮತ್ತು ಜೀವನದ ಪಾವಿತ್ರ್ಯದ ಅತ್ಯಗತ್ಯ ಬೋಧನೆಗಳನ್ನು ಒತ್ತಿಹೇಳುತ್ತದೆ. ಈ ಸಮುದಾಯವು ಈಗ ಪ್ರಪಂಚದ 210 ದೇಶಗಳಲ್ಲಿ ಹರಡಿದೆ. 1889 ರಲ್ಲಿ ಪಂಜಾಬ್‍ನ ಕಾದಿಯಾನ್‍ನಲ್ಲಿ ಹಜರತ್ ಮಿರ್ಜಾ ಗುಲಾಮ್ ಅಹ್ಮದ್ (ಅ) ಅವರು ಈ ಸಂಘಟನೆಯ ಸ್ಥಾಪಕರು.
ಪ್ರಸ್ತುತ ಪರಮೋಚ್ಚ ಆಧ್ಯಾತ್ಮಿಕ ನಾಯಕ ಮಿರ್ಜಾ ಮಸ್ರೂರ್ ಅಹ್ಮದ್ ಅವರ ಸಮರ್ಥ ನಾಯಕತ್ವದಲ್ಲಿ ವಿಶ್ವದಾದ್ಯಂತ ಶಾಂತಿ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ. ಈ ಕಾರ್ಯಕ್ರಮದ ಉದ್ದೇಶವು ಸಮಾಜದ ವಿವಿಧ ಹಂತಗಳ ಜನರನ್ನು ಒಟ್ಟುಗೂಡಿಸುವ ಮೂಲಕ ಸಮಾಜದಲ್ಲಿ ಶಾಂತಿಯನ್ನು ಸಾಧಿಸುವ ದೊಡ್ಡ ಗುರಿಯನ್ನು ಸಾಧಿಸುವುದು ಎಂದು ಹೇಳಿದರು.